Raveena Tandon: ಪದವಿ ಶಿಕ್ಷಣ ಪಡೆದ ರವೀನಾ ಟಂಡನ್​ ಮಗಳು ರಾಶಾ ತಡಾನಿ; ಕುಟುಂಬದಲ್ಲಿ ಸಂಭ್ರಮ

Raveena Tandon Daughter: ಚಿಕ್ಕವಳಾಗಿದ್ದ ಮಗಳು ಈಗ ಪದವಿಧರೆ ಆಗುವ ಮಟ್ಟಕ್ಕೆ ಬೆಳೆದು ನಿಂತಿರುವುದನ್ನು ರವೀನಾ ಟಂಡನ್​ ಅವರು ಬೆರಗಿನಿಂದ ನೋಡುತ್ತಿದ್ದಾರೆ. ಒಂದಷ್ಟು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

Raveena Tandon: ಪದವಿ ಶಿಕ್ಷಣ ಪಡೆದ ರವೀನಾ ಟಂಡನ್​ ಮಗಳು ರಾಶಾ ತಡಾನಿ; ಕುಟುಂಬದಲ್ಲಿ ಸಂಭ್ರಮ
ರಾಶಾ ತಡಾನಿ, ರವೀನಾ ಟಂಡನ್​
Follow us
ಮದನ್​ ಕುಮಾರ್​
|

Updated on: Jun 01, 2023 | 11:13 AM

ಬಾಲಿವುಡ್​ ನಟಿ ರವೀನಾ ಟಂಡನ್ (Raveena Tandon)​ ಅವರು ಸಿನಿಮಾ ಕೆಲಸಗಳ ನಡುವೆ ಕುಟುಂಬಕ್ಕೆ ಹೆಚ್ಚು ಸಮಯ ಮೀಸಲಿಡುತ್ತಾರೆ. ಕುಟುಂಬದ ಸದಸ್ಯರ ಪ್ರತಿ ಗೆಲುವನ್ನು ಅವರು ಸಂಭ್ರಮಿಸುತ್ತಾರೆ. ಈಗ ಅವರ ಪುತ್ರಿ ರಾಶಾ ತಡಾನಿ (Rasha Tadani) ಪದವಿ ಶಿಕ್ಷಣ ಪೂರೈಸಿದ್ದಾರೆ. ಈ ಖುಷಿಗೆ ರವೀನಾ ಟಂಡನ್​ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಿಕ್ಕವಳಾಗಿದ್ದ ಮಗಳು ಈಗ ಪದವಿಧರೆ ಆಗುವ ಮಟ್ಟಕ್ಕೆ ಬೆಳೆದು ನಿಂತಿರುವುದನ್ನು ರವೀನಾ ಟಂಡನ್​ ಅವರು ಬೆರಗಿನಿಂದ ನೋಡುತ್ತಿದ್ದಾರೆ. ಒಂದಷ್ಟು ಫೋಟೋಗಳನ್ನು ಹಂಚಿಕೊಂಡು ಅವರು ಸಂಭ್ರಮಿಸಿದ್ದಾರೆ. ಪದವಿ (Graduation) ಪಡೆದ ರಾಶಾ ತಡಾನಿ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಅವರ ಫೋಟೋಗಳು ವೈರಲ್​ ಆಗಿವೆ.

ರವೀನಾ ಟಂಡನ್​ ಅವರು 1995ರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದರು. 2004ರಲ್ಲಿ ಅನಿಲ್​ ತಡಾನಿ ಜೊತೆ ರವೀನಾ ಮದುವೆ ಆದರು. ಈ ದಂಪತಿಗೆ 2005ರಲ್ಲಿ ರಾಶಾ ಜನಿಸಿದರು. ಈಗ ರಾಶಾಗೆ 18 ವರ್ಷ ವಯಸ್ಸು. ಇತ್ತೀಚೆಗೆ ಮಾಧುರಿ ದೀಕ್ಷಿತ್​ ಅವರ ಮಗ ರಿಯಾನ್​ ನೆನೆ ಕೂಡ ಪದವಿ ಪಡೆದರು. ಅಲ್ಲದೇ, ಜೂಹೀ ಚಾವ್ಲಾ ಅವರ ಪುತ್ರಿ ಜಾನ್ವಿ ಕೂಡ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಗ್ರ್ಯಾಜುಯೇಟ್​ ಆದರು.

ಕಷ್ಟಪಟ್ಟು ಬೆಳೆದ ರವೀನಾ ಟಂಡನ್​:

1991ರಲ್ಲಿ ತೆರೆಗೆ ಬಂದ ‘ಪತ್ತರ್​ ಕೆ ಫೂಲ್​’ ಚಿತ್ರ ರವೀನಾ ಅವರ ಮೊದಲ ಸಿನಿಮಾ. 30 ವರ್ಷಗಳ ಕಾಲ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಆರಂಭದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದರು. ಸ್ಟುಡಿಯೋ ನೆಲವನ್ನು ಅವರು ಸ್ವಚ್ಛ ಮಾಡುತ್ತಿದ್ದರು. ಅವರು ಪಟ್ಟ ಕಷ್ಟಗಳು ಹಲವು. ಈ ಬಗ್ಗೆ ರವೀನಾ ಅವರು ಮಾಹಿತಿ ಹಂಚಿಕೊಂಡಿದ್ದರು. ಮಿಡ್​-ಡೇಗೆ ನೀಡಿದ ಸಂದರ್ಶನದಲ್ಲಿ ರವೀನಾ ಈ ವಿಚಾರವನ್ನು ಹೇಳಿಕೊಂಡಿದ್ದರು.

ಇದನ್ನೂ ಓದಿ: ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದುಬಿದ್ದಾಗ ರವೀನಾ ಟಂಡನ್​ಗೆ ಎದುರಾದ ಕಷ್ಟಗಳು ಒಂದೆರಡಲ್ಲ

‘ನಾನು ಸ್ಟುಡಿಯೋ ಫ್ಲೋರ್‌ಗಳನ್ನು ಶುಚಿಗೊಳಿಸುವುದರಿಂದ ಹಿಡಿದು, ಅಲ್ಲಿ ವಾಂತಿಯನ್ನು ಒರೆಸುವವರೆಗೆ ಎಲ್ಲಾ ಕೆಲಸವನ್ನು ಮಾಡಿದ್ದೇನೆ. ಪ್ರಹ್ಲಾದ್ ಕಕ್ಕರ್​ಗೆ ಸಹಾಯಕಳಾಗಿ ಇದ್ದೆ. ನಾನು ಒಂದಿಲ್ಲೊಂದು ವಿಚಾರದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇದ್ದೆ. ನಾನು ನಟಿ ಆಗುತ್ತೇನೆ ಎಂದು ಯೋಚಿಸುತ್ತಲೇ ಬೆಳೆದವಳು ಅಲ್ಲ’ ಎಂದಿದ್ದರ ರವೀನಾ ಟಂಡನ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ