AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಸೆಟ್​ನಲ್ಲಿ ನಿರ್ದೇಶಕ ನನ್ನ ಮೇಲೆ ಹಲ್ಲೆ ಮಾಡಿದ್ದರು: ನಟಿ ಮಮಿತಾ

Director Bala: ನಿರ್ದೇಶಕರು ನಟ-ನಟಿಯರಿಗೆ ಹೊಡೆದು ನಟನೆ ಮಾಡಿಸುತ್ತಿದ್ದರು ಎಂಬ ಮಾತು ಹಿಂದೆಲ್ಲ ಕೇಳಲು ಸಿಗುತ್ತಿದ್ದವು, ಇದೀಗ ಸ್ಟಾರ್ ನಿರ್ದೇಶಕರೊಬ್ಬರು ಸೆಟ್​ನಲ್ಲಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ನಟಿಯೊಬ್ಬರು ಹೇಳಿಕೊಂಡಿದ್ದಾರೆ.

ಸಿನಿಮಾ ಸೆಟ್​ನಲ್ಲಿ ನಿರ್ದೇಶಕ ನನ್ನ ಮೇಲೆ ಹಲ್ಲೆ ಮಾಡಿದ್ದರು: ನಟಿ ಮಮಿತಾ
ಮಂಜುನಾಥ ಸಿ.
|

Updated on: Feb 29, 2024 | 3:29 PM

Share

ಹಲವು ಹಿರಿಯ ಸಿನಿಮಾ ನಿರ್ದೇಶಕರು ನಟ-ನಟಿಯರಿಗೆ ಹೊಡೆದು ನಟನೆ ಮಾಡಿಸುತ್ತಿದ್ದರು. ಹಲವು ಹಿರಿಯ ನಟ-ನಟಿಯರು ತಮ್ಮನ್ನು ಆ ನಿರ್ದೇಶಕ ಹೊಡೆದಿದ್ದು, ಬೈದಿದ್ದರು ಎಂದು ಈಗ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ. ಆದರೆ ಈಗ ಸಮಯ ಬದಲಾಗಿದೆ. ಸಿನಿಮಾ ಸೆಟ್​ನಲ್ಲಿ ನಟ-ನಟಿಯರ ಮೇಲೆ ಮಾತ್ರವಲ್ಲ ಯಾರ ಮೇಲೆಯೂ ಹಲ್ಲೆ ಮಾಡುವಂತಿಲ್ಲ ಅಂಥಹಾ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಇದರ ನಡುವೆ ಇತ್ತೀಚೆಗೆ ನಟಿಯೊಬ್ಬರು (Actress) ನೀಡಿದ ಸಂದರ್ಶನದಲ್ಲಿ ಸ್ಟಾರ್ ನಿರ್ದೇಶಕರೊಬ್ಬರು ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಸೂಪರ್ ಹಿಟ್ ತಮಿಳು ಸಿನಿಮಾಗಳಾದ ‘ಸೇತು’ (ಕನ್ನಡದಲ್ಲಿ ಹುಚ್ಚ) , ‘ಪಿತಾಮಗನ್’, ‘ನಾನ್ ಕಡವುಲ್’, ‘ಪರದೇಸಿ’, ‘ನಂದ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಕ ಬಾಲಾ ತಮ್ಮ ಹೊಸ ಸಿನಿಮಾದ ಚಿತ್ರೀಕರಣದ ವೇಳೆ ನಟಿಯೊಬ್ಬರನ್ನು ನಿಂದಿಸಿ ಹಲ್ಲೆ ಸಹ ಮಾಡಿದ್ದಾರಂತೆ. ಈ ಬಗ್ಗೆ ನಟಿ ಸ್ವತಃ ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಬಾಲಾ ನಿರ್ದೇಶನ ಮಾಡುತ್ತಿರುವ ‘ವಾನಂಗನ್’ ಸಿನಿಮಾದಲ್ಲಿ ಮಲಯಾಳಂ ನಟಿ ಮಮಿತಾ ಬಿಜು ನಟಿಸಿದ್ದರು. ಸಿನಿಮಾದ ಚಿತ್ರೀಕರಣ ಪ್ರಾರಂಭವಾದಾಗ ಹಾಡೊಂದರ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ಬಾಲಾ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿಯೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿಯೂ ಸಂದರ್ಶನವೊಂದರಲ್ಲಿ ನಟಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ದೀಪಿಕಾ ಮಾತನಾಡುವ ಶೈಲಿ ಸರಿ ಇಲ್ಲ ಎಂದು ಬೇರೆಯವರ ಬಳಿ ಡಬ್ ಮಾಡಿಸಿದ್ದ ಖ್ಯಾತ ನಿರ್ದೇಶಕಿ

‘ವಿಲ್ಲಡಿಚ್ಚಾಂಪಾಟನ್’ ಹೆಸರಿನ ಜನಪದ ನೃತ್ಯ ಪ್ರಕಾರ ಒಳಗೊಂಡ ಹಾಡಿನ ಚಿತ್ರೀಕರಣ ಮಾಡಲಾಗುತ್ತಿತ್ತು, ಅದರಲ್ಲಿ ಜನಪದ ನೃತ್ಯವೂ ಇತ್ತು. ನನ್ನ ಪಾತ್ರ ಮೊದಲಿನಿಂದಲೂ ಆ ರೀತಿಯ ಡ್ಯಾನ್ಸ್ ಮಾಡುತ್ತದೆಯೇ ಅಥವಾ ಆಗಷ್ಟೆ ಕಲಿತು ಡ್ಯಾನ್ಸ್ ಮಾಡುತ್ತದೆಯೇ ಎಂಬ ಬಗ್ಗೆ ನನಗೆ ಗೊಂದಲ ಇತ್ತು. ವಾದ್ಯವೊಂದನ್ನು ನುಡಿಸುತ್ತಾ ಹಾಡುತ್ತಾ ಕುಣಿಯಬೇಕಿತ್ತು. ನಾನು ಆ ವಾದ್ಯ ನುಡಿಸುವುದು ಕಲಿಯಲು ಯತ್ನಿಸುತ್ತಿದ್ದೆ’ ಎಂದಿದ್ದಾರೆ ನಟಿ ಮಮಿತಾ.

‘ಬಳಿಕ ನಿರ್ದೇಶಕ ಬಾಲ, ಸೆಟ್​ನಲ್ಲಿದ್ದ ಒಬ್ಬ ಮಹಿಳೆಯನ್ನು (‘ವಿಲ್ಲಡಿಚ್ಚಾಂಪಾಟನ್’ ಕಲಾವಿದೆ) ತೋರಿಸಿ ಆಕೆ ನುಡಿಸುತ್ತಿರುವುದು ನೋಡಿ ಅದನ್ನು ಅನುಕರಿಸುವಂತೆ ಹೇಳಿದರು. ನಾನು ಪ್ರಯತ್ನಿಸಿದೆ ನನ್ನಿಂದ ಮೊದಲ ಬಾರಿಗೆ ಅದು ಸಾಧ್ಯವಾಗಲಿಲ್ಲ. ಮೂರು ಟೇಕ್​ಗಳಲ್ಲಿ ನಾನು ಓಕೆ ಮಾಡಿದೆ. ಆದರೆ ಆ ನಡುವೆ ಬಾಲಾ ಸರ್ ನನ್ನನ್ನು ಬೈಯ್ಯುತ್ತಲೇ ಇದ್ದರು. ಒಮ್ಮೆಯಂತೂ ನನಗೆ ಹೊಡೆದುಬಿಟ್ಟರು’ ಎಂದಿದ್ದಾರೆ ಮಮಿಯಾ.

‘ನಾನು ಸೆಟ್​ನಲ್ಲಿ ಬೈಯ್ಯುತ್ತಿರುತ್ತೇನೆ ಅದನ್ನೆಲ್ಲ ಗಂಭೀರವಾಗಿ ತೆಗೆದುಕೊಳ್ಳಬೇಡ ಎಂದು ಬಾಲಾ ಸರ್ ಮೊದಲೇ ಹೇಳಿದ್ದರು, ನಾನು ಸಹ ಅದಕ್ಕೆಲ್ಲ ಮಾನಸಿಕವಾಗಿ ಸಿದ್ಧವಾಗಿದ್ದೆ, ಆದರೂ ಸಹ ನನಗೆ ಅವರು ಬೈದಾಗ ಆ ಕ್ಷಣಕ್ಕೆ ಬಹಳ ಬೇಜಾರಾಯ್ತು’ ಎಂದಿದ್ದಾರೆ. ಸೆಟ್​ನಲ್ಲಿ ಸೂರ್ಯ ಇರುತ್ತಿದ್ದರಲ್ಲ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬ ಪ್ರಶ್ನೆಗೆ, ‘ಸೂರ್ಯ ಅವರಿಗೆ ಬಾಲಾ ಅವರ ವ್ಯಕ್ತಿತ್ವ ಮೊದಲೇ ಗೊತ್ತು, ಅವರು ಈ ಮೊದಲೂ ಸಹ ಅವರೊಟ್ಟಿಗೆ ಕೆಲಸ ಮಾಡಿದ್ದಾರೆ ಹಾಗಾಗಿ ಅವರು ಆ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ನನಗೆ ಅದೆಲ್ಲ ಮೊದಲು ಹಾಗಾಗಿ ಬಹಳ ಬೇಸರವಾಗಿತ್ತು’ ಎಂದಿದ್ದಾರೆ.

ಅಂದಹಾಗೆ ‘ವಾನಂಗನ್’ ಸಿನಿಮಾದಿಂದ ಸೂರ್ಯ ಹೊರ ನಡೆದರು. ನಟಿ ಮಮಿತಾ ಬಿಜು ಸಹ ಆ ಸಿನಿಮಾದಿಂದ ಹೊರ ನಡೆದರು. ಸೂರ್ಯ ಬದಲು ಅರುಣ್ ವಿಜಯ್, ‘ವಾನಂಗನ್’ ಸಿನಿಮಾದ ನಾಯಕರಾಗಿ ಚಿತ್ರೀಕರಣ ಪೂರ್ತಿಗೊಳಿಸಿದ್ದಾರೆ. ಸಿನಿಮಾ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ