ಈ ಫೋಟೋದಲ್ಲಿರೋ ಬಾಲಕಿ ಈಗ ಸ್ಟಾರ್ ನಟಿ; ರಾತ್ರೋರಾತ್ರಿ ಫೇಮಸ್ ಆದರು

|

Updated on: May 02, 2024 | 2:25 PM

ಮಮಿತಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2017ರಲ್ಲಿ. ‘ಸರ್ವೋಪರಿ ಪಲಕ್ಕಾರನ್’ ಅವರ ನಟನೆಯ ಮೊದಲ ಸಿನಿಮಾ. ನಂತರ ಹಲವು ಸಿನಿಮಾಗಳಲ್ಲಿ ಮಮಿತಾ ನಟಿಸಿದರು. ಅವರನ್ನು ಸ್ಟಾರ್ ಮಾಡಿದ್ದು ‘ಪ್ರೇಮಲು’ ಚಿತ್ರ. ಇದಕ್ಕಾಗಿ ಅವರು ಆರು ವರ್ಷ ಕಾಯಬೇಕಾಯಿತು.

ಈ ಫೋಟೋದಲ್ಲಿರೋ ಬಾಲಕಿ ಈಗ ಸ್ಟಾರ್ ನಟಿ; ರಾತ್ರೋರಾತ್ರಿ ಫೇಮಸ್ ಆದರು
ಯುವ ನಟಿ
Follow us on

ಸೆಲೆಬ್ರಿಟಿಗಳ ಬಾಲ್ಯದ ಫೋಟೋ ಸಿಕ್ಕರೆ ಫ್ಯಾನ್ಸ್ ಅದನ್ನು ಖುಷಿಯಿಂದ ಹಂಚಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಇದು ಯಾವ ಸೆಲೆಬ್ರಿಟಿ ಎಂದು ಗುರುತಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಲಾಗುತ್ತದೆ. ಈಗ ಓರ್ವ ನಟಿಯ ಫೋಟೋ ವೈರಲ್ ಆಗಿದೆ. ಇವರು ರಾತ್ರೋರಾತ್ರಿ ಸ್ಟಾರ್ ಆದರು. ಅವರು ಸೌತ್ ಇಂಡಿಯಾದ ಕ್ರಶ್ ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ಯಾರು ಅವರು? ಮಮಿತಾ ಬೈಜು (Mamitha Baiju). ‘ಪ್ರೇಮಲು’ ಸಿನಿಮಾ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ.

ಮಮಿತಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2017ರಲ್ಲಿ. ‘ಸರ್ವೋಪರಿ ಪಲಕ್ಕಾರನ್’ ಅವರ ನಟನೆಯ ಮೊದಲ ಸಿನಿಮಾ. ನಂತರ ಹಲವು ಸಿನಿಮಾಗಳಲ್ಲಿ ಮಮಿತಾ ನಟಿಸಿದರು. ಅವರನ್ನು ಸ್ಟಾರ್ ಮಾಡಿದ್ದು ‘ಪ್ರೇಮಲು’ ಚಿತ್ರ. ಇದಕ್ಕಾಗಿ ಅವರು ಆರು ವರ್ಷ ಕಾಯಬೇಕಾಯಿತು. ಈಗ ಪರ ಭಾಷೆಯಿಂದಲೂ ಅವರಿಗೆ ಆಫರ್​ಗಳು ಬರುತ್ತಿದೆ. ‘ರೆಬೆಲ್’ ಹೆಸರಿನ ತಮಿಳು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ‘ಪ್ರೇಮಲು’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಮಾಹಿತಿ ಕೊಟ್ಟ ನಿರ್ಮಾಪಕ ಫಹಾದ್ ಫಾಸಿಲ್

ಸದ್ಯ ಮಮಿತಾ ಅವರ ಬಾಲ್ಯದ ಫೋಟೋ ವೈರಲ್ ಆಗುತ್ತಿದೆ. ಬಾಲ್ಯದಲ್ಲಿ ಕೂಡ ಅವರು ಸಖತ್ ಕ್ಯೂಟ್ ಆಗಿದ್ದರು. ಅವರಿಗೆ 2020ರಲ್ಲಿ ‘ಕೇರಳ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್’ನಲ್ಲಿ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ ಸಿಕ್ಕಿದೆ. ವಿಶೇಷ ಎಂದರೆ ಮಮಿತಾಗೆ ಈಗಿನ್ನೂ 22 ವರ್ಷ. ಈ ವಯಸ್ಸಿನಲ್ಲೇ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ.

‘ಪ್ರೇಮಲು’ ಸಿನಿಮಾ ಫೆಬ್ರವರಿಯಲ್ಲಿ ಥಿಯೇಟರ್​ನಲ್ಲಿ ಬಿಡುಗಡೆ ಆಯಿತು. ಈ ಚಿತ್ರ ಸೂಪರ್ ಹಿಟ್ ಆಗಿದೆ. ಪಕ್ಕಾ ಕಾಲೇಜು ಲವ್​ ಸ್ಟೋರಿ ಹಾಗೂ ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಿಂದ ಮಮಿತಾ ದೊಡ್ಡ ಮಟ್ದ ಜನಪ್ರಿಯತೆ ಪಡೆದಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಗೆಲುವು ಕಂಡ ಬಳಿಕ ಅದನ್ನು ಉಳಿಸಿಕೊಂಡು ಹೋಗೋದು ದೊಡ್ಡ ಚಾಲೆಂಜ್. ಈ ಚಾಲೆಂಜ್​ ಮಮಿತಾಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.