ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರು ಆಗಾಗ ವಿದೇಶಕ್ಕೆ ತೆರಳುತ್ತಾರೆ. ಇತ್ತೀಚೆಗೆ ಅವರು ಲಂಡನ್ನಲ್ಲಿ ಕಾಣಿಸಿಕೊಂಡರು. ಅವರನ್ನು ನೋಡಿದ ಟಿಕ್ಟಾಕ್ ಕಾಂಟೆಂಟ್ ಕ್ರಿಯೇಟರ್ ಝೇನ್ ತಡಾನಿ ಅವರಿಗೆ ಅಚ್ಚರಿ ಆಯಿತು. ಹತ್ತಿರಕ್ಕೆ ಹೋಗಿ ಕರಣ್ ಜೋಹರ್ ಅವರನ್ನು ಝೇನ್ ಮಾತನಾಡಿಸಿದ್ದಾರೆ. ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭೇಟಿಯ ಸಂದರ್ಭದಲ್ಲಿ ಅಂಕಲ್ ಎಂದು ಕರೆದಿದ್ದಕ್ಕೆ ಕರಣ್ ಜೋಹರ್ ಅವರಿಗೆ ಬೇಸರ ಆಗಿದೆ. ಮುನಿಸಿಕೊಂಡು ಅವರು ಮುಂದೆ ಸಾಗಿದ್ದಾರೆ.
ಲಂಡನ್ನ ಬೀದಿಯಲ್ಲಿ ಕರಣ್ ಜೋಹರ್ ಅವರನ್ನು ನೋಡಿ ಕೆಲವರು ಫೋಟೋ ತೆಗೆದುಕೊಳ್ಳುತ್ತಿದ್ದರು. ಝೇನ್ ತಡಾನಿ ಕೂಡ ಕರಣ್ ಅವರನ್ನು ದೂರದಿಂದ ನೋಡಿದರು. ಆ ಖುಷಿಯಲ್ಲಿ, ‘ಓ ಮೈ ಗಾಡ್.. ಈಗ ನಾನು ಕರಣ್ ಜೋಹರ್ ಅವರನ್ನು ಭೇಟಿಯಾದೆ. ಅವರನ್ನು ನಾನು ಏನೆಂದು ಕರೆಯಲಿ? ಕೆಜೋ? ಕರಣ್? ಕರಣ್ ಜೋಹರ್? ಮಿಸ್ಟರ್ ಜೋಹರ್? ಮಿಸ್ಟರ್ ಕರಣ್?’ ಎಂದು ಝೇನ್ ಅವರು ತಮ್ಮನ್ನೇ ಪ್ರಶ್ನೆ ಮಾಡಿಕೊಂಡಿದ್ದಾರೆ.
ಕರೆಯಲು ಇಷ್ಟೆಲ್ಲ ಆಯ್ಕೆಗಳು ಇದ್ದರೂ ಕೂಡ ಝೇನ್ ಅವರು ಕರಣ್ ಜೋಹರ್ ಬಳಿಗೆ ಹೋದಾಗ ‘ಹಾಯ್ ಅಂಕಲ್’ ಎಂದರು. ಇದರಿಂದ ಕರಣ್ ಜೋಹರ್ ಅವರಿಗೆ ಕಿರಿಕಿರಿ ಆಯಿತು. ಅಲ್ಲಿಯವರೆಗೂ ನಗು ನಗುತ್ತಾ ಇದ್ದ ಅವರು ‘ಅಂಕಲ್’ ಎಂಬ ಪದವನ್ನು ಕೇಳಿಸಿಕೊಂಡು ಕೋಪ ಮಾಡಿಕೊಂಡರು. ‘ನೀವು ನನನ್ನು ಅಂಕಲ್ ಅಂತ ಕರೆದ್ರಾ’ ಎಂದು ಸಿಟ್ಟಿನಿಂದ ಪ್ರಶ್ನಿಸಿ, ಅಲ್ಲಿಂದ ಮುಂದೆ ಸಾಗಿದರು.
ಇದನ್ನೂ ಓದಿ: ಅವಕಾಶಕ್ಕಾಗಿ ಕರಣ್ ಜೋಹರ್ ಕಾರಿನ ಹಿಂದೆ ಓಡಿದ್ದ ನಟ ತಹ ಶಾ; ಈಗ ಹೇಗಿದೆ ಜೀವನ?
ಕರಣ್ ಜೋಹರ್ ಅವರಿಗೆ ಕಿರಿಕಿರಿ ಆಗಿದೆ ಎಂಬುದು ಗೊತ್ತಿದ್ದರೂ ಕೂಡ ಝೇನ್ ತಡಾನಿ ಅವರು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುವಾಗ, ‘ಒಟ್ಟಿಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಅಂಕಲ್’ ಎಂದು ಅವರು ಕ್ಯಾಪ್ಷನ್ ಕೂಡ ನೀಡಿದ್ದಾರೆ. ಇದು ವೈರಲ್ ಆಗಿದೆ. ಅಚ್ಚರಿ ಎಂದರೆ ಇದೇ ಪೋಸ್ಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿರುವ ಕರಣ್ ಜೋಹರ್ ಅವರು ‘ನಿಮ್ಮನ್ನು ಭೇಟಿಯಾಗಿದ್ದಕ್ಕೆ ಖುಷಿ ಆಯಿತು’ ಎಂದು ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.