‘ಹಮಾರೆ ಬಾರಾ’ ವಿವಾದ; ಸೆನ್ಸಾರ್ ಮಂಡಳಿ ಓಕೆ ಹೇಳಿದ ಡೈಲಾಗ್​ಗೆ ಹೈಕೋರ್ಟ್ ತಕರಾರು

ಡೈಲಾಗ್ ವಿವಾದಿತ ಎನಿಸಿದರೆ ಸೆನ್ಸಾರ್ ಮಂಡಳಿಯವರೇ ಅದಕ್ಕೆ ಕತ್ತರಿ ಹಾಕುವಂತೆ ಸೂಚಿಸುತ್ತಾರೆ. ‘ಹಮಾರೆ ಬಾರಾ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಮೂರು ಕಡೆ ಕತ್ತೆ ಹಾಕಿ ‘UA’ ಪ್ರಮಾಣ ಪತ್ರ ನೀಡಿದೆ. ಆದರೆ, ಚಿತ್ರದ ಡೈಲಾಗ್​ ಬಗ್ಗೆ ಕೆಲವರು ತಕರಾರು ತೆಗೆದು ಕೋರ್ಟ್ ಮೆಟ್ಟಿಲೇರಿದ್ದಾರೆ.

‘ಹಮಾರೆ ಬಾರಾ’ ವಿವಾದ; ಸೆನ್ಸಾರ್ ಮಂಡಳಿ ಓಕೆ ಹೇಳಿದ ಡೈಲಾಗ್​ಗೆ ಹೈಕೋರ್ಟ್ ತಕರಾರು
ಹಮಾರಾ ಬಾರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jun 10, 2024 | 8:08 AM

ಅನ್ನು ಕಪೂರ್ (Annu Kapoor) ನಟನೆಯ ‘ಹಾಮಾರೆ ಬಾರಾ’ ಸಿನಿಮಾ ಸದ್ಯ ವಿವಾದದ ಕೇಂದ್ರ ಬಿಂದು ಆಗಿದೆ. ಈ ಸಿನಿಮಾದ ಟ್ರೇಲರ್ ರಿಲೀಸ್ ಆದಾಗಿನಿಂದಲೂ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇದ್ದವು. ಈ ಚಿತ್ರಕ್ಕೆ ಅನೇಕರು ತಕಾರರು ತೆಗೆದಿದ್ದಾರೆ. ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್​ಗೆ ಸರ್ಕಾರ ನಿಷೇಧ ಹೇರಿದೆ. ಇನ್ನು, ಬಾಂಬೇ ಹೈಕೋರ್ಟ್​ ಕೂಡ ಜೂನ್ 14ರವರೆಗೆ ಸಿನಿಮಾ ರಿಲೀಸ್​ಗೆ ನಿಷೇಧ ಹೇರಿತ್ತು. ಈ ಮಧ್ಯೆ ಬಾಂಬೆ ಹೈಕೋರ್ಟ್ ಸಿನಿಮಾ ರಿಲೀಸ್​ಗೆ ಅನುಮತಿ ಕೊಟ್ಟಿದೆ. ಅರ್ಜಿದಾರರು ಸಿನಿಮಾದ ಕೆಲವು ಡೈಲಾಗ್​ಗೆ ತಕರಾರು ತೆಗೆದಿದ್ದರು. ಇದನ್ನು ಡಿಲೀಟ್ ಮಾಡಲು ಸಿನಿಮಾ ತಂಡ ಒಪ್ಪಿದ ಬಳಿಕ ರಿಲೀಸ್​ಗೆ ಕೋರ್ಟ್ ಒಪ್ಪಿಗೆ ನೀಡಿದೆ. ಸದ್ಯ ಇದು ಸಾಕಷ್ಟು ಚರ್ಚೆ ಆಗುತ್ತಿದೆ.

ಸೆನ್ಸಾರ್ ಮಂಡಳಿ ರಿಲೀಸ್​ಗೂ ಮೊದಲು ಸಿನಿಮಾ ವೀಕ್ಷಿಸಿ ಪ್ರಮಾಣ ಪತ್ರ ನೀಡುತ್ತದೆ. ಅವರು ನೀಡುವ ಪ್ರಮಾಣ ಪತ್ರದಲ್ಲಿ ಯಾರು ಸಿನಿಮಾ ವೀಕ್ಷಿಸಬಹುದು, ಯಾರು ಸಿನಿಮಾ ವೀಕ್ಷಿಸಬಾರದು ಎಂಬುದು ಉಲ್ಲೇಖ ಆಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಡೈಲಾಗ್ ವಿವಾದಿತ ಎನಿಸಿದರೆ ಸೆನ್ಸಾರ್ ಮಂಡಳಿಯವರೇ ಅದಕ್ಕೆ ಕತ್ತರಿ ಹಾಕುವಂತೆ ಸೂಚಿಸುತ್ತಾರೆ. ‘ಹಮಾರೆ ಬಾರಾ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಮೂರು ಕಡೆ ಕತ್ತೆ ಹಾಕಿ ‘UA’ ಪ್ರಮಾಣ ಪತ್ರ ನೀಡಿದೆ. ಆದರೆ, ಚಿತ್ರದ ಡೈಲಾಗ್​ ಬಗ್ಗೆ ಕೆಲವರು ತಕರಾರು ತೆಗೆದು ಕೋರ್ಟ್ ಮೆಟ್ಟಿಲೇರಿದ್ದಾರೆ.

ಸಿಬಿಎಫ್​ಸಿಯಲ್ಲಿ (ಸೆನ್ಸಾರ್ ಮಂಡಳಿ) ಚಿತ್ರ ಪಾಸ್ ಆಗಿದೆ. ಆದರೆ, ಕೋರ್ಟ್​ ಸಿನಿಮಾ ಡೈಲಾಗ್​ಗೆ ಕತ್ತರಿ ಹಾಕುವಂತೆ ಹೇಳಿದೆ. ಇದೊಂದು ಅಪರೂಪದ ಪ್ರಕರಣ ಎಂಬುದು ಕೆಲವರ ಅಭಿಪ್ರಾಯ. ಸಾಮಾನ್ಯವಾಗಿ, ಸಿನಿಮಾ ಬಿಡುಗಡೆಯನ್ನು ತಡೆಯಲು ಯಾರಾದರೂ ನ್ಯಾಯಾಲಯಕ್ಕೆ ಹೋದಾಗ, ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಅನುಮತಿ ನೀಡಲಾಗಿದೆ ಎಂದು ಉಲ್ಲೇಖಿಸಿ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಆದರೆ, ಇಲ್ಲಿ ಸೆನ್ಸಾರ್ ಮಂಡಳಿಯ ಕೆಲಸವನ್ನು ಕೋರ್ಟ್ ಮಾಡಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

‘ಸಿಬಿಎಫ್‌ಸಿಯಿಂದ ಸರಿಯಾಗಿ ಪ್ರಮಾಣೀಕರಿಸಲ್ಪಟ್ಟ ಸಿನಿಮಾಗಳನ್ನು ಬಿಡುಗಡೆಯನ್ನು ನಿಲ್ಲಿಸಲು ಈ ಅರ್ಜಿಯಲ್ಲಿರುವಂತಹ ವ್ಯಕ್ತಿಗೆ ಅನುಮತಿ ನೀಡಿದರೆ ಅದು ನಿರ್ಮಾಪಕರನ್ನು ಸುಲಿಗೆ ಮಾಡಲು ಪ್ರೋತ್ಸಾಹಿಸುತ್ತದೆ’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಸಿಬಿಎಸ್​ಇ ಮಂಡಳಿಯವರು ಈಗಾಗಲೇ ಸಿನಿಮಾ ವೀಕ್ಷಿಸಿ ಮೂರು ಕಡೆಗಳಲ್ಲಿ ಕತ್ತರಿ ಹಾಕುವಂತೆ ಸೂಚಿಸಿದೆ. ಇದಕ್ಕೆ ಸಿನಿಮಾ ತಂಡದವರು ಕೂಡ ಒಪ್ಪಿದ್ದರು. ಆದಾಗ್ಯೂ ಚಿತ್ರಕ್ಕೆ ಹಿನ್ನಡೆ ಆಗಿದೆ.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ಕುರಿತ ‘ಹಮಾರೆ ಬಾರಾ’ ಸಿನಿಮಾ ಕರ್ನಾಟಕದಲ್ಲಿ ನಿಷೇಧ 

ಕರ್ನಾಟಕದಲ್ಲೂ ಸಿನಿಮಾಗೆ ನಿಷೇಧ ಹೇರಲಾಗಿದೆ. ರಾಜ್ಯ ಸರ್ಕಾರಗಳು ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಕೆಲವು ಸಿನಿಮಾಗಳನ್ನು ಬ್ಯಾನ್ ಮಾಡಿವೆ. ನಿಷೇಧವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ಸಿನಿಮಾ ತಂಡಗಳಿಗೆ ಜಯ ದೊರೆತಿದೆ. ಒಂದೊಮ್ಮೆ ಕರ್ನಾಟಕ ರಾಜ್ಯ ಸರ್ಕಾರದ ನಿಷೇಧದ ವಿರುದ್ಧ ಚಿತ್ರತಂಡ ನ್ಯಾಯಾಲಯಕ್ಕೆ ಹೋದರೆ ಗೆಲುವು ಸಿಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:07 am, Mon, 10 June 24

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ