ಭರ್ಜರಿ ಅವಕಾಶ: ಪ್ರಭಾಸ್ ಸಿನಿಮಾನಲ್ಲಿ ಕನ್ನಡದ ನಟಿ

Prabhas movie: ಪ್ರಭಾಸ್​ ಕಾಲ್​​ಶೀಟ್​​ಗಾಗಿ ನಿರ್ಮಾಪಕರು ಸಾಲುಗಟ್ಟಿ ನಿಂತಿರುತ್ತಾರೆ. ಪ್ರಭಾಸ್ ಸಿನಿಮಾನಲ್ಲಿ ಅವಕಾಶ ಸಿಕ್ಕರೆ ಕಾದಿರುವ ಬಾಲಿವುಡ್ ನಟಿಯರು ಸಾಕಷ್ಟು ಮಂದಿ ಇದ್ದಾರೆ. ಅಂಥಹುದರಲ್ಲಿ ಕನ್ನಡದ ನಟಿಯೊಬ್ಬರಿಗೆ ಪ್ರಭಾಸ್​​ರ ಸಿನಿಮಾನಲ್ಲಿ ನಟಿಸುವ ಅವಕಾಶ ಅರಸಿ ಬಂದಿದೆ. ಯಾರು ಆ ನಟಿ? ಯಾವ ಸಿನಿಮಾನಲ್ಲಿ ನಟನೆ? ಇಲ್ಲಿದೆ ಮಾಹಿತಿ...

ಭರ್ಜರಿ ಅವಕಾಶ: ಪ್ರಭಾಸ್ ಸಿನಿಮಾನಲ್ಲಿ ಕನ್ನಡದ ನಟಿ
Prabhas

Updated on: Oct 23, 2025 | 8:11 PM

ಪ್ರಭಾಸ್ (Prabhas), ಭಾರತೀಯ ಚಿತ್ರರಂಗದ ಬಲು ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್. ‘ಬಾಹುಬಲಿ’ ಸಿನಿಮಾಗಳ ಬಳಿಕ ಪ್ಯಾನ್ ವರ್ಲ್ಡ್​​​ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಪ್ರಭಾಸ್ ಸಿನಿಮಾಗಳು ಮೊದಲ ದಿನವೇ ಭಾರಿ ದೊಡ್ಡ ಮೊತ್ತವನ್ನು ಬಾಕ್ಸ್ ಆಫೀಸ್​​ನಲ್ಲಿ ದೋಚುತ್ತವೆ. ಪ್ರಭಾಸ್​ ಕಾಲ್​​ಶೀಟ್​​ಗಾಗಿ ನಿರ್ಮಾಪಕರು ಸಾಲುಗಟ್ಟಿ ನಿಂತಿರುತ್ತಾರೆ. ಪ್ರಭಾಸ್ ಸಿನಿಮಾನಲ್ಲಿ ಅವಕಾಶ ಸಿಕ್ಕರೆ ಕಾದಿರುವ ಬಾಲಿವುಡ್ ನಟಿಯರು ಸಾಕಷ್ಟು ಮಂದಿ ಇದ್ದಾರೆ. ಅಂಥಹುದರಲ್ಲಿ ಕನ್ನಡದ ನಟಿಯೊಬ್ಬರಿಗೆ ಪ್ರಭಾಸ್​​ರ ಸಿನಿಮಾನಲ್ಲಿ ನಟಿಸುವ ಅವಕಾಶ ಅರಸಿ ಬಂದಿದೆ.

‘ಟೋಬಿ’, ‘ಸಪ್ತ ಸಾಗರದಾಚೆ ಎಲ್ಲೊ ಸೈಡ್ ಬಿ’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿ ಪ್ರತಿಭೆ ಮತ್ತು ಸೌಂದರ್ಯದಿಂದ ಸೆಳೆದಿರುವ ನಟಿ ಚೈತ್ರಾ ಆಚಾರ್ ಅವರು ಪ್ರಭಾಸ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆದ ತಮಿಳು ಸಿನಿಮಾ ‘3 ಬಿಎಚ್​​ಕೆ’ಯಲ್ಲಿ ನಟಿಸಿ ಬಂದಿದ್ದ ಚೈತ್ರಾ ಆಚಾರ್ ಈಗ ಪ್ರಭಾಸ್ ಸಿನಿಮಾ ಮೂಲಕ ತೆಲುಗಿಗೂ ಕಾಲಿರಿಸಿದ್ದಾರೆ.

ಪ್ರಭಾಸ್ ನಟನೆಯ ಹೊಸ ಸಿನಿಮಾ ‘ಫೌಜಿ’ಯಲ್ಲಿ ಚೈತ್ರಾ ಆಚಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ‘ಸೀತಾ ರಾಮಂ’ ಹೆಸರಿನ ಅದ್ಭುತ ಸಿನಿಮಾ ನಿರ್ದೇಶಿಸಿದ್ದ ರಘು ಹನುಪುಡಿ ಅವರು ‘ಫೌಜಿ’ ಸಿನಿಮಾದ ನಿರ್ದೇಶಕರೂ ಆಗಿದ್ದು, ಚೈತ್ರಾ ಆಚಾರ್ ಅವರ ನಟನಾ ಪ್ರತಿಭೆಗೆ ಮೆಚ್ಚಿ, ‘ಫೌಜಿ’ ಸಿನಿಮಾನಲ್ಲಿ ಅವರಿಗೆ ಪ್ರಮುಖ ಪಾತ್ರವೊಂದನ್ನು ನೀಡಿದ್ದಾರೆ. ‘ಫೌಜಿ’ ಸಿನಿಮಾನಲ್ಲಿ ಎರಡನೇ ನಾಯಕಿಯ ಪಾತ್ರ ಚೈತ್ರಾ ಅವರದ್ದಾಗಿರುವ ಸಾಧ್ಯತೆ ಇದೆ.

ಇದನ್ನೂ ಓದಿ:ಸೋಣೆ ಆರತಿ ಬಗ್ಗೆ ತಿಳಿಸಿಕೊಟ್ಟ ಬಿಗ್ ಬಾಸ್ ಚೈತ್ರಾ ಕುಂದಾಪುರ

ಈ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ಚೈತ್ರಾ ಆಚಾರ್, ‘ರಘು ಹನುಪುಡಿ ಅವರ ಈ ಸುಂದರ ಸೃಷ್ಟಿಯ ಭಾಗವಾಗಿರುವುದಕ್ಕೆ ಸಂತೋಷವಾಗಿದೆ. ‘ಫೌಜಿ’, ನಮ್ಮ ಇತಿಹಾಸದಿಂದ ಕಣ್ಮರೆ ಆಗಿರುವ ಕೆಚ್ಚೆದೆಯ ಸೈನಿಕ ಈತ. ಪ್ರಭಾಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದಿದ್ದಾರೆ ಚೈತ್ರಾ.

‘ಫೌಜಿ’ ಸಿನಿಮಾನಲ್ಲಿ ನಟಿ ಇಮಾನ್ವಿ ನಾಯಕಿ. ಇವರಿಗೂ ಸಹ ಇದು ಮೊದಲ ಸಿನಿಮಾ. ಅಮೆರಿಕದಲ್ಲಿ ನೆಲೆಸಿರುವ ಇಮಾನ್ವಿ ಡ್ಯಾನ್ಸರ್ ಆಗಿದ್ದು, ನೃತ್ಯ ಶಾಲೆಯನ್ನು ಸಹ ಹೊಂದಿದ್ದರು. ಮೊದಲ ಸಿನಿಮಾನಲ್ಲಿಯೇ ಅವರು ಪ್ರಭಾಸ್​​ಗೆ ನಾಯಕಿ ಆಗಿದ್ದಾರೆ. ಸಿನಿಮಾ ಅನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದೆ. ಸಿನಿಮಾ ಮುಂದಿನ ವರ್ಷ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಚೈತ್ರಾ ಆಚಾರ್ ಬ್ಯುಸಿ ನಟಿ ಆಗಿದ್ದು. ‘ಉತ್ತರಕಾಂಡ’, ತಮಿಳಿನ ‘ಮೈ ಲಾರ್ಡ್’, ‘ಸ್ಟ್ರಾಬೆರ್ರಿ’, ‘ಮಾರ್ನಮಿ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ