ಬಿಗ್​ ಬಾಸ್​ ಮನೆಯಲ್ಲಿ ಒಡೆದು ಆಳೋಕೆ ಸಿದ್ಧವಾಗಿದೆ ಪ್ಲ್ಯಾನ್​! ಸಂಬರಗಿ-ಚಂದ್ರಚೂಡ್​ ಕಿಂಗ್​ಪಿನ್​​

ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಮೊದಲಿನಿಂದಲೂ ಪರಿಚಯವಿತ್ತು. ಹೀಗಾಗಿ, ಇಬ್ಬರೂ ಬಹುಬೇಗ ಆಪ್ತರಾಗಿಬಿಟ್ಟರು.

ಬಿಗ್​ ಬಾಸ್​ ಮನೆಯಲ್ಲಿ ಒಡೆದು ಆಳೋಕೆ ಸಿದ್ಧವಾಗಿದೆ ಪ್ಲ್ಯಾನ್​! ಸಂಬರಗಿ-ಚಂದ್ರಚೂಡ್​ ಕಿಂಗ್​ಪಿನ್​​
ಪ್ರಶಾಂತ್​-ಚಕ್ರವರ್ತಿ

Updated on: Apr 05, 2021 | 8:50 PM

ಬಿಗ್​ ಬಾಸ್​ ಮನೆಯಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದು ಒಗ್ಗಟ್ಟು ಬಂದಿದೆ. ಚಕ್ರವರ್ತಿ ಚಂದ್ರಚೂಡ್​ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟ ನಂತರವಂತೂ ಈ ಒಗ್ಗಟ್ಟು ಮತ್ತಷ್ಟು ಬಲಗೊಂಡಿದೆ. ವೀಕೆಂಡ್​ನಲ್ಲಿ ಈ ಬಗ್ಗೆ ಕಿಚ್ಚ ಸುದೀಪ್​ ಕೂಡ ಹೇಳಿಕೊಂಡಿದ್ದರು. ಈಗ ಒಡೆದು ಆಳೋಕೆ ಮನೆಯಲ್ಲಿ ಪ್ಲ್ಯಾನ್​ ಒಂದು ಸಿದ್ಧವಾಗಿದೆ. ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಅವರೇ ಈ ಪ್ಲ್ಯಾನ್​ನ ಕಿಂಗ್​ಪಿನ್​ಗಳು.

ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಮೊದಲಿನಿಂದಲೂ ಪರಿಚಯವಿತ್ತು. ಹೀಗಾಗಿ, ಇಬ್ಬರೂ ಬಹುಬೇಗ ಆಪ್ತರಾಗಿಬಿಟ್ಟರು. ಅಷ್ಟೇ ಅಲ್ಲ ಮನೆಯನ್ನು ಒಡೆದು ಆಳೋಕೆ ಇಬ್ಬರೂ ಮಾತುಕತೆ ನಡೆಸಿದ್ದರು. ಈಗ ಇದು ಜಾರಿಗೆ ಬಂದಂತೆ ಕಾಣುತ್ತಿದೆ.

ಕಲರ್ಸ್​ ಕನ್ನಡ ವಾಹಿನಿ ಇಂದು ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಬಿಗ್​ ಬಾಸ್​ ಮನೆಯಲ್ಲಿ ಒಡೆದು ಆಳುವುದು ಹೇಗೆ? ಯಾರ ವೀಕ್​ನೆಸ್​ ಏನು? ಏನು ಮಾಡಿದರೆ ಯಾರು ನಮ್ಮ ಟೀಂಗೆ ಬರುತ್ತಾರೆ ಎನ್ನುವ ಬಗ್ಗೆ ಪ್ರಶಾಂತ್​-ಚಕ್ರವರ್ತಿ ಮಾತುಕತೆ ನಡೆಸಿದ್ದಾರೆ.

ಮಂಜು ಬಗ್ಗೆ ಚಂದ್ರಚೂಡ್ ಮೊದಲಿನಿಂದಲೂ ಅಸಮಾಧಾನ ಹೊಂದಿದ್ದಾರೆ. ಇತ್ತೀಚೆಗೆ ಇಬ್ಬರ ನಡುವೆ ವಾಗ್ವಾದ ಕೂಡ ಏರ್ಪಟ್ಟಿತ್ತು. ಹೀಗಾಗಿ, ಮಂಜು ಬುದ್ಧಿ ತುಂಬಾನೇ ಕ್ರೂರವಾಗಿದೆ ಎನ್ನುವ ಅಭಿಪ್ರಾಯವನ್ನು ಚಂದ್ರಚೂಡ್​ ವ್ಯಕ್ತಪಡಿಸಿದ್ದಾರೆ. ರಾಜೀವ್​ ವಾಟರ್​​ ಬಾಯ್​​, ಶಕ್ತಿ ಯಾರಿಗೆ ಹೆಚ್ಚಿದೆಯೋ ಅವರ ಕಡೆ ವಾಲುವ ಗುಣ ಅರವಿಂದ್​​ನದ್ದು ಎಂದಿದ್ದಾರೆ ಅವರು.

ರಘು, ಶಮಂತ್​, ವಿಶ್ವ ಅಂತರ್​ಪಿಶಾಚಿಗಳು ಎಂದು ಚಂದ್ರಚೂಡ್​ ಕರೆದಿದ್ದಾರೆ. ಈ ಮೂವರು ಯಾವುದೇ ಟೀಂಗೆ ಸೇರಿದವರಲ್ಲ, ಎಲ್ಲರ ಜತೆಯೂ ಬರೆಯುತ್ತಾರೆ. ಹೀಗಾಗಿ, ಅವರು ಈ ಅಭಿಪ್ರಾಯ ಹೊರ ಹಾಕಿದ್ದಾರೆ. ನಾವಿಬ್ಬರೂ ರಾಜ ಕೂತ ಹಾಗೆ ಕೂತು, ಇದನ್ನು ಕೆಡಿಸಲೇಬೇಕು. ಅವರ ಟೀಂ ನಿಂದ ಒಂದು ವಿಕೆಟ್​ ಆಚೆ ಹೋದರೆ ಸಾಕು ಎಂದಿದ್ದಾರೆ ಚಂದ್ರಚೂಡ್​. ಈ ಮೂಲಕ ಮನೆಯಲ್ಲಿ ಒಡೆದು ಆಳೋಕೆ ಪ್ಲ್ಯಾನ್​ ಸಿದ್ಧಪಡಿಸಿದ್ದಾರೆ.

ಇದನ್ನೂ ಓದಿ: ‘ಮಂಜುನ ನಾನು ಸುಮ್ನೆ ಬಿಡಲ್ಲ’: ಸವಾಲು ಹಾಕಿ ಯುದ್ಧ ಶುರು ಮಾಡಿದ ಚಕ್ರವರ್ತಿ ಚಂದ್ರಚೂಡ್!

 ‘ಮಂಜುನ ನಾನು ಸುಮ್ನೆ ಬಿಡಲ್ಲ’: ಸವಾಲು ಹಾಕಿ ಯುದ್ಧ ಶುರು ಮಾಡಿದ ಚಕ್ರವರ್ತಿ ಚಂದ್ರಚೂಡ್!

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us