Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಂಬಿಕೆ ದ್ರೋಹದ ಕಾಲಮಾನ’; ಫೋಟೋ ತೋರಿಸಿ ಜಗ್ಗೇಶ್​ ಹೇಳಿದ್ದಿಷ್ಟು..

ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ‘ರಂಗನಾಯಕ’ ಸಿನಿಮಾವನ್ನು ಟ್ರೋಲ್​ ಮಾಡಲಾಯಿತು. ಬಳಿಕ ಜಗ್ಗೇಶ್​ ಅವರು ರಾಯರ ಸನ್ನಿಧಿಯಲ್ಲಿ ನಿಂತು ಜನರ ಬಳಿ ಕ್ಷಮೆ ಕೇಳಿದರು. ಈಗ ಅವರು ದೀರ್ಘವಾದ ಬರಹ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಕೆಲವು ಅಪರೂಪದ ಫೋಟೋಗಳನ್ನು ಕೂಡ ಅಪ್​ಲೋಡ್​ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

‘ನಂಬಿಕೆ ದ್ರೋಹದ ಕಾಲಮಾನ’; ಫೋಟೋ ತೋರಿಸಿ ಜಗ್ಗೇಶ್​ ಹೇಳಿದ್ದಿಷ್ಟು..
ಜಗ್ಗೇಶ್​
Follow us
ಮದನ್​ ಕುಮಾರ್​
|

Updated on: Mar 21, 2024 | 4:38 PM

ನಟ ಜಗ್ಗೇಶ್ (Jaggesh) ಅವರು ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲಿ ಬ್ಯುಸಿ ಆಗಿರುವ ಅವರು ರಾಯರ ಭಕ್ತರು ಕೂಡ ಹೌದು. ಬಡತನದ ಕುಟುಂಬದಿಂದ ಬಂದ ಅವರು ನಂತರ ಸ್ಟಾರ್​ ನಟನಾಗಿ ಬೆಳೆದರು. ಈಗಲೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ‘ರಂಗನಾಯಕ’ (Ranganayaka) ಸಿನಿಮಾ ಬಿಡುಗಡೆಯಾಗಿ ಮುಗ್ಗರಿಸಿತು. ಆ ಚಿತ್ರದ ಕೆಲವು ದೃಶ್ಯ ಮತ್ತು ಡೈಲಾಗ್​ಗಳನ್ನು ಇಟ್ಟುಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಮಾಡಲಾಯಿತು. ಬಳಿಕ ಜಗ್ಗೇಶ್​ ಅವರು ಮಂತ್ರಾಲಯದಲ್ಲಿ ಜನರ ಕ್ಷಮೆ ಕೇಳಿದರು. ಈ ಘಟನೆಗಳ ಬೆನ್ನಲ್ಲೇ ಅವರು ಹೊಸ ಪೋಸ್ಟ್​ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ತೋರಿಸಿ, ತಮ್ಮ ಜೀವನದ ನೆನಪಿನ ಪುಟಗಳನ್ನು ಅವರು ತೆರೆದಿದ್ದಾರೆ. ಜಗ್ಗೇಶ್ ಹಂಚಿಕೊಂಡ ಬರಹ ಇಲ್ಲಿದೆ..

‘ಹಳ್ಳಿ ಹುಡುಗನ ಕನಸು. ಈ ಚಿತ್ರಗಳ ಮೆಲುಕು ಹಾಕಿ ಮತ್ತೊಮ್ಮೆ ನೋಡಿ ನನಗನ್ನಿಸಿದ್ದು ಇವನು ಇಲ್ಲಿಂದ ಬೆಳೆದವ ಎಂದರೆ ಸಿನಿಮಾ ಕಥೆ ಓಕೆ, ಆದರೆ ನಿಜಜೀವನದಲ್ಲಿ ಯಾರು ನಂಬರು. ಬೇರೆಯವರು ಯಾಕೆ? ನನಗೇ ಅನುಮಾನ ಬಂತು! ನಾನು ಹುಟ್ಟಿದ್ದು ಸಣ್ಣ ಕುಟುಂಬ, ಆದರೆ ದೊಡ್ಡ ಕನಸು. ನಟನಾಗಬೇಕು, ಅದು ಅತಿರಥರ 1980ರ ಕಾಲದಲ್ಲಿ! ನೀವೇ ಹೇಳಿ.. ಮಗನ ಈ ಕನಸನ್ನು ಯಾವ ಅಪ್ಪ ಒಪ್ಪುತ್ತಾನೆ? ಹಾಗಾಗಿ ಬೂಟಿನ ಏಟು ಬಾಲ್ಯದ ನಿತ್ಯ ಪೂಜೆಯಾಗಿತ್ತು. ಅಮ್ಮನ ಕಣ್ಣೀರು ನಿತ್ಯದ ಅಭಿಷೇಕವಾಗಿತ್ತು’ ಎಂದು ಜಗ್ಗೇಶ್​ ಬರಹ ಆರಂಭಿಸಿದ್ದಾರೆ.

‘ಸಿಟ್ಟು, ರೋಷ, ದ್ವೇಷ ನನ್ನದಾಗಿತ್ತು. ಇದು ನನ್ನ ಬದುಕಾಗಿತ್ತು! ಈಗ ನೆನೆದರೆ ನನ್ನ ಬಗ್ಗೆ ಅನುಮಾನ. ನಾನು ಇಷ್ಟು ದೂರ ನಡೆದುಬಂದನೆ ಎಂದು? ಸಾಧಿಸುವವರಿಗೆ, ದಾರಿ ಕಾಣದವರಿಗೆ, ಅಸಹಾಯಕರಾದವರಿಗೆ, ಕೊನೆಯ ಘಟ್ಟ ಎಂದುಕೊಂಡವರಿಗೆ ನನ್ನ ಬದುಕಿನಿಂದ ಸಣ್ಣ ಧೈರ್ಯದ ಚಿಲುಮೆ ಚಿಮ್ಮಲಿ. ಅವರ ಮನ ನನ್ನ ನೋಡಿ ಎಲ್ಲವೂ ಸಾಧ್ಯ, ಯಾವುದೂ ಅಸಾಧ್ಯವಲ್ಲ ಎಂದುಕೊಳ್ಳಲಿ. ಶ್ರೇಷ್ಟ ಚಿಂತನೆಯ ಮನಸಿದ್ದರೆ ಮಾರ್ಗ’ ಎಂದು ಜಗ್ಗೇಶ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ರಂಗನಾಯಕ ಚಿತ್ರಕ್ಕೂ ನನಗೂ ಸಂಬಂಧವಿಲ್ಲ, ಅದು ನನ್ನ ಚಿತ್ರವಲ್ಲ’: ಜಗ್ಗೇಶ್

‘ಎಲ್ಲಾ ಸಾಧಿಸಿದ ನನಗೆ ಒಂದು ದುಃಖವಿದೆ. ಅಂದು ಹಠಮಾಡಿದ ಮಗ ಈಗ ಸಾಧಿಸಿದ್ದಾನೆ. ನೋಡಲು ಅಪ್ಪ-ಅಮ್ಮ ಇಲ್ಲ. ಇಂದಿನ ಸಮಯಕ್ಕೆ ಸಾಧನೆ ಶ್ರಮ ತಪಸ್ಸು ಯಶಸ್ಸು ಕಾಮಿಡಿ ಪೀಸು ಅಂದರೆ ಫಾರ್​ ಗ್ರ್ಯಾಂಟೆಡ್​. ಅಣಕ ಅಪಮಾನವೇ ಯಶಸ್ಸು ಎಂಬ ಕಲ್ಪನೆಯ ಕಾಲದಲ್ಲಿ ಬಂದು ನಿಂತಿರುವೆ. ಮನಸ್ಸು ಎಂಬ ಮೊಸರನ್ನು ರಾಯರು ಎಂಬ ಕಡೆಗೋಲಿನಿಂದ ಕಡೆದು ತಿಳಿಯಾದ ಮಜ್ಜಿಗೆ ಮಾಡಿಕೊಂಡು ಪ್ರಶಾಂತವೆಂಬ ಸರೋವರ ಮಾಡಿಕೊಂಡಿರುವೆ ಚಂಚಲ ಮನಸ್ಸನ್ನು. ಇಂಥ ಶ್ರಮದ ಬದುಕು ಕಟ್ಟಿಕೊಂಡವ ನಾನು. ನನ್ನಂತೆ ಎಲ್ಲರೂ ಬೆಳೆಯಿರಿ ಎಂದು ಅಪ್ಪಿದರೆ, ಮುತ್ತಿಡುವಂತೆ ನಟಿಸಿ ವಿಷ ಇಟ್ಟು ಕೊಂದು ಸಂಭ್ರಮಿಸುವರು. ಇದರ ಮತ್ತೊಂದು ಹೆಸರೇ ನಂಬಿಕೆ ದ್ರೋಹದ ಕಾಲಮಾನ’ ಎಂದು ಜಗ್ಗೇಶ್​ ಪೋಸ್ಟ್​ ಮಾಡಿದ್ದಾರೆ.

ಜಗ್ಗೇಶ್​ ಇನ್​ಸ್ಟಾಗ್ರಾಮ್​ ಪೋಸ್ಟ್​:

‘ಇಂದು ಶ್ರಮಕ್ಕೆ ಬೆಲೆಯಿಲ್ಲ. ಬೆಳಿಗ್ಗೆ ಹುಟ್ಟಿ ಮಧ್ಯಾಹ್ನ ಬೆಳೆದು ರಾತ್ರಿ ಸಾಯುವ ಕಾಲಘಟ್ಟ. ಬೆವರು ಸುರಿಸದೇ ಬೆಳೆಯದೇ ಅನುಭವ ಹಂಚುವ ಜಗತ್ತು. ನನ್ನ 40 ವರ್ಷದ ಬೆಳವಣಿಗೆ ಬಳಕೆಗೆ ಉಪಯುಕ್ತ ಅನ್ನಿಸಿದರೆ ಅನುಸರಿಸಿ, ಬೆಳೆಯಿರಿ, ಉಳಿಯಿರಿ. ಜನ್ಮಕೊಟ್ಟವರ ಸಮಾಜದ ಮುತ್ತು, ರತ್ನ, ಹವಳ, ಪಚ್ಚೆ, ವಜ್ರವಾಗಿ. ಹಳ್ಳಿಯಿಂದ ಡೆಲ್ಲಿಯ ಬೆವರಿನ ಪ್ರಯಾಣದ ನಿಮ್ಮ ಮನೆಯ ಬಂಧುವಿಗೆ ಹರಸುತ್ತಿರಿ’ ಎಂದು ಜಗ್ಗೇಶ್​ ಅವರು ಬರಹ ಪೂರ್ಣಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ
ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಡಾಕ್ಟ್ರಮ್ಮ ತಂಗಿಯಾಗಿ ಸಿಕ್ಕಿರೋದು ಬಹಳ ಖುಷಿಯಾಗ್ತಿದೆ: ಧನಂಜಯ ಅತ್ತಿಗೆ
ಡಾಕ್ಟ್ರಮ್ಮ ತಂಗಿಯಾಗಿ ಸಿಕ್ಕಿರೋದು ಬಹಳ ಖುಷಿಯಾಗ್ತಿದೆ: ಧನಂಜಯ ಅತ್ತಿಗೆ
ಪಾಕಿಸ್ತಾನದಲ್ಲಿ ಕಿಂಗ್ ಕೊಹ್ಲಿ ಕ್ರೇಝ್: ಕರಾಚಿಯಲ್ಲಿ ಮೊಳಗಿದ RCB ಹರ್ಷೋದ್
ಪಾಕಿಸ್ತಾನದಲ್ಲಿ ಕಿಂಗ್ ಕೊಹ್ಲಿ ಕ್ರೇಝ್: ಕರಾಚಿಯಲ್ಲಿ ಮೊಳಗಿದ RCB ಹರ್ಷೋದ್