AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಂಡಿಯನ್ ಐಡಲ್ ಸೀಸನ್ 16’ ಫಿನಾಲೆ ಗೆದ್ದ ಜ್ಯೋತಿರ್ಮಯಿ ನಾಯಕ್

ಭಾರಿ ಕುತೂಹಲ ಮೂಡಿಸಿದ್ದ 'ಇಂಡಿಯನ್ ಐಡಲ್ 16' ರಿಯಾಲಿಟಿ ಶೋಗೆ ತೆರೆ ಬಿದ್ದಿದೆ. ಒಡಿಶಾ ಮೂಲದ ಖ್ಯಾತ ಗಾಯಕಿ ಜ್ಯೋತಿರ್ಮಯಿ ನಾಯಕ್ ಟ್ರೋಫಿ ಜೊತೆಗೆ 20 ಲಕ್ಷ ರೂಪಾಯಿ ಬಹುಮಾನ ಗೆದ್ದು ಬೀಗಿದ್ದಾರೆ. ತನಿಷ್ಕ್ ಶುಕ್ಲಾ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ಈ ಸೀಸನ್ ಅಲ್ಲಿ ಕರ್ನಾಟಕದ ಶ್ರೀನಿಧಿ ಜಿ. ಶಾಸ್ತ್ರಿ ಭಾಗಿ ಆಗಿದ್ದರು. 

‘ಇಂಡಿಯನ್ ಐಡಲ್ ಸೀಸನ್ 16’ ಫಿನಾಲೆ ಗೆದ್ದ ಜ್ಯೋತಿರ್ಮಯಿ ನಾಯಕ್
ಇಂಡಿಯನ್ ಐಡಲ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 27, 2026 | 8:12 AM

Share

ಮುಖ್ಯಾಂಶಗಳು

  • ಒಲಿದು ಬಂತು 20 ಲಕ್ಷ ರೂಪಾಯಿ!
  • ಕೊನೆ ಕ್ಷಣದವರೆಗೂ ಸಾಗಿದ ರೋಚಕ ಫೈಟ್
  • ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟ ತನಿಷ್ಕ್ ಶುಕ್ಲಾ

ದೇಶದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಇಂಡಿಯನ್ ಐಡಲ್ ಸೀಸನ್ 16’ ಗ್ರ್ಯಾಂಡ್ ಫಿನಾಲೆ ಮುಕ್ತಾಯಗೊಂಡಿದೆ. ಒಡಿಶಾದ ಗಾಯಕಿ ಜ್ಯೋತಿರ್ಮಯಿ ನಾಯಕ್ ಈ ಬಾರಿಯ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಜಿದ್ದಾಜಿದ್ದಿನ ಫಿನಾಲೆಯಲ್ಲಿ ಅವರು ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ಒಂಬತ್ತು ತಿಂಗಳುಗಳಿಂದ ಸಾಗಿದ್ದ ಈ ಸಂಗೀತದ ಮಹಾಸರಬರಾಯಿಗೆ ಈಗ ಅದ್ಧೂರಿ ತೆರೆ ಬಿದ್ದಿದೆ.

ಜ್ಯೋತಿರ್ಮಯಿ ನಾಯಕ್ ಸಾರ್ವಜನಿಕರಿಂದ ಅತಿ ಹೆಚ್ಚು ವೋಟುಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಅಂತಿಮ ಹಂತದಲ್ಲಿದ್ದ ತನಿಷ್ಕ್ ಶುಕ್ಲಾ ಮೊದಲ ರನ್ನರ್ ಅಪ್ ಸ್ಥಾನ ಪಡೆದರು. ಮನ್ರಾಜ್ ವೀರ್ ಸಿಂಗ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ವಿನ್ನರ್ ಜ್ಯೋತಿರ್ಮಯಿಗೆ ಟ್ರೋಫಿ ಜೊತೆಗೆ 20 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಇನ್ನುಳಿದ ರನ್ನರ್ ಅಪ್‌ಗಳಿಗೆ ತಲಾ 5 ಲಕ್ಷ ರೂಪಾಯಿ ಚೆಕ್ ನೀಡಲಾಯಿತು.

ಸೋನಿ ಟಿವಿಯಲ್ಲಿ ಪ್ರಸಾರವಾದ ಈ ಫಿನಾಲೆ ಸಂಚಿಕೆಯಲ್ಲಿ ಜ್ಯೋತಿರ್ಮಯಿ ಅವರ ಇಡೀ ಕುಟುಂಬ ಭಾಗಿಯಾಗಿತ್ತು. ಅಂತಿಮ ಸುತ್ತಿನಲ್ಲಿ ಅವರು ‘ಸೈಯ್ಯಾನ್ ಓ ಸೈಯ್ಯಾನ್’ ಹಾಡನ್ನು ಅದ್ಭುತವಾಗಿ ಹಾಡಿದರು. ಇವರ ಗಾಯನಕ್ಕೆ ತೀರ್ಪುಗಾರರಾದ ಶ್ರೇಯಾ ಘೋಷಾಲ್ ಹಾಗೂ ಬಾದ್‌ಶಾ ಫಿದಾ ಆದರು. ವಿಶಾಲ್ ದಡ್ಲಾನಿ ವಿಡಿಯೋ ಕಾಲ್ ಮೂಲಕ ಭಾಗವಹಿಸಿ ಶುಭ ಕೋರಿದರು.

ಇದನ್ನೂ ಓದಿ: ‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ

ವಿಜಯದ ಬಳಿಕ ಜ್ಯೋತಿರ್ಮಯಿ ಭಾವುಕರಾಗಿ ಮಾತನಾಡಿದರು. ಕೇವಲ ಒಂದು ಕನಸು ಹೊತ್ತು ಆಡಿಷನ್‌ಗೆ ಬಂದಿದ್ದ ನನಗೆ ಈ ಗೆಲುವು ಜೀವನವನ್ನೇ ಬದಲಾಯಿಸಿದೆ. ಈ ಟ್ರೋಫಿ ನನಗೆ ವೋಟ್ ಮಾಡಿದ ಪ್ರತಿಯೊಬ್ಬರಿಗೂ ಸೇರಬೇಕು ಎಂದು ಅವರು ಧನ್ಯವಾದ ತಿಳಿಸಿದರು. ಆದಿತ್ಯ ನಾರಾಯಣ್ ಈ ಕಾರ್ಯಕ್ರಮದ ನಿರೂಪಣೆ ಮಾಡಿದ್ದರು.

View this post on Instagram

A post shared by Sony LIV (@sonylivindia)

ಶ್ರೀನಿಧಿ ಜಿ. ಶಾಸ್ತ್ರಿ ಅವರು ಸೀಶನ್ 16ರಲ್ಲಿ ಕಾಣಿಸಿಕೊಂಡಿದ್ದರು. ಇವರು ಬೆಂಗಳೂರು ಮೂಲದ ಗಾಯಕರಾಗಿದ್ದು, ಈ ಹಿಂದೆ ಜೀ ಕನ್ನಡದ ‘ಸಾ ರೇ ಗ ಮ ಪ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ‘ಇಂಡಿಯನ್ ಐಡಲ್ ಸೀಸನ್ 16’ರ ಟಾಪ್ 10 ಹಂತಕ್ಕೆ ತಲುಪಿದ್ದರು. ಗಾನಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹಾಡುಗಳನ್ನು ಅತ್ಯಂತ ಮಧುರವಾಗಿ ಹಾಡುವ ಮೂಲಕ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್