ವಿರಾಟ್ ಕೊಹ್ಲಿ ಔಟ್ ಆದ ಬಳಿಕ ಅನುಷ್ಕಾ ಶರ್ಮಾ ಎಷ್ಟು ಅಪ್ಸೆಟ್ ಆದ್ರು ನೋಡಿ
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಮೈದಾನಕ್ಕೆ ಇಳಿಯುತ್ತಿದ್ದಂತೆ ಬೌಂಡರಿ ಬಾರಿಸಿದರು. ಆ ಬಳಿಕ ಅವರು ಕ್ಯಾಚ್ ಕೊಟ್ಟು ಔಟ್ ಆದರು. ಇದು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಬೇಸರ ಮೂಡಿಸಿತು. ಅನುಷ್ಕಾ ಶರ್ಮಾ ಕೂಡ ಸಾಕಷ್ಟ ಬೇಸರಗೊಂಡರು.
ನಟಿ ಅನುಷ್ಕಾ ಶರ್ಮಾ (Anushka Sharma) ಹಾಗೂ ವಿರಾಟ್ ಕೊಹ್ಲಿ ಸದ್ಯ ಅಮೆರಿಕದಲ್ಲಿದ್ದಾರೆ. ಟೀಂ ಇಂಡಿಯಾ ಪರ ವಿರಾಟ್ ಅವರು ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ ವಿಶ್ವಕಪ್ ಆಡುತ್ತಿದ್ದಾರೆ. ಪಂದ್ಯಗಳ ವೀಕ್ಷಣೆಗೆ ಅನುಷ್ಕಾ ಕೂಡ ತೆರಳುತ್ತಿದ್ದಾರೆ. ವಿರಾಟ್ ಕೊಹ್ಲಿಯಿಂದ ಅಂದುಕೊಂಡ ರೀತಿಯಲ್ಲಿ ಆಟ ಬರುತ್ತಿಲ್ಲ. ಅವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೂರು ಬಾಲ್ಗೆ ಕೇವಲ ನಾಲ್ಕು ರನ್ ಕಲೆ ಹಾಕಿದ್ದಾರೆ. ವಿರಾಟ್ ಬೇಗ ಔಟ್ ಆಗಿದ್ದಕ್ಕೆ ಅನುಷ್ಕಾ ಶರ್ಮಾ ಬೇಸರ ಮಾಡಿಕೊಂಡರು. ಈ ವಿಡಿಯೋ ವೈರಲ್ ಆಗಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಮೈದಾನಕ್ಕೆ ಇಳಿಯುತ್ತಿದ್ದಂತೆ ಬೌಂಡರಿ ಬಾರಿಸಿದರು. ಆ ಬಳಿಕ ಅವರು ಕ್ಯಾಚ್ ಕೊಟ್ಟು ಔಟ್ ಆದರು. ಇದು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಬೇಸರ ಮೂಡಿಸಿತು. ಅನುಷ್ಕಾ ಶರ್ಮಾ ಕೂಡ ಸಾಕಷ್ಟ ಬೇಸರಗೊಂಡರು. ಈ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.
Anushka Sharma’s reaction after Virat Kohli out on just 4 runs
📷: Hotstar#INDvPAK #PAKvIND #T20WorldCup2024 #TeamIndia #T20WorldCup #T20WC2024 #ViratKohli #AnushkaSharma pic.twitter.com/qWL2c5BLdl
— SportsTiger (@The_SportsTiger) June 9, 2024
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡ ಅಂದುಕೊಂಡ ರೀತಿಯಲ್ಲಿ ಸ್ಕೋರ್ ಮಾಡಲು ಸಾಧ್ಯವಾಗಿಲ್ಲ. 19 ಓವರ್ಗೆ 119 ರನ್ ಗಳಿಸಿ ಆಲ್ಔಟ್ ಆಯಿತು. ಅತ್ತ ಪಾಕಿಸ್ತಾನ ಉತ್ತಮ ಆರಂಭವನ್ನೇ ಕಂಡಿತು. ಆದರೆ, ಅಂತಿಮವಾಗಿ 113 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇದು ಗೆಲ್ಲಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ 741 ರನ್ಗಳನ್ನು ಮರೆತು ಬಿಡುವುದು ಒಳಿತು..!
ವಿರಾಟ್ ಹಾಗೂ ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ ನ್ಯೂಯಾರ್ಕ್ ಸಿಟಿಯಲ್ಲಿ ಕಾಣಿಸಿಕೊಂಡಿದ್ದರು. ಅವರ ಜೊತೆ ಸೆಲ್ಫಿ ತೆಗೆದುಕೊಳ್ಳೋಕೆ ಎಲ್ಲರೂ ಮುಗಿಬಿದ್ದರು. ಇನ್ನು, ಜಿಮ್ನಲ್ಲೂ ಇಬ್ಬರೂ ಒಟ್ಟಾಗಿ ವರ್ಕೌಟ್ ಮಾಡುತ್ತಿದ್ದಾರೆ. ಅನುಷ್ಕಾಗೆ ವಮಿಕಾ ಜನಿಸಿ ಕೆಲವು ವರ್ಷ ಕಳೆದಿದೆ. ಈಗ ಗಂಡು ಮಗು ಜನಿಸಿದ್ದು ಅಕಾಯ್ ಎಂದು ನಾಮಕರಣ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:57 am, Mon, 10 June 24