ವಿಮಾನದಲ್ಲಿ ಪ್ರಯಾಣಿಸುವಾಗ ದಿವ್ಯಾ ಪ್ರಭಾಗೆ ಕಿರುಕುಳ; ದೂರು ನೀಡಿದ ನಟಿ
‘ನಿಜಕ್ಕೂ ಡಿಸ್ಟರ್ಬಿಂಗ್ ಆಗುವಂಥ ಘಟನೆ’ ಎಂದು ಅವರು ಬರೆದುಕೊಂಡಿದ್ದಾರೆ. ವ್ಯಕ್ತಿಯೋರ್ವ ಇವರ ಸೀಟ್ನಲ್ಲಿ ಕುಳಿತಿದ್ದರು. ಅಷ್ಟೇ ಅಲ್ಲ, ಕೆಟ್ಟದಾಗಿ ನಡೆದುಕೊಂಡಿದ್ದರು ಮತ್ತು ಅವರನ್ನು ಮುಟ್ಟುವ ಪ್ರಯತ್ನವನ್ನು ಸಹ ಪ್ರಯಾಣಿಕ ಮಾಡಿದ್ದ. ಈ ಅನುಚಿತ ವರ್ತನೆಯಿಂದ ದಿವ್ಯಾಗೆ ಸಿಟ್ಟು ಬಂದಿದೆ.

ಮಲಯಾಳಂ ನಟಿ ದಿವ್ಯಾ ಪ್ರಭಾ (Divya Prabha) ಅವರಿಗೆ ಕಹಿ ಅನುಭವ ಆಗಿದೆ. ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಹ ಪ್ರಯಾಣಿಕನಿಂದ ಕಿರುಕುಳಕ್ಕೆ ಒಳಗಾಗಿದ್ದಾರೆ. ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ದಿವ್ಯಾ ಪ್ರಭಾ ಅವರು ಮುಂಬೈನಿಂದ ಕೊಚ್ಚಿಗೆ ಹೊರಟಿದ್ದರು. ಈ ವೇಳ ಘಟನೆ ಸಂಭವಿಸಿದೆ. ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿದೆ.
‘ನಿಜಕ್ಕೂ ಡಿಸ್ಟರ್ಬಿಂಗ್ ಆಗುವಂಥ ಘಟನೆ’ ಎಂದು ಅವರು ಬರೆದುಕೊಂಡಿದ್ದಾರೆ. ವ್ಯಕ್ತಿಯೋರ್ವ ಇವರ ಸೀಟ್ನಲ್ಲಿ ಕುಳಿತಿದ್ದರು. ಅಷ್ಟೇ ಅಲ್ಲ, ಕೆಟ್ಟದಾಗಿ ನಡೆದುಕೊಂಡಿದ್ದರು ಮತ್ತು ಅವರನ್ನು ಮುಟ್ಟುವ ಪ್ರಯತ್ನವನ್ನು ಸಹ ಪ್ರಯಾಣಿಕ ಮಾಡಿದ್ದ. ಈ ಅನುಚಿತ ವರ್ತನೆಯಿಂದ ದಿವ್ಯಾಗೆ ಸಿಟ್ಟು ಬಂದಿದೆ.
‘ನಾನು ಈ ಘಟನೆಯ ಬಗ್ಗೆ ವಿಮಾನದಲ್ಲಿರುವ ಗಗನಸಖಿಗೆ ಹೇಳಿದೆ. ಅವರು ನನ್ನ ಜಾಗ ಬದಲಿಸಿದರು ಹೊರತೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆತನಿಂದ ಕೆಟ್ಟ ಮಾತುಗಳನ್ನು ಕೇಳಬೇಕಾಯಿತು’ ಎಂದು ದಿವ್ಯಾ ಬೇಸರ ಹೊರಹಾಕಿದ್ದಾರೆ. ಕೊಚ್ಚಿಗೆ ಬಂದ ಬಳಿಕ ಇ-ಮೇಲ್ ಮೂಲಕ ದಿವ್ಯಾ ಅವರು ದೂರು ದಾಖಲು ಮಾಡಿದ್ದಾರೆ. ಪೊಲೀಸರು ದೂರನ್ನು ಸ್ವೀಕರಿಸಿದ್ದು, ಇನ್ನೂ ಕೇಸ್ ದಾಖಲಿಸಿಲ್ಲ. ‘ನಾವು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದೇವೆ. ಅವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ’ ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಅಮಿತಾಭ್ ಬಚ್ಚನ್ ಆಸ್ತಿ ಎಷ್ಟು ಕೋಟಿ ರೂಪಾಯಿ? ಅವರ ಬಳಿ ಎಷ್ಟು ಕಾರುಗಳಿವೆ ಗೊತ್ತಾ?
ದಿವ್ಯಾ ಪ್ರಭಾ ಅವರು 2013ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ರಂಗಭೂಮಿ ಹಿನ್ನೆಲೆ ಇರುವ ಅವರು, ‘ಲೋಕ್ಪಾಲ್’ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟರು. ಆ ಬಳಿಕ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರು. 2022ರಿಂದ ಈಚೆಗೆ ಅವರ ನಟನೆಯ ಯಾವುದೇ ಹೊಸ ಸಿನಿಮಾ ಘೋಷಣೆ ಆಗಿಲ್ಲ. ಇನ್ನು, ಕೆಲವು ಧಾರಾವಾಹಿಗಳಲ್ಲೂ ಅವರು ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ