
ಈ ಫೋಟೋದಲ್ಲಿರುವ ನಟಿ ದಕ್ಷಿಣದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರು ತಮ್ಮ ಮುದ್ದಾದ ಸ್ವಭಾವದಿಂದ ಅನೇಕ ಹುಡುಗರನ್ನು ಮೋಡಿ ಮಾಡಿದ್ದಾರೆ. ಅವರು ಮುದ್ದಾದ ನಗುವಿನ ಸುಂದರಿ. ಅವರ ಬಾಲ್ಯದ ಫೋಟೋ ವೈರಲ್ ಆಗಿದೆ. ಆ ನಟಿ ತುಂಬಾನೇ ಸುಂದರಿ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಅಂತ ಅನಿಸುತ್ತದೆ. ಅವರು ಯಾರೆಂದು ನಿಮಗೆ ಇನ್ನೂ ನೆನಪಿದೆಯೇ? ಅವರು ಬಹಳ ಪ್ರಸಿದ್ಧ ಮಲಯಾಳಂ ನಟಿ ನಜ್ರಿಯಾ ನಜೀಮ್.
ಇತ್ತೀಚೆಗೆ ಸೆಲೆಬ್ರಿಟಿಗಳ ಬಾಲ್ಯದ ಫೋಟೋ ವೈರಲ್ ಆಗುತ್ತದೆ. ಆ ನಟಿ ಯಾರು ಎಂದು ಪತ್ತೆ ಹಚ್ಚಲು ಸಾಧ್ಯವೇ ಎಂಬ ಚಾಲೆಂಜ್ ಸೋಶಿಯಲ್ ಮೀಡಿಯಾದಲ್ಲಿ ಎದುರಾಗುತ್ತವೆ. ಕೆಲವು ಅಭಿಮಾನಿಗಳು ಇದನ್ನು ಸರಿಯಾಗಿ ಹೇಳಿದರೆ ಇನ್ನೂ ಕೆಲವರು ತಪ್ಪಾಗಿ ಊಹಿಸುತ್ತಾರೆ.
ಮೇಲಿನ ಫೋಟೋದಲ್ಲಿ ಕಾಣುವ ಮಹಿಳೆ ತೆಲುಗಿನಲ್ಲಿ ಕೇವಲ ಒಂದು ಚಿತ್ರ ಮಾತ್ರ ಮಾಡಿದ್ದಾರೆ. ಮಲಯಾಳಂನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇವರು ಕನ್ನಡದಲ್ಲಿ ಯಾವುದೇ ಚಿತ್ರ ಮಾಡಿಲ್ಲ. ಆದರೆ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಸೂಕ್ಷ್ಮದರ್ಶಿನಿ’ ಸಿನಿಮಾ ಸೂಪರ್ ಹಿಟ್ ಆಯಿತು.
ಇದನ್ನೂ ಓದಿ:ಸುರೇಶ್ ರೈನಾಗೆ ಓಂ ಸಿನಿಮಾ ರೀತಿ ಲಾಂಗ್ ಹಿಡಿಯೋದು ಕಲಿಸಿದ ಶಿವಣ್ಣ
ಮಲಯಾಳಂನಲ್ಲಿ ಈ ನಟಿ ಭಾರಿ ಕ್ರೇಜ್ ಇದೆ. ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಜೊತೆ ನಜ್ರಿಯಾ ನಜೀಮ್ ನಟಿಸಿದ್ದರು. ನಜ್ರಿಯಾ ನಜೀಮ್ ಈ ಚಿತ್ರದ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದರು. ಆ ಚಿತ್ರದ ಮೂಲಕ ಅವರು ತೆಲುಗು ಪ್ರೇಕ್ಷಕರ ನೆಚ್ಚಿನ ನಾಯಕಿಯಾದರು. ಈ ಚಿತ್ರದ ನಂತರ ಅವರು ಬೇರೆ ಯಾವುದೇ ತೆಲುಗು ಚಿತ್ರದಲ್ಲಿ ನಟಿಸಲಿಲ್ಲ. ತಮಿಳಿನಲ್ಲೂ ಅವರು ದೊಡ್ಡ ಹೆಸರು ಮಾಡಿದ್ದಾರೆ. ಅವರು ನಟಿಸಿರೋ ‘ರಾಜ ರಾಣಿ’ ಸೂಪ್ ಹಿಟ್ ಆಯಿತು.
ಈ ಪ್ರತಿಭಾನ್ವಿತ ನಟಿ ಸತತ ಚಿತ್ರಗಳನ್ನು ಮಾಡುವ ಮೂಲಕ ಮಲಯಾಳಂನಲ್ಲಿ ಸದ್ದು ಮಾಡುತ್ತಿದ್ದಾರೆ. ಈ ನಟಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ ತನ್ನ ಮುದ್ದಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತವೆ. ಇತ್ತೀಚೆಗೆ ಅವರು ತಾವು ಸಾಕಷ್ಟು ತೊಂದರೆ ಅನುಭವಿಸಿದ್ದಾಗಿ ಹೇಳಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ