90 ಕೆಜಿ ಇದ್ದ ಸೋನಾಕ್ಷಿ ಸಿನ್ಹಾ; 30 ಕೆಜಿ ದೇಹ ತೂಕ ಇಳಿಸಿಕೊಂಡಿದ್ದು ಹೇಗೆ?
2010ರಲ್ಲಿ ಸೋನಾಕ್ಷಿ ಸಿನ್ಹಾ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಸಲ್ಮಾನ್ ಖಾನ್ ಸೋನಾಕ್ಷಿ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಸೋನಾಕ್ಷಿ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಸಖತ್ ದಪ್ಪ ಇದ್ದರು. ಅವರ ದೇಹದ ತೂಕ 90 ಕೆಜಿ ಇತ್ತು.
‘ದಬಾಂಗ್’ ಸಿನಿಮಾ (Dabang Movie ಮೂಲಕ ಬಾಲಿವುಡ್ನಲ್ಲಿ ಹಲ್ ಚಲ್ ಸೃಷ್ಟಿಸಿದವರು ಸೋನಾಕ್ಷಿ ಸಿನ್ಹಾ. ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟ ಸಿನಿಮಾ ಇದು. ಇದಾದ ಬಳಿಕ ಅವರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಇಂದು (ಜೂನ್ 2) ಅವರಿಗೆ ಜನ್ಮದಿನದ ಸಂಭ್ರಮ. ಅವರಿಗೆ ‘ಹೀರಾಮಂಡಿ’ ಸೀರಿಸ್ನಿಂದ ದೊಡ್ಡ ಮಟ್ಟದಲ್ಲಿ ಖ್ಯಾತಿ ಸಿಕ್ಕಿದೆ. ಸೋನಾಕ್ಷಿ ಸಿನ್ಹಾ ಅವರು ಈಗ ತೆಳ್ಳಗಾಗಿದ್ದಾರೆ. ಆದರೆ, ಈ ಮೊದಲು ಅವರು ಆ ರೀತಿ ಇರಲಿಲ್ಲ.
2010ರಲ್ಲಿ ಸೋನಾಕ್ಷಿ ಸಿನ್ಹಾ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಸಲ್ಮಾನ್ ಖಾನ್ ಸೋನಾಕ್ಷಿ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಸೋನಾಕ್ಷಿ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಸಖತ್ ದಪ್ಪ ಇದ್ದರು. ಅವರ ದೇಹದ ತೂಕ 90 ಕೆಜಿ ಇತ್ತು. ಅವರು 30 ಕೆಜಿಗೂ ಅಧಿಕ ತೂಕವನ್ನು ಇಳಿಸಿಕೊಂಡಿದ್ದಾರೆ. ಎಲ್ಲರೂ ಅವರನ್ನು ಸಾಕಷ್ಟು ಟ್ರೋಲ್ ಮಾಡುತ್ತಿದ್ದರು. ಈ ರೀತಿ ಟ್ರೋಲ್ ಮಾಡುವವರ ಬಾಯಿ ಮುಚ್ಚಿಸಿದರು ಸೋನಾಕ್ಷಿ.
ಸೋನಾಕ್ಷಿ ಸಿನ್ಹಾ ಅವರು ಜಿಮ್ ಸೇರಿದರು. ನಿತ್ಯ ಒಂದಷ್ಟು ಸಮಯವನ್ನು ಅವರು ಜಿಮ್ನಲ್ಲಿ ಕಳೆಯುತ್ತಿದ್ದರು. ಹಲವು ರೀತಿಯ ವರ್ಕೌಟ್ನ ಅವರು ಮಾಡಿದರು. ಇದರಿಂದ ಅವರು ಹಂತ ಹಂತವಾಗಿ ತೂಕ ಕಳೆದುಕೊಳ್ಳುತ್ತಾ ಬಂದರು. ಸಲ್ಮಾನ್ ಖಾನ್ ಅವರನ್ನು ನೋಡಿ ಸೋನಾಕ್ಷಿ ಸಾಕಷ್ಟು ಸ್ಫೂರ್ತಿ ಪಡೆದರಂತೆ. ಅವರ ಬದುಕನ್ನು ಸಲ್ಮಾನ್ ಬದಲಿಸಿದರು. ಈಗ ಸೋನಾಕ್ಷಿ ಬ್ಯೂಟಿಫುಲ್ ಹೀರೋಯಿನ್ಗಳಲ್ಲಿ ಒಬ್ಬರು.
ದೇಹದ ಸೈಜ್, ಶೇಪ್ ಬಗ್ಗೆ ಟೀಕೆ ಮಾಡುವವರಿಗೆ ಸೋನಾಕ್ಷಿ ಉತ್ತರ ಕೊಟ್ಟಿದ್ದರು. ‘ಆಮ್ಲೆಟ್ ತಿನ್ನಬೇಕು ಎನಿಸಿದರೆ ಮಾಡಿಕೊಂಡು ತಿನ್ನಿ. ಅದನ್ನು ಬಿಟ್ಟು, ಮೊಟ್ಟೆಯ ಶೇಪ್ ಹಾಗಿದೆ, ಮೊಟ್ಟೆಯ ಶೇಪ್ ಹೀಗಿದೆ ಎಂದೆಲ್ಲ ಹೇಳಬೇಡಿ’ ಎಂದು ಕೋರಿದ್ದರು ಅವರು.
ಇದನ್ನೂ ಓದಿ: ‘ಹೀರಾಮಂಡಿ’ ವಿಚಾರದಲ್ಲಿ ಸುಳ್ಳು ಹೇಳಿದ್ರಾ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ
ಈಗ ಸೋನಾಕ್ಷಿ ಸಿನ್ಹಾ ಅವರು ತಮಗಾಗಿ ಜಿಮ್ ಮಾಡುತ್ತಾರೆ. ನಿತ್ಯವೂ ಜಿಮ್ ಹಾಗೂ ಯೋಗಕ್ಕಾಗಿ ಸಮಯ ಮೀಸಲಿಡುತ್ತಾರೆ. ಈ ಮೂಲಕ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 30-45 ನಿಮಿಷ ಕಾರ್ಡಿಯೋ ಮಾಡುತ್ತಾರೆ. 20 ನಿಮಿಷ ವಾಕಿಂಗ್ ಮಾಡುತ್ತಾರೆ. ಈ ಮೂಲಕ ಸೋನಾಕ್ಷಿ ಆರೋಗ್ಯಯುತವಾಗಿದ್ದಾರೆ.
ಸೋನಾಕ್ಷಿ ಸಿನ್ಹಾ ಅವರಿಗೆ ಇತ್ತೀಚೆಗೆ ವೆಬ್ ಸೀರಿಸ್ನಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ‘ದಹಾದ್’ ವೆಬ್ ಸೀರಿಸ್ನಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.