ದೀಪಿಕಾ ಮಾತನಾಡುವ ಶೈಲಿ ಸರಿ ಇಲ್ಲ ಎಂದು ಬೇರೆಯವರ ಬಳಿ ಡಬ್ ಮಾಡಿಸಿದ್ದ ಖ್ಯಾತ ನಿರ್ದೇಶಕಿ
ದೀಪಿಕಾ ಪಡುಕೋಣೆ ಮೊದಲು ನಟಿಸಿದ್ದು ಕನ್ನಡದ ‘ಐಶ್ವರ್ಯಾ’ ಸಿನಿಮಾದಲ್ಲಿ. ಈ ಸಿನಿಮಾ ಅವರಿಗೆ ಬಣ್ಣದ ಲೋಕದ ಬಾಗಿಲು ತೆರೆಯಿತು. ದೀಪಿಕಾ ಫಾಂಟಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿದ್ದ ಫರಾ ಅವರು ದೀಪಿಕಾ ನಟಿ ಆಗುತ್ತಾರೆ ಎಂದು ಅವರಿಗೆ ಅನಿಸಿತ್ತು. ಹೀಗಾಗಿ ದೀಪಿಕಾ ಬಳಿ ಮಾತನಾಡಿದರು.
ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಬೇಡಿಕೆಯ ನಟಿ ಆಗಿ ಹೊರ ಹೊಮ್ಮಿದ್ದಾರೆ. ಮದುವೆ ಬಳಿಕವೂ ಅವರು ಹಲವು ಬೋಲ್ಡ್ ಪಾತ್ರಗಳನ್ನು ಒಪ್ಪಿ ಮಾಡುತ್ತಿದ್ದಾರೆ. ಇದಕ್ಕೆ ಅವರ ಪತಿ ರಣವೀರ್ ಸಿಂಗ್ ಯಾವುದೇ ತಕರಾರು ತೆಗೆಯುತ್ತಿಲ್ಲ. ದೀಪಿಕಾ ಪಡುಕೋಣೆ ಮೊದಲು ಕನ್ನಡದಲ್ಲಿ ಮಿಂಚಿದವರು. ಆ ಬಳಿಕ ಹಿಂದಿಯಲ್ಲಿ ಅವಕಾಶ ಪಡೆದರು. ಆರಂಭದಲ್ಲಿ ಅವರ ಧ್ವನಿಯ ಬಗ್ಗೆ ನಿರ್ದೇಶಕಿ ಫರಾ ಖಾನ್ಗೆ ಅಸಮಾಧಾನ ಇತ್ತು. ಹೀಗಾಗಿ, ಅವರ ಧ್ವನಿಯನ್ನು ಬೇರೆಯವರು ಡಬ್ ಮಾಡಿದ್ದರು! ಈ ಘಟನೆ ಬಗ್ಗೆ ಫರಾ ಖಾನ್ ಈ ಮೊದಲು ಹೇಳಿಕೊಂಡಿದ್ದರು.
ದೀಪಿಕಾ ಪಡುಕೋಣೆ ಅವರು ಮೊದಲು ಕನ್ನಡದ ‘ಐಶ್ವರ್ಯಾ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಅವರಿಗೆ ಬಣ್ಣದ ಲೋಕದ ಬಾಗಿಲು ತೆರೆಯಿತು. ದೀಪಿಕಾ ಫಾಂಟಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಫರಾ ನೋಡಿದ್ದರು. ಇವರು ನಟಿ ಆಗುತ್ತಾರೆ ಎಂದು ಅವರಿಗೆ ಅನಿಸಿತ್ತು. ಹೀಗಾಗಿ ದೀಪಿಕಾ ಬಳಿ ಮಾತನಾಡಿದರು. ಆ ಸಂದರ್ಭದಲ್ಲಿ ಫರಾ ಅವರಿಗೆ ‘ಹ್ಯಾಪಿ ನ್ಯೂ ಇಯರ್’ ಸಿನಿಮಾ ಮಾಡಬೇಕು ಎನ್ನುವ ಉದ್ದೇಶ ಇತ್ತು.
‘ನಾನು ಹ್ಯಾಪಿ ನ್ಯೂ ಇಯರ್ ಸಿನಿಮಾ ಮಾಡುತ್ತಿದ್ದೇನೆ. ನಾನು ನಿಮ್ಮ ಸ್ಕ್ರೀನ್ ಟೆಸ್ಟ್ ಮಾಡುತ್ತೇನೆ. ಒಕೆ ಎನಿಸಿದರೆ ನಿಮ್ಮನ್ನು ಆಯ್ಕೆ ಮಾಡುತ್ತೇನೆ. ಶಾರುಖ್ ಖಾನ್ ಜೊತೆ ನೀವು ನಟಿಸುತ್ತೀರಿ’ ಎಂದು ದೀಪಿಕಾಗೆ ಹೇಳಿದ್ದರು ಫರಾ ಖಾನ್. ಇದನ್ನು ಕೇಳಿ ಅವರು ಸಖತ್ ಖುಷಿ ಪಟ್ಟಿದ್ದರು. ಆದರೆ, ಫರಾ ಖಾನ್ ಅವರ ಆಯ್ಕೆ ಬದಲಾಯಿತು.
ಫರಾ ಖಾನ್ ಅವರು ‘ಓಂ ಶಾಂತಿ ಓಂ’ ಮಾಡುವ ನಿರ್ಧಾರಕ್ಕೆ ಬಂದರು. ಅವರ ಸ್ಕ್ರೀನ್ ಟೆಸ್ಟ್ ಮಾಡಲಾಯಿತು. ದೀಪಿಕಾ ಈ ಪಾತ್ರಕ್ಕೆ ಪರ್ಫೆಕ್ಟ್ ಎಂದು ಅನಿಸಿತು. ಹೀಗಾಗಿ, ‘ಓಂ ಶಾಂತಿ ಓಂ’ ಚಿತ್ರಕ್ಕೆ ಅವರನ್ನು ಆಯ್ಕೆ ಮಾಡಿಕೊಂಡರು ಫರಾ ಖಾನ್.
‘ದೀಪಿಕಾ ಪಡುಕೋಣೆ ಮಾತನಾಡುತ್ತಿದ್ದ ಶೈಲಿ ಕೆಟ್ಟದಾಗಿತ್ತು. ಅವರು ತುಂಬಾನೇ ಎಕ್ಸ್ಪ್ರೆಸಿವ್ ಆಗಿದ್ದರು. ದೀಪಿಕಾ ಧ್ವನಿ ಹೊರತುಪಡಿಸಿ ಇಡೀ ಸಿನಿಮಾ ಸಿಂಕ್ ಸೌಂಡ್ನಲ್ಲಿ ಮೂಡಿ ಬಂದಿದೆ. ದೀಪಿಕಾ ಧ್ವನಿಯನ್ನು ಬೇರೆಯವರು ಡಬ್ ಮಾಡಿದ್ದರು. ಹೇಗೆ ಮಾತನಾಡಬೇಕು ಎನ್ನುವ ಬಗ್ಗೆ ದೀಪಿಕಾಗೆ ಕ್ಲಾಸ್ ನೀಡುತ್ತಿದ್ದೆವು’ ಎಂದು ಹೇಳಿದ್ದರು ಫರಾ ಖಾನ್.
ಇದನ್ನೂ ಓದಿ: ದೀಪಿಕಾ ಪಡುಕೋಣೆ To ಕಂಗನಾ ರಣಾವತ್: ಏರ್ಫೋರ್ಸ್ ಪೈಲಟ್ ಪಾತ್ರ ಮಾಡಿದ ನಟಿಯರಿವರು
‘ಓಂ ಶಾಂತಿ ಓಂ’ ಸಿನಿಮಾ ದೀಪಿಕಾ ಪಡುಕೋಣೆ ಬಾಲಿವುಡ್ನಲ್ಲಿ ಸೆಟಲ್ ಆಗಲು ತುಂಬಾನೇ ಸಹಕಾರಿ ಆಗಿತ್ತು. ಈ ಸಿನಿಮಾದಿಂದ ದೀಪಿಕಾ ಪಡುಕೋಣೆ ಅವರ ವೃತ್ತಿ ಜೀವನವೇ ಬದಲಾಯಿತು. ಈ ವರ್ಷದ ಆರಂಭದಲ್ಲಿ ಅವರ ನಟನೆಯ ‘ಫೈಟರ್’ ಸಿನಿಮಾ ಬಿಡುಗಡೆ ಆಗಿ ಯಶಸ್ಸು ಕಂಡಿದೆ. ಈ ವರ್ಷದ ಆರಂಭದಲ್ಲೇ ಅವರು ಗೆಲುವಿನ ನಗೆ ಬೀರಿದ್ದಾರೆ. ಸದ್ಯ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ