ಬಾಲಿವುಡ್​ನ ಸ್ಟಾರ್ ಕಲಾವಿದರ ಬಾಲ್ಯದ ಫೋಟೋ ವೈರಲ್​; ಯಾರೆಂದು ಗುರುತಿಸಬಲ್ಲಿರಾ?

ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಅವರು ತುಂಬ ದಪ್ಪ ಇದ್ದರು. ಆದರೆ ಬಣ್ಣದ ಲೋಕಕ್ಕೆ ಕಾಲಿಡುವಾಗ ಅವರು ವರ್ಕೌಟ್​ ಮಾಡಿ, ಫಿಟ್ನೆಸ್​ ಕಾಪಾಡಿಕೊಂಡರು.

ಬಾಲಿವುಡ್​ನ ಸ್ಟಾರ್ ಕಲಾವಿದರ ಬಾಲ್ಯದ ಫೋಟೋ ವೈರಲ್​; ಯಾರೆಂದು ಗುರುತಿಸಬಲ್ಲಿರಾ?
ಸ್ಟಾರ್​ ಕಿಡ್​ಗಳ ಬಾಲ್ಯದ ಫೋಟೋ
Follow us
|

Updated on: Jun 01, 2023 | 1:41 PM

ಸೋಶಿಯಲ್ ಮೀಡಿಯಾ ಮೂಲಕ ಸೆಲೆಬ್ರಿಟಿಗಳು ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ಹಲವು ಬಗೆಯ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಕಲಾವಿದರ ಬಾಲ್ಯದ ಫೋಟೋಗಳು ಕೂಡ ವೈರಲ್​ ಆಗುತ್ತವೆ. ಅಪರೂಪದ ಫೋಟೋಗಳ ಬಗ್ಗೆ ಅಭಿಮಾನಿಗಳಿಗೆ ಭಾರಿ ಕುತೂಹಲ ಇರುತ್ತದೆ. ಬಾಲಿವುಡ್​ ಕಲಾವಿದರಾದ ಅರ್ಜುನ್​ ಕಪೂರ್​ (Arjun Kapoor) ಮತ್ತು ಜಾನ್ವಿ ಕಪೂರ್​ ಅವರ ಫೋಟೋ ಸಹ ಗಮನ ಸೆಳೆಯುವಂತಿದೆ. ಖ್ಯಾತ ನಿರ್ಮಾಪಕ ಬೋನಿ ಕಪೂರ್​ ಅವರ ಮಕ್ಕಳಾದ ಅರ್ಜುನ್​ ಕಪೂರ್ ಮತ್ತು ಜಾನ್ವಿ ಕಪೂರ್​ (Janhvi Kapoor) ಅವರು ಈಗ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ಅವರಿಬ್ಬರು ಬ್ಯುಸಿ ಆಗಿದ್ದಾರೆ. ಈ ಹಿಂದೆ ಜಾನ್ವಿ ಕಪೂರ್​ ನಟನೆಯ ‘ಮಿಲಿ’ ಚಿತ್ರದ ಬಿಡುಗಡೆ ವೇಳೆ ಅರ್ಜುನ್​ ಕಪೂರ್​ ಅವರು ಈ ಫೋಟೋ ಹಂಚಿಕೊಂಡಿದ್ದರು.

ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಅರ್ಜುನ್​ ಕಪೂರ್​ ಅವರು ತುಂಬ ದಪ್ಪ ಇದ್ದರು. ಆದರೆ ಬಣ್ಣದ ಲೋಕಕ್ಕೆ ಕಾಲಿಡುವಾಗ ಅವರು ವರ್ಕೌಟ್​ ಮಾಡಿ, ಫಿಟ್ನೆಸ್​ ಕಾಪಾಡಿಕೊಂಡರು. ಹಾಗಾಗಿ ಅವರ ಹಳೆಯ ಫೋಟೋಗಳನ್ನು ನೋಡಿದರೆ ಗುರುತು ಸಿಗುವುದು ಕಷ್ಟ. ಇನ್ನು, ಜಾನ್ವಿ ಕಪೂರ್​ ಅವರು ತುಂಬ ಗ್ಲಾಮರಸ್​ ಫೋಟೋಗಳ ಮೂಲಕ ಗಮನ ಸೆಳೆಯುತ್ತಾರೆ. ಅವರು ಬಾಲ್ಯದಲ್ಲಿ ಸಖತ್​ ಕ್ಯೂಟ್​ ಆಗಿದ್ದರು. ಈಗ ಬೇಡಿಕೆಯ ನಟಿಯಾಗಿ ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ: 20 ಕೋಟಿ ಕೊಟ್ಟು ಪ್ರೇಯಸಿ ಮಲೈಕಾ ಅರೋರಾ ಮನೆ ಸಮೀಪವೇ ಸ್ಕೈ ವಿಲ್ಲಾ ಖರೀದಿಸಿದ ಅರ್ಜುನ್​ ಕಪೂರ್​

ಜಾನ್ವಿ ಕಪೂರ್​ಗೆ ಟಾಲಿವುಡ್​ನಲ್ಲೂ ಬೇಡಿಕೆ ಹೆಚ್ಚಿದೆ. ಇತ್ತೀಚೆಗಷ್ಟೇ ಅವರು ಜೂನಿಯರ್ ಎನ್​ಟಿಆರ್ 30ನೇ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆದರು. ಈಗ ಅವರ ಪಾಲಿಗೆ ಮತ್ತೊಂದು ಸಿನಿಮಾ ಅವಕಾಶ ಒಲಿದಿದೆ ಎನ್ನಲಾಗುತ್ತಿದೆ. ಸ್ಟಾರ್ ಕಿಡ್ ಅಖಿಲ್ ಅಕ್ಕಿನೇನಿ ಮುಂದಿನ ಚಿತ್ರದಲ್ಲಿ ಜಾನ್ವಿ ಕಪೂರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಜಾನ್ವಿಗೆ ತೆಲುಗಿನಿಂದ ಸಾಲು ಸಾಲು ಆಫರ್​ಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ಅವರು ದಕ್ಷಿಣ ಭಾರತದಲ್ಲೇ ಬ್ಯುಸಿ ಆದರೂ ಅಚ್ಚರಿ ಏನಿಲ್ಲ. ಜಾನ್ವಿ ಕಪೂರ್ ಸ್ಟಾರ್ ಕಿಡ್. ಆದರೆ, ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ. ಈಗ ಜಾನ್ವಿ ಕಪೂರ್ ಅವರು ದಕ್ಷಿಣ ಭಾರತದಲ್ಲಿ ತಮ್ಮ ಅದೃಷ್ಟಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕ್ರಿಕೆಟರ್​ ಆಗುವ ಕನಸು ಕಂಡ ಬಡ ಹುಡುಗಿಗೆ ಅರ್ಜುನ್​ ಕಪೂರ್​ ಸಹಾಯ; ಭೇಷ್​ ಎಂದ ನೆಟ್ಟಿಗರು

ಜಾನ್ವಿ ಕಪೂರ್ ಅವರು ‘ಧಡಕ್​’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಟಿ ಶ್ರೀದೇವಿ ಹಾಗೂ ಖ್ಯಾತ ನಿರ್ಮಾಪಕ ಬೋನಿ ಕಪೂರ್ ದಂಪತಿಯ ಮಗಳು ಎನ್ನುವ ಕಾರಣಕ್ಕೆ ಜಾನ್ವಿ ಕಪೂರ್​ಗೆ ಬಹುಬೇಗ ಅವಕಾಶ ಸಿಕ್ಕಿತು. ಆದರೆ, ಈವರೆಗೆ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿಲ್ಲ. ಜೂನಿಯರ್ ಎನ್​ಟಿಆರ್​ 30ನೇ ಸಿನಿಮಾ ಮೂಲಕ ಅವರು ಗೆಲ್ಲುವ ನಿರೀಕ್ಷೆಯಲ್ಲಿ ಇದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್
ರೈತರ ಜಮೀನು ಯಾವ ಕಾರಣಕ್ಕೂ ವಕ್ಫ್ ಬೋರ್ಡ್​ಗೆ ಹೋಗಲ್ಲ: ಸಿದ್ದರಾಮಯ್ಯ
ರೈತರ ಜಮೀನು ಯಾವ ಕಾರಣಕ್ಕೂ ವಕ್ಫ್ ಬೋರ್ಡ್​ಗೆ ಹೋಗಲ್ಲ: ಸಿದ್ದರಾಮಯ್ಯ
ಪುನೀತ್ 3ನೇ ವರ್ಷದ ಪುಣ್ಯಸ್ಮರಣೆ; ಅಪ್ಪು ದೇವಾಲಯದಲ್ಲಿ ವಿಶೇಷ ಪೂಜೆ
ಪುನೀತ್ 3ನೇ ವರ್ಷದ ಪುಣ್ಯಸ್ಮರಣೆ; ಅಪ್ಪು ದೇವಾಲಯದಲ್ಲಿ ವಿಶೇಷ ಪೂಜೆ