Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಖಾಸಗಿ ಸಂತೋಷವನ್ನು ಮೊಬೈಲ್​ನಲ್ಲಿ…’: ಸೆಲೆಬ್ರಿಟಿಗಳ ಕಷ್ಟ ವಿವರಿಸಿದ ಜಗ್ಗೇಶ್​

‘ಯಾರು ನನ್ನ ಕೇಡು ಬಯಸುತ್ತಾರೋ.. ಸೆಲಿಬ್ರಿಟಿ ಬದುಕು ಎಂದರೆ ಜೀವನ ಪರ್ಯಂತ ಜೈಲುವಾಸ ಅಥವಾ ಮಹಡಿ ಮನೆಯ ಒಂಟಿ ಭಿಕ್ಷುಕನ ಜೀವನ ಈ ಸೆಲಿಬ್ರಿಟಿಯ ಬದುಕು’ ಎಂದು ನಟ, ‘ನವರಸ ನಾಯಕ’ ಜಗ್ಗೇಶ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ದೀರ್ಘ ಬರಹದಲ್ಲಿ ಅವರು ಸೆಲೆಬ್ರಿಟಿಗಳ ಜೀವನದ ಬಗ್ಗೆ ವಿವರಣೆ ನೀಡಿದ್ದಾರೆ.

‘ನನ್ನ ಖಾಸಗಿ ಸಂತೋಷವನ್ನು ಮೊಬೈಲ್​ನಲ್ಲಿ...’: ಸೆಲೆಬ್ರಿಟಿಗಳ ಕಷ್ಟ ವಿವರಿಸಿದ ಜಗ್ಗೇಶ್​
ಜಗ್ಗೇಶ್
Follow us
ಮದನ್​ ಕುಮಾರ್​
|

Updated on: May 02, 2024 | 6:45 PM

ನಟ ಜಗ್ಗೇಶ್​ (Jaggesh) ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ಜೀವನದ ಅನುಭವಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರೊಂದು ಹೊಸ ಪೋಸ್ಟ್​ ಮಾಡಿದ್ದಾರೆ. ಸೆಲೆಬ್ರಿಟಿಗಳ (Celebrity) ಬದುಕು ಯಾವ ರೀತಿ ಇರುತ್ತದೆ ಎಂಬುದನ್ನು ಅವರು ಇದರಲ್ಲಿ ವಿವರಿಸಿದ್ದಾರೆ. ಸೆಲೆಬ್ರಿಟಿಗಳು ಸಾಮಾನ್ಯರಂತೆ ಬದುಕುವುದು ಕಷ್ಟ ಎಂದು ಜಗ್ಗೇಶ್​ ಹೇಳಿದ್ದಾರೆ. ‘ಸೆಲೆಬ್ರಿಟಿ ಆಗಲು ಎಲ್ಲರೂ ಒಂದಿಲ್ಲಾ ಒಂದು ರೀತಿ ಯತ್ನಿಸುತ್ತಾರೆ. ಕೆಲವರು ನಟ-ನಟಿ, ಕೆಲವರು ರಂಗಕಲಾವಿದರಾಗಿ, ಕೆಲವರು ಟಿವಿ, ಕೆಲವರು ತಮ್ಮ ಮೊಬೈಲ್ ಮೂಲಕ, ಮತ್ತೆಕೆಲವರು ಯೂಟ್ಯೂಬ್ ಮೂಲಕ.. ಒಟ್ಟಾರೆ ಹೇಗಾದರು ಸರಿ ಸೆಲಿಬ್ರಿಟ್ ಆಗಲೇ ಬೇಕು. ಆಗದಿದ್ದರೆ ಡಿಪ್ರೆಷನ್​ಗೆ ಒಳಗಾಗುತ್ತಾರೆ’ ಎನ್ನವುದರೊಂದಿಗೆ ಜಗ್ಗೇಶ್​ ಬರಹ ಆರಂಭಿಸಿದ್ದಾರೆ.

‘ಆದರೆ ನಾನು ಸೆಲಿಬ್ರಿಟಿ ಕನಸು ಕಂಡವನಲ್ಲ. ಕಟ್ಟಿಕೊಂಡ ಮಡದಿ ಹಾಗು ಸಾಧಿಸಿ ಸಾಯಬೇಕು ಎಂಬ ಸಾಮಾನ್ಯ ಮನುಷ್ಯನ ಕನಸು ಮಾತ್ರ ಆಗಿತ್ತು. ಯಾವ ದೇವರ ವರವೋ ಯಾವ ಗುರುವಿನ ಕೃಪೆಯೋ ಅನ್ನದ ಸೂರಿನ ಜೊತೆ ದೊಡ್ಡ ಹೆಸರು ಪ್ರಾಪ್ತವಾಯಿತು. ಜೊತೆಗೆ ನನ್ನ ವೈಯಕ್ತಿಕ ಸಂತೋಷ ಕಮರಿಹೋಯಿತು. ಎಲ್ಲರಂತೆ ಎಲ್ಲಾ ಕಡೆ ಎಲ್ಲಾ ಸಂತೋಷ ನೋಡುವ ಯೋಗ ಇಲ್ಲವಾಯಿತು’ ಎಂದಿದ್ದಾರೆ ಜಗ್ಗೇಶ್​.

ಇದನ್ನೂ ಓದಿ: ‘ನಂಬಿಕೆ ದ್ರೋಹದ ಕಾಲಮಾನ’; ಫೋಟೋ ತೋರಿಸಿ ಜಗ್ಗೇಶ್​ ಹೇಳಿದ್ದಿಷ್ಟು..

‘ಪ್ರತಿದಿನ ಯಾರು ಏನು ಹೇಳುತ್ತಾರೋ, ಯಾರು ತಪ್ಪು ಕಂಡು ಹಂಗಿಸುತ್ತಾರೋ, ನಮ್ಮ ಬಾಯಿಂದ ಬಂದ ಅರಿಯದ ಮಾತು ಬಳಸಿ ಯಾರು ಲೈಕ್ಸ್ ಪಡೆದು ಗಹಗಹಿಸಿ ನಗುತ್ತಾರೋ, ನನ್ನ ಖಾಸಗಿ ಸಂತೋಷವನ್ನು ಕಾಣದಂತೆ ಮೊಬೈಲ್​ನಲ್ಲಿ ಚಿತ್ರಿಸಿ ಲೈಕ್ಸ್​ಗಾಗಿ ಸಂಭ್ರಮಿಸೋ ಪುಣ್ಯಾತ್ಮರು ಬರುತ್ತಾರೋ, ಯಾರು ನನ್ನ ಕೇಡು ಬಯಸುತ್ತಾರೋ.. ಒಟ್ಟಾರೆ ಸೆಲಿಬ್ರಿಟಿ ಬದುಕು ಜೀವನ ಪರ್ಯಂತ ಜೈಲುವಾಸ ಬದುಕು ಅಥವಾ ಮಹಡಿ ಮನೆಯ ಒಂಟಿ ಭಿಕ್ಷುಕನ ಜೀವನ ಸೆಲಿಬ್ರಿಟಿಯ ಬದುಕು’ ಎಂದು ಜಗ್ಗೇಶ್​ ಬರೆದುಕೊಂಡಿದ್ದಾರೆ.

‘ಇದನ್ನೆಲ್ಲಾ ಬದಿಗೊತ್ತಿ ನಾನು ಎಲ್ಲರಂತೆ ಸ್ವತಂತ್ರ ಜೀವಿಯೋ ಅಥವಾ ಪಂಜರದಿಂದ ಹಾರಿ ಪರಿಸರ ಸವಿಯುವ ಪಕ್ಷಿಯಂತೆ ಒಬ್ಬಂಟಿಯಾಗಿ ಆನಂದ ಪಡೆಯೋ ಯತ್ನ ಮಾಡುತ್ತಿದ್ದೇನೆ. ಇದರಲ್ಲಿ ಪೂರ್ಣಸಂತೋಷ ಸಿಗುತ್ತಿದೆಯೇ? ಸತ್ಯವಾಗಿಯೂ ಇಲ್ಲ. ಏನೋ ಒಂದೆಕಡೆ ಗೂಬೆಯಂತೆ ಇರಬಾರದು ಎಂಬ ಸಣ್ಣ ಪರಿವರ್ತನೆ ಅಷ್ಟೇ. ಈ ಸೆಲಿಬ್ರಿಟಿಯ ಬದುಕು. ನಾನು ನನ್ನ ಸಹಾಯಕ ರಸ್ತೆಯಲ್ಲಿ ಸಿಕ್ಕ ತಾಟಿಲಿಂಗು ವ್ಯಾಪಾರಿಯ ಜೊತೆ ವ್ಯಾಪಾರ ಮುಗಿಸಿ ಅವನಿಗೆ ಸಂತೋಷ ಆಗುವಂತೆ ಅವನ ಬಂಡವಾಳ ಎರಡು ಹಣ್ಣಿಗೆ ನೀಡಿದಾಗ ಅವನ ಕಂಗಳ ಆನಂದಭಾಷ್ಪ ಶಿವನ ಜಲಾಭಿಷೇಕದಂತೆ ಬಾಸವಾಯಿತು. ಸೆಲಿಬ್ರಿಟಿಯ ಬದುಕು ಕಂಡು ನೀವು ಸೆಲಿಬ್ರಿಟಿ ಆಗಬೇಕಾ ಇಲ್ಲಾ ಸೆಲಿಬ್ರಿಟಿಯ ಮೇಲೆ ಪ್ರೀತಿ ಕರುಣೆ ತೋರಬೇಕಾ? ದೇವರು ವಾಸಮಾಡೋ ನಿಮ್ಮ ಹೃದಯಕ್ಕೆ ಸೇರಿದ್ದು. ಜೀವನ ನಾಟಕರಂಗ. ಸಮಾಜವೇ ರಂಗಮಂದಿರ, ದೇವರೇ ಸೂತ್ರದಾರ. ಅಭಿಮಾನಿಗಳೇ ಬಂಧುಮಿತ್ರರು’ ಎಂದು ಜಗ್ಗೇಶ್​ ಅವರು ಈ ಬರಹ ಪೂರ್ಣಗೊಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ
ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಡಾಕ್ಟ್ರಮ್ಮ ತಂಗಿಯಾಗಿ ಸಿಕ್ಕಿರೋದು ಬಹಳ ಖುಷಿಯಾಗ್ತಿದೆ: ಧನಂಜಯ ಅತ್ತಿಗೆ
ಡಾಕ್ಟ್ರಮ್ಮ ತಂಗಿಯಾಗಿ ಸಿಕ್ಕಿರೋದು ಬಹಳ ಖುಷಿಯಾಗ್ತಿದೆ: ಧನಂಜಯ ಅತ್ತಿಗೆ
ಪಾಕಿಸ್ತಾನದಲ್ಲಿ ಕಿಂಗ್ ಕೊಹ್ಲಿ ಕ್ರೇಝ್: ಕರಾಚಿಯಲ್ಲಿ ಮೊಳಗಿದ RCB ಹರ್ಷೋದ್
ಪಾಕಿಸ್ತಾನದಲ್ಲಿ ಕಿಂಗ್ ಕೊಹ್ಲಿ ಕ್ರೇಝ್: ಕರಾಚಿಯಲ್ಲಿ ಮೊಳಗಿದ RCB ಹರ್ಷೋದ್