ಸೆಲೆಬ್ರಿಟಿಗಳ ಹೆಸರಲ್ಲಿ ಸೃಷ್ಟಿಯಾಗುತ್ತಿದೆ ನಕಲಿ ಪೋಸ್ಟ್​; ಶೇರ್ ಮಾಡೋ ಮುನ್ನ ಎಚ್ಚರ

ಸಾಮಾಜಿಕ ಜಾಲತಾಣಗಳು ಇತ್ತೀಚೆಗೆ ಸೆಲೆಬ್ರಿಟಿಗಳ ಹೆಸರಿನಲ್ಲಿ 'ಫೇಕ್' ಹಾಗೂ 'ಎಡಿಟೆಡ್' ಇನ್​​ಸ್ಟಾ ಸ್ಟೋರಿಗಳ ವೈರಲ್ ಹಬ್ ಆಗಿವೆ. AI ಮತ್ತು ಫೋಟೋಶಾಪ್ ದುರ್ಬಳಕೆಯಿಂದ ನಿಜವಾದ ಮತ್ತು ನಕಲಿ ವಿಷಯ ಗುರುತಿಸುವುದು ಕಷ್ಟವಾಗಿದೆ. ಇದು ಸುಳ್ಳು ಸುದ್ದಿ ಹರಡಿಸಿ, ಸೆಲೆಬ್ರಿಟಿಗಳ ಘನತೆಗೆ ಧಕ್ಕೆ ತರುತ್ತಿದೆ. ಬಳಕೆದಾರರು ಯಾವುದೇ ಸೆನ್ಸೇಷನಲ್ ಸ್ಟೋರಿಯ ಸತ್ಯಾಸತ್ಯತೆ ಪರಿಶೀಲಿಸುವುದು ಅನಿವಾರ್ಯ.

ಸೆಲೆಬ್ರಿಟಿಗಳ ಹೆಸರಲ್ಲಿ ಸೃಷ್ಟಿಯಾಗುತ್ತಿದೆ ನಕಲಿ ಪೋಸ್ಟ್​; ಶೇರ್ ಮಾಡೋ ಮುನ್ನ ಎಚ್ಚರ
ನುಸ್ರತ್

Updated on: Jun 12, 2026 | 7:35 AM

ಸಾಮಾಜಿಕ ಜಾಲತಾಣಗಳು ಇಂದಿನ ದಿನಗಳಲ್ಲಿ ಎಷ್ಟು ಸಹಾಯಕಾರಿಯೋ, ಅಷ್ಟೇ ಅಪಾಯಕಾರಿಯೂ ಹೌದು. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ‘ಫೇಕ್’ ಹಾಗೂ ‘ಎಡಿಟೆಡ್’ ಸ್ಟೋರಿಗಳನ್ನು ಹರಿಬಿಡುವ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ‘ಆ ಸೆಲೆಬ್ರಿಟಿ ಹಾಗೆ ಅಂದರು, ಈ ಸ್ಟಾರ್ ಹೀಗೆ ಹೇಳಿದರು’ ಎಂದರು ಎಂಬ ಇನ್​​ಸ್ಟಾ ಸ್ಟೋರಿಗಳನ್ನು ಎಡಿಟ್ ಮಾಡಿದ ಸ್ಕ್ರೀನ್‌ಶಾಟ್‌ಗಳು ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿವೆ.

ತಂತ್ರಜ್ಞಾನದ ದುರ್ಬಳಕೆಯಿಂದಾಗಿ ನಿಜವಾದ ಸ್ಟೋರಿ ಯಾವುದು ಮತ್ತು ಎಡಿಟ್ ಮಾಡಿದ ಸ್ಟೋರಿ ಯಾವುದು ಎಂದು ಗುರುತಿಸುವುದೇ ನೆಟ್ಟಿಗರಿಗೆ ದೊಡ್ಡ ಸವಾಲಾಗಿದೆ. ಫೋಟೋಶಾಪ್ ಹಾಗೂ ಎಐ ಟೂಲ್‌ಗಳನ್ನು ಬಳಸಿ ಸೆಲೆಬ್ರಿಟಿಗಳ ಅಧಿಕೃತ ಖಾತೆಗಳಿಂದಲೇ ಪೋಸ್ಟ್ ಮಾಡಿದ್ದಾರೇನೋ ಎಂಬಂತೆ ಇನ್‌ಸ್ಟಾ ಸ್ಟೋರಿಗಳನ್ನು ಸೃಷ್ಟಿಸಲಾಗುತ್ತಿದೆ. ದುರದೃಷ್ಟವಶಾತ್, ಇದರ ಹಿಂದಿನ ಸತ್ಯಾಸತ್ಯತೆಯನ್ನು ಪರಿಶೀಲಿಸದ ಲಕ್ಷಾಂತರ ನೆಟ್ಟಿಗರು ಇದನ್ನು ನಿಜವೆಂದೇ ನಂಬಿ, ಶೇರ್ ಮಾಡುತ್ತಿದ್ದಾರೆ.

ಪರಿಣಾಮವೇನು?

ಇಂತಹ ನಕಲಿ ಪೋಸ್ಟ್‌ಗಳು ಕೇವಲ ಸುಳ್ಳು ಸುದ್ದಿಗಳನ್ನು ಹರಡುವುದಿಲ್ಲ, ಬದಲಿಗೆ ವರ್ಷಗಳ ಕಾಲ ಕಷ್ಟಪಟ್ಟು ದುಡಿದ ಸೆಲೆಬ್ರಿಟಿಗಳ ಗೌರವ ಮತ್ತು ಘನತೆಗೆ ಧಕ್ಕೆ ತರುತ್ತಿವೆ. ಅಷ್ಟೇ ಅಲ್ಲದೆ, ಸಮಾಜದಲ್ಲಿ ಅನಗತ್ಯ ವಿವಾದ, ದ್ವೇಷ ಹಾಗೂ ಗೊಂದಲಗಳಿಗೆ ಕಾರಣವಾಗುತ್ತಿವೆ. ಸೆಲೆಬ್ರಿಟಿ ವಾರ್​​ಗಳು ಕೂಡ ಹೆಚ್ಚುತ್ತಿವೆ.

ನುಸ್ರತ್ ಫೇಕ್ ಇನ್​​ಸ್ಟಾ ಸ್ಟೇಟಸ್

ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಇನ್‌ಸ್ಟಾಗ್ರಾಮ್ ಖಾತೆ ಡಿಆಕ್ಟಿವೇಟ್ ಮಾಡಿದ ಪ್ರಣಿತ್ ಮೋರೆ

ಈ ಗಂಭೀರ ಸಮಸ್ಯೆಗೆ ಬ್ರೇಕ್ ಹಾಕಲು ಕೇವಲ ಸೆಲೆಬ್ರಿಟಿಗಳ ಸ್ಪಷ್ಟನೆ ಮಾತ್ರ ಸಾಲದು. ಸಾಮಾಜಿಕ ಜಾಲತಾಣದ ಬಳಕೆದಾರರಾದ ತಾವು ಕೂಡ ಜವಾಬ್ದಾರಿಯಿಂದ ವರ್ತಿಸಬೇಕು. ಯಾವುದೇ ಸೆನ್ಸೇಷನಲ್ ಸ್ಟೋರಿ ಕಂಡ ತಕ್ಷಣ ಅದನ್ನು ನಂಬುವ ಮುನ್ನ, ಆಯಾ ಸೆಲೆಬ್ರಿಟಿಗಳ ಅಧಿಕೃತ ಪ್ರೊಫೈಲ್ ಪರಿಶೀಲಿಸುವುದು ಉತ್ತಮ. ಸೈಬರ್ ಕ್ರೈಂ ವಿಭಾಗ ಮತ್ತು ಇನ್‌ಸ್ಟಾಗ್ರಾಮ್ ಸಂಸ್ಥೆಯು ಇಂತಹ ಫೇಕ್ ಕಂಟೆಂಟ್ ಕ್ರಿಯೇಟರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾದ ತುರ್ತು ಅಗತ್ಯವಿದೆ.

ಇತ್ತೀಚೆಗೆ ನಡೆದಿತ್ತು ಘಟನೆ

ನುಸ್ರತ್ ಬರೂಚಾ ಅವರು ಇತ್ತೀಚೆಗೆ ಅನಗತ್ಯ ವಿವಾದ ಒಂದರಲ್ಲಿ ಸಿಲುಕಿದ್ದರು. ಆರ್​​ಸಿಬಿ ಗೆದ್ದ ವೇಳೆ ಅವರು ಮಾಡಿದ್ದ ಪೋಸ್ಟ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು. ಗೆಲುವಿನ ದೃಶ್ಯವನ್ನು ನುಸ್ರತ್ ಪೋಸ್ಟ್ ಮಾಡಿದ್ದರು. ಆಗ ಹಿನ್ನೆಲೆಯಲ್ಲಿ ಶ್ವಾನ ವಿಚಿತ್ರವಾಗಿ ಕೂಗುತ್ತಿತ್ತು. ಈ ಶಬ್ದವನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಯಿತು. ಆ ಬಳಿಕ ಅವರೇ ಸ್ಪಷ್ಟನೆ ನೀಡಿದ್ದಾರೆ ಎಂಬ ರೀತಿಯಲ್ಲಿ ನಂಬಿಸುವ ಇನ್​​ಸ್ಟಾ ಸ್ಟೋರಿಯೊಂದು ವೈರಲ್ ಆಗಿತ್ತು. ಇದನ್ನು ಅವರು ಫೇಕ್ ಎಂದು ಈಗ ನಾನಾ ಪಾಟೇಕರ್ ಹೆಸರಲ್ಲಿ ಸ್ಟೋರಿಯೊಂದು ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Published On - 7:30 am, Fri, 12 June 26

Follow Us