ನೆರೆ ಮನೆಯಾಕೆಗೆ ಕೊಲೆ ಬೆದರಿಕೆ, ಹಿರಿಯ ನಟಿ ವಿರುದ್ಧ ದೂರು ದಾಖಲು
Saranya Ponvannan: ತಾಯಿ ಪಾತ್ರಗಳ ಮೂಲಕ ದೊಡ್ಡ ಅಭಿಮಾನ ವರ್ಗ ಸೃಷ್ಟಿಸಿಕೊಂಡಿರುವ ಹಿರಿಯ ನಟಿ ಶರಣ್ಯ ಪೊನ್ನವನ್ನನ್ ವಿರುದ್ಧ ನೆರೆ ಮನೆಯ ಶ್ರೀದೇವಿ ಎಂಬುವರು ಕೊಲೆ ಬೆದರಿಕೆ ಆರೋಪ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಯಕಿಯಾಗಿ ಎಂಟ್ರಿ ಕೊಟ್ಟು ಈಗ ತಾಯಿಯ ಪಾತ್ರಕ್ಕೆ ದಕ್ಷಿಣ ಭಾರತ (South India) ಚಿತ್ರರಂಗದ ಬೇಡಿಕೆಯ ನಟಿಯಾಗಿರುವ ಶರಣ್ಯ ಪೊನ್ವನನ್ ಅವರ ವಿರುದ್ಧ ನೆರೆ ಮನೆಯ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಟಾಲಿವುಡ್, ಕಾಲಿವುಡ್ನ ‘ತಾಯಿ’ ಎಂದೇ ಖ್ಯಾತವಾಗಿರುವ ಶರಣ್ಯ ನೆರೆ ಮನೆಯವೊಟ್ಟಿಗೆ ಕಿರಿಕ್ ಮಾಡಿಕೊಂಡಿದ್ದು, ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಚೆನ್ನನ ವಿರುಂಭಾಗಕ್ಕಂನಲ್ಲಿ ನಟಿ ಶರಣ್ಯ ತಮ್ಮ ಕುಟುಂಬದೊಟ್ಟಿಗೆ ವಾಸವಿದ್ದಾರೆ. ಸುದ್ದಿಗಳ ಪ್ರಕಾರ ಶರಣ್ಯ ಹಾಗೂ ಅವರ ನೆರೆ ಮನೆಯ ಶ್ರೀದೇವಿ ಎಂಬುವರೊಟ್ಟಿಗೆ ಕಾರು ಪಾರ್ಕಿಂಗ್ ವಿಚಾರದಲ್ಲಿ ಆಗಾಗ್ಗೆ ಜಗಳಗಳು ಆಗುತ್ತಲೇ ಇತ್ತಂತೆ. ಇದೀಗ ಜಗಳ ಮಿತಿ ಮೀರಿದ್ದು, ಪರಸ್ಪರ ನಿಂದನೆ ಮಾಡಿಕೊಂಡಿದ್ದಾರೆ. ನಟಿ ಶರಣ್ಯ, ಶ್ರೀದೇವಿಯನ್ನು ಕೊಲ್ಲುವುದಾಗಿ ಬೆದರಿಕೆ ಸಹ ಹಾಕಿದ್ದಾರೆಂದು ನೆರೆಮನೆಯವರು ಆರೋಪಿಸಿ ದೂರು ನೀಡಿದ್ದಾರೆ. ಶರಣ್ಯ, ತಮಗೆ ಬೆದರಿಕೆ ಹಾಕಿರುವ ಆರೋಪಕ್ಕೆ ಸಾಕ್ಷಿಯಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಶ್ರೀದೇವಿ ಪೊಲೀಸರಿಗೆ ನೀಡಿದ್ದಾರೆ.
ಶರಣ್ಯ, ಶ್ರೀದೇವಿ ಹಾಗೂ ಅವರ ಕುಟುಂಬದವರೊಟ್ಟಿಗೆ ಜಗಳ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಿನಿಮಾಗಳಲ್ಲಿ ಮೃದುವಾದ ಪಾತ್ರಗಳಿಗೆ ಹೆಸರುಆಸಿಯಾಗಿರುವ ಶರಣ್ಯ, ಪಕ್ಕದ ಮನೆಯವರೊಟ್ಟಿಗೆ ರಸ್ತೆಯಲ್ಲಿ ನಿಂತು ಜಗಳವಾಡುವುದನ್ನು ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ.
ಇದನ್ನೂ ಓದಿ:ವಿಮಾನದಲ್ಲಿ ಪ್ರಯಾಣಿಸುವಾಗ ದಿವ್ಯಾ ಪ್ರಭಾಗೆ ಕಿರುಕುಳ; ದೂರು ನೀಡಿದ ನಟಿ
ಶ್ರೀದೇವಿ ತಮ್ಮ ವಿರುದ್ಧ ಕೊಲೆ ಬೆದರಿಕೆ ಆರೋಪ ಹೊರಿಸಿದ ಬೆನ್ನಲ್ಲೆ ನಟಿ ಶರಣ್ಯ ಸಹ ಶ್ರೀದೇವಿ ಹಾಗೂ ಅವರ ಕುಟುಂಬದವರ ವಿರುದ್ಧ ಚೆನ್ನನ ವಿರುಂಭಾಗಕ್ಕಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಇಬ್ಬರ ದೂರುಗಳನ್ನು ಸ್ವೀಕರಿಸಿದ್ದು, ಸ್ಥಳ ಪರಿಶೀಲನೆ ಬಳಿಕ ಇಬ್ಬರನ್ನೂ ಕರೆಸಿ ವಿಚಾರಣೆ ಮಾಡಲಿದ್ದಾರೆ.
ಕಮಲ್ ಹಾಸನ್ ನಟಿಸಿ, ಮಣಿರತ್ನಂ ನಿರ್ದೇಶನ ಮಾಡಿದ್ದ ಕ್ಲಾಸಿಕ್ ಸಿನಿಮಾ ‘ನಾಯಗನ್’ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶರಣ್ಯ, ಹಲವು ಸಿನಿಮಾಗಳಲ್ಲಿ ನಾಯಕಿ ಪಾತ್ರಗಳಲ್ಲಿ ನಟಿಸಿ ಮಿಂಚಿದರು. ಕನ್ನಡದಲ್ಲಿಯೂ ಕೆಲವು ಸಿನಿಮಾಗಳಲ್ಲಿ ಶರಣ್ಯ ನಟಿಸಿದ್ದಾರೆ. ಆ ನಂತರ ತಾಯಿ ಪಾತ್ರಗಳಿಗೆ ಶಿಫ್ಟ್ ಆದ ನಟಿ ಶರಣ್ಯ ಹಲವು ಸ್ಟಾರ್ ನಟ-ನಟಿಯರ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ