AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಝಹೀರ್ ಇಖ್ಬಾಲ್ ಜೊತೆ ಜೂನ್ 23ಕ್ಕೆ ಸೋನಾಕ್ಷಿ ಮದುವೆ; ಸಲ್ಲು ಗೆಳೆಯನ ಜೊತೆ ವಿವಾಹ

ಸೋನಾಕ್ಷಿ ಹಾಗೂ ಝಹೀರ್ ಹಲವು ವರ್ಷಗಳಿಂದ ಸುತ್ತಾಟ ನಡೆಸುತ್ತಿದ್ದರೂ ಪ್ರೀತಿ ವಿಚಾರವನ್ನು ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇವರು ಈಗ ವಿವಾಹ ಆಗೋ ನಿರ್ಧಾರ ತೆಗೆದುಕೊಂಡಿದ್ದಾರೆ.

ಝಹೀರ್ ಇಖ್ಬಾಲ್ ಜೊತೆ ಜೂನ್ 23ಕ್ಕೆ ಸೋನಾಕ್ಷಿ ಮದುವೆ; ಸಲ್ಲು ಗೆಳೆಯನ ಜೊತೆ ವಿವಾಹ
ಝಹೀರ್-ಸೋನಾಕ್ಷಿ
ರಾಜೇಶ್ ದುಗ್ಗುಮನೆ
|

Updated on: Jun 10, 2024 | 10:57 AM

Share

ನಟ ಝಹೀರ್ ಇಕ್ಬಾಲ್ (Zaheer Iqbal) ಜೊತೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ಜೂನ್ 23ರಂದು ಮದುವೆ ಆಗಲಿದ್ದಾರೆ. ಮುಂಬೈನಲ್ಲಿ ಈ ವಿವಾಹ ನಡೆಯಲಿದೆ. ಆಪ್ತರು ಹಾಗೂ ಕುಟುಂಬದವರು ಮಾತ್ರ ಮದುವೆಯಲ್ಲಿ ಭಾಗಿ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರದಲ್ಲಿ ಜೋಡಿ ಮೌನ ವಹಿಸಿದೆ. ಸೋನಾಕ್ಷಿ ಹಾಗೂ ಝಹೀರ್ ಹಲವು ವರ್ಷಗಳಿಂದ ಸುತ್ತಾಟ ನಡೆಸುತ್ತಿದ್ದರು. ಕೊನೆಗೂ ಇವರು ಮದುವೆ ಆಗುತ್ತಿದ್ದಾರೆ.

ಸೋನಾಕ್ಷಿ ಹಾಗೂ ಝಹೀರ್ ಹಲವು ವರ್ಷಗಳಿಂದ ಸುತ್ತಾಟ ನಡೆಸುತ್ತಿದ್ದರೂ ಪ್ರೀತಿ ವಿಚಾರವನ್ನು ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇವರು ಈಗ ವಿವಾಹ ಆಗೋ ನಿರ್ಧಾರ ತೆಗೆದುಕೊಂಡಿದ್ದಾರೆ. ಕೆಲವೇ ಆಪ್ತರು, ಕುಟುಂಬದವರು ಈ ಮದುವೆಯಲ್ಲಿ ಭಾಗಿ ಆಗಲಿದ್ದಾರೆ. ಇವರ ವಿವಾಹ ಆಮಂತ್ರಣಪತ್ರ ಮ್ಯಾಗಜಿನ್ ರೀತಿಯಲ್ಲಿ ತಯಾರಿಸಲಾಗಿದೆಯಂತೆ. ‘ಗಾಳಿಸುದ್ದಿ ನಿಜ’ ಎಂದು ಆಮಂತ್ರಣ ಪತ್ರದಲ್ಲಿ ಬರೆಯಲಾಗಿದೆ.

ಮುಂಬೈನ ಬಾಸ್ಟಿಯನ್​ನಲ್ಲಿ ಈ ವಿವಾಹ ನಡೆಯಲಿದೆ. ಅತಿಥಿಗಳು ಸಾಂಪ್ರದಾಯಿಕ ಉಡುಗೆ ಧರಿಸಿ ಬರಲು ಸೂಚಿಸಲಾಗಿದೆ. ಮದುವೆಯಲ್ಲಿ ಮೊಬೈಲ್ ಬಳಕೆ ನಿಷೇಧಿಸುವ ಆಲೋಚನೆಯಲ್ಲಿ ಈ ಜೋಡಿ ಇದೆ. ಈ ಮೂಲಕ ಮದುವೆ ಫೋಟೋ ಹಾಗೂ ವಿಡಿಯೋ ಲೀಕ್ ಆಗದಂತೆ ನೋಡಿಕೊಳ್ಳಲು ಇವರು ಮುಂದಾಗಿದ್ದಾರೆ.

ಇತ್ತೀಚೆಗೆ ಸೋನಾಕ್ಷಿ ಸಿನ್ಹಾ ಅವರು ‘ದಿ ಕಪಿಲ್ ಶರ್ಮಾ ಶೋಗೆ ಬಂದಿದ್ದರು. ಈ ವೇಳೆ ಅವರಿಗೆ ಮದುವೆ ಪ್ಲ್ಯಾನ್ ಬಗ್ಗೆ ಕೇಳಲಾಗಿದೆ. ಇದಕ್ಕೆ ಸೋನಾಕ್ಷಿ ಅವರು ‘ಗಾಯದ ಮೇಲೆ ಉಪ್ಪು ಹಾಕುತ್ತಿದ್ದೀರಿ’ ಎಂದು ನಿಗೂಢಾರ್ಥದಲ್ಲಿ ಮಾತನಾಡಿದ್ದರು.

ಇದನ್ನೂ ಓದಿ: 90 ಕೆಜಿ ಇದ್ದ ಸೋನಾಕ್ಷಿ ಸಿನ್ಹಾ; 30 ಕೆಜಿ ದೇಹ ತೂಕ ಇಳಿಸಿಕೊಂಡಿದ್ದು ಹೇಗೆ?  

ಝಹೀರ್ ಅವರನ್ನು ಸೋನಾಕ್ಷಿ ಭೇಟಿ ಮಾಡಿದ್ದು ಸಲ್ಮಾನ್ ಖಾನ್ ಮೂಲಕ. ಸಲ್ಲು ಹಾಗೂ ಝಹೀರ್ ಗೆಳೆಯರು. ಭೇಟಿ ಬಳಿಕ ಸೋನಾಕ್ಷಿ ಹಾಗೂ ಝಹೀರ್ ಮಧ್ಯೆ ಫ್ರೆಂಡ್​ಶಿಪ್ ಬೆಳೆಯಿತು. ಆ ಬಳಿಕ ಅದು ಪ್ರೀತಿಗೆ ತಿರುಗಿತು. ‘ಡಬಲ್ ಎಕ್ಸ್​ಎಲ್’ ಸಿನಿಮಾದಲ್ಲಿ ಇವರು ಒಟ್ಟಾಗಿ ನಟಿಸಿದ್ದರು. ಝಹೀರ್ ಅವರು ಚಿತ್ರರಂಗಕ್ಕೆ ಬಂದಿದ್ದು 2019ರಲ್ಲಿ.  ಈ ಮೊದಲು ಕೆಲವು ಹೀರೋಯಿನ್​ಗಳ ಜೊತೆ ಅವರು ಡೇಟ್ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.