AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೇ ತಿಂಗಳಲ್ಲಿ ಬರೋಬ್ಬರಿ 55 ಕೆಜಿ ತೂಕ ಇಳಿಸಿಕೊಂಡ ಶೆಹನಾಜ್ ಗಿಲ್; ಹೇಗೆ ಸಾಧ್ಯವಾಯ್ತು?

Shehnaaz Gill: ಶೆಹನಾಜ್ ಗಿಲ್, ಹಿಂದಿ ಟಿವಿ ಮತ್ತು ಸಿನಿಮಾ ಲೋಕದಲ್ಲಿ ಪರಿಚಿತ ಮುಖ. ಬಿಗ್​ಬಾಸ್​ನಲ್ಲಿಯೂ ಭಾಗಿ ಆಗಿದ್ದ ಶೆಹನಾಜ್ ಗಿಲ್ ಅವರು ಸಲ್ಮಾನ್ ಖಾನ್​ ಅವರಿಗೆ ಸಹೋದರಿ ಸಮಾನ. ಅವರು ಈಗ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಆರು ತಿಂಗಳಲ್ಲಿ ಬರೋಬ್ಬರಿ 55 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ಆರೇ ತಿಂಗಳಲ್ಲಿ ಬರೋಬ್ಬರಿ 55 ಕೆಜಿ ತೂಕ ಇಳಿಸಿಕೊಂಡ ಶೆಹನಾಜ್ ಗಿಲ್; ಹೇಗೆ ಸಾಧ್ಯವಾಯ್ತು?
Shehnaz Gill
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Jun 01, 2025 | 5:16 PM

Share

ಬಿಗ್ ಬಾಸ್ (Bigg Boss) ಸ್ಪರ್ಧಿ ಹಾಗೂ ನಟಿ ಶೆಹನಾಜ್ ಗಿಲ್ ಅವರು ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡರು. ಅವರು ಈ ಮೊದಲು ಬಿಗ್ ಬಾಸ್ ಸ್ಪರ್ಧಿಯನ್ನು ಪ್ರೀತಿಸಿದ್ದರು ಮತ್ತು ಅವರು ಹೃದಯಘಾತದಿಂದ ಮೃತಪಟ್ಟರು. ಇದು ಅವರಿಗೆ ಸಾಕಷ್ಟು ನೋವನ್ನು ತಂದಿತ್ತು. ಶೆಹನಾಜ್ ಗಿಲ್ ಅವರು ಈಗ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಆರು ತಿಂಗಳಲ್ಲಿ ಬರೋಬ್ಬರಿ 55 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಔಷಧಗಳನ್ನು ತೆಗೆದುಕೊಂಡು ತೂಕ ಉಳಿಸಿಕೊಳ್ಳುವುದನ್ನು ನೀವು ನೋಡಬಹುದು. ಆದರೆ, ಶೆಹನಾಜ್ ಗಿಲ್ ಅವರು ಹಾಗಲ್ಲ. ಅವರು ವ್ಯಾಯಮ ಮಾಡಿದ್ದಾರೆ. ಜೊತೆಗೆ ಕಠಿಣವಾಗಿ ಡಯಟ್ ನಿಯಮ ಫಾಲೋ ಮಾಡಿದ್ದಾರೆ. ಈ ಕಾರಣಕ್ಕೆ ಅವರ ದೇಹದ ತೂಕದಲ್ಲಿ ಭಾರಿ ಬದಲಾವಣೆ ಕಾಣಿಸಿದೆ.

ಸಾಮಾನ್ಯವಾಗಿ ಕೆಲವು ಆಹಾರಗಳ ದೇಹದ ತೂಕ ಹೆಚ್ಚಲು ಕಾರಣ ಆಗುತ್ತವೆ. ಅದರಲ್ಲಿ ಮಾಂಸಾಹಾರ, ಚಾಕೋಲೇಟ್, ಐಸ್ ಕ್ರೀಮ್ ಹಾಗೂ ಸಿಹಿ ಪದಾರ್ಥಗಳು ಮುಖ್ಯವಾದವು. ಇವುಗಳ ಸೇವನೆಯನ್ನು ಅವರು ಬಿಟ್ಟೇ ಬಿಟ್ಟಿದ್ದಾರೆ. ಇದರಿಂದ ಅವರ ದೇಹದಲ್ಲಿ ಕೊಬ್ಬಿನ ನಿಯಂತ್ರಣ ಆಗಿದೆ.

ಇದನ್ನೂ ಓದಿ:ಸೌತ್ ಬಳಿಕ ಬಾಲಿವುಡ್​ನಲ್ಲೂ ಶ್ರೀಲೀಲಾಗೆ ಸಿಗುತ್ತಿದೆ ಸ್ಟಾರ್ ನಟಿ ಪಟ್ಟ

ಹಾಗಾದರೆ ಕೇವಲ ಊಟದಿಂದ ಮಾತ್ರವೂ ಎಲ್ಲವೂ ಆಗುವುದಿಲ್ಲ ಎಂಬುದು ಅವರಿಗೆ ಸರಿಯಾಗಿ ಗೊತ್ತಿತ್ತು. ಈ ಕಾರಣದಿಂದಲೇ ಶೆಹನಾಜ್ ಅವರು ನಿತ್ಯವೂ ಜಿಮ್​ನಲ್ಲಿ ವರ್ಕ್ ಮಾಡಿದ್ದಾರೆ. ಹೆಸರು ಬೇಳೆ ದೋಸಾ, ಮೇಥಿ ಪರಾಠಗಳನ್ನು ಅವರು ಬ್ರೇಕ್​ ಪಾಸ್ಟ್​ಗೆ ತಿನ್ನುತ್ತಿದ್ದರು. ಹೆಚ್ಚು ಪ್ರೋಟಿನ್ ಯುಕ್ತ ಆಹಾರ ಸೇವನೆ ಅವರ ಕಡೆಯಿಂದ ಆಯಿತು.

ಸಾಮಾನ್ಯವಾಗಿ ತೂಕ ಕಳೆದುಕೊಳ್ಳುವಾಗ ಕೆಲವರು ಸ್ಫೂರ್ತಿದಾಯಕವಾಗಿ ಕಾಣಿಸುತ್ತಾರೆ. ಆದರೆ, ಶೆಹನಾಜ್ ಅವರಿಗೆ ಅವರೇ ಸ್ಫೂರ್ತಿ ಕೊಟ್ಟುಕೊಂಡಿದ್ದಾರೆ. ಬೇರೆ ಯಾರ ಸಹಾಯವೂ ಪಡೆಯದೇ ಅವರಿಗೆ ಅವರೇ ತೂಕ ಇಳಿಸಿಕೊಳ್ಳುವ ನಿರ್ಧಾರಕ್ಕೆ ಬಂದರು.

ಶೆಹನಾಜ್ ಅವರು 2019ರಲ್ಲಿ ‘ಬಿಗ್ ಬಾಸ್ ಹಿಂದಿ ಸೀಸನ್ 13’ರಲ್ಲಿ ಭಾಗಿ ಆದರು. ಇದರಲ್ಲಿ ಅವರು ಎರಡನೇ ರನ್ನರ್ ಅಪ್ ಆದರು. ಸಿದ್ದಾರ್ಥ್ ಶುಕ್ಲಾ ಜೊತೆ ಅವರಿಗೆ ಪ್ರೀತಿ ಮೂಡಿತು. 141 ದಿನ ಈ ಶೋ ನಡೆಯಿತು. ಸಿದ್ದಾರ್ಥ್ ಶುಕ್ಲಾ ಅವರು ಆ ಬಳಿಕ ಹೃದಯಘಾತದಿಂದ ಮೃತಪಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ