ಪಿ. ವಾಸು ನಿರ್ದೇಶನದ ‘ಆಪ್ತಮಿತ್ರ’ ಸಿನಿಮಾ ಸೂಪರ್ ಹಿಟ್ ಆಯಿತು. ವಿಷ್ಣುವರ್ಧನ್ (Vishnuvardhan), ದ್ವಾರಕೀಶ್, ಸೌಂದರ್ಯ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ವಾಸು ಅವರು ತೆಲುಗಿನಲ್ಲಿ ‘ಚಂದ್ರಮುಖಿ’ ಎಂದು ರಿಮೇಕ್ ಮಾಡಿದರು. ರಜನಿಕಾಂತ್, ಜ್ಯೋತಿಕಾ, ನಯನತಾರಾ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗಿದೆ. ಎಲ್ಲಾ ಪಾತ್ರಗಳು ಬದಲಾಗಿವೆ. ವಾಸು ಅವರೇ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಸಿನಿಮಾ ಸೆಪ್ಟೆಂಬರ್ 15ರಂದು ರಿಲೀಸ್ ಆಗಲಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ.
‘ಚಂದ್ರಮುಖಿ’ ಸಿನಿಮಾದ ಕಥೆಗೂ ‘ಚಂದ್ರಮುಖಿ 2’ ಸಿನಿಮಾದ ಕಥೆಗೂ ಸಾಮ್ಯತೆ ಇದೆ. ಮನೆ ಒಂದರಲ್ಲಿ ಆತ್ಮದ ದಿಗ್ಬಂಧನ ಮಾಡುವುದು, ಅದೇ ಮನೆಗೆ ಒಂದಷ್ಟು ಮಂದಿ ಬಂದು ಉಳಿಯುವುದು, ರಾಜನ ಕಥೆ ಮೊದಲ ಭಾಗದಲ್ಲಿ ಇತ್ತು. ಈಗ ‘ಚಂದ್ರಮುಖಿ 2’ ಟ್ರೇಲರ್ನಲ್ಲೂ ಈ ಎಲ್ಲಾ ವಿಚಾರಗಳನ್ನು ತೋರಿಸಲಾಗಿದೆ. ಕಂಗನಾ ರಣಾವತ್ ಅವರು ಚಂದ್ರಮುಖಿ ಪಾತ್ರ ಮಾಡುತ್ತಿದ್ದಾರೆ. ಆದರೆ, ಅವರ ಫ್ಲ್ಯಾಶ್ಬ್ಯಾಕ್ ಕಥೆಯನ್ನು ಮಾತ್ರ ತೋರಿಸಲಾಗಿದೆ. ಹೀಗಾಗಿ, ಚಂದ್ರಮುಖಿಯ ಹಾರರ್ ಅವತಾರ ಗುಟ್ಟಾಗಿಯೇ ಇದೆ.
ರಾಘವ್ ಲಾರೆಸ್ಸ್ ಅವರು ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಅವರದ್ದು ಈ ಚಿತ್ರದಲ್ಲಿ ದ್ವಿಪಾತ್ರ. ಪುನರ್ಜನ್ಮದ ಕಥೆ ಕೂಡ ಸಿನಿಮಾದಲ್ಲಿದೆ. ಲಕ್ಷ್ಮಿ ಮೆನನ್, ವದಿವೇಲು ಸೇರಿ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ 37 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
The moment we’ve all been waiting for is finally here! 🌸
The most awaited OFFICIAL TRAILER of Chandramukhi-2 is OUT NOW on YouTube! 🗡️🏇🏻🔥#Chandramukhi2 🗝️
🎬 #PVasu
🌟 @offl_Lawrence @KanganaTeam
🎶 @mmkeeravaani
🎥 @RDRajasekar
🛠️ #ThottaTharani… pic.twitter.com/BmpgZtPZJU— Lyca Productions (@LycaProductions) September 3, 2023
ಹಾರರ್ ಸಿನಿಮಾ ಎಂದಾಗ ಅದಕ್ಕೆ ಹಿನ್ನೆಲೆ ಸಂಗೀತ ತುಂಬಾನೇ ಮುಖ್ಯವಾಗುತ್ತದೆ. ಈ ಚಿತ್ರಕ್ಕೆ ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಇದು ಕೂಡ ಗಮನ ಸೆಳೆದಿದೆ. ಈ ಚಿತ್ರಕ್ಕೆ ಸಂಗೀಯ ಸಂಯೋಜನೆ ಮಾಡೋದು ಚಾಲೆಂಜಿಂಗ್ ಆಗಿತ್ತು ಎಂದು ಅವರು ಈ ಮೊದಲು ಹೇಳಿಕೊಂಡಿದ್ದರು. ಲೈಕಾ ಪ್ರೊಡಕ್ಷನ್ಸ್ ದೊಡ್ಡ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡಿದೆ.
ಇದನ್ನೂ ಓದಿ: ಕಂಗನಾ ರಣಾವತ್ಗೆ ಒಲಿಯದ ರಾಷ್ಟ್ರ ಪ್ರಶಸ್ತಿ; ನಟಿಯ ಪ್ರತಿಕ್ರಿಯೆ ಏನು?
ಕಂಗನಾ ರಣಾವತ್ ಅವರು ಹಲವು ರೀತಿಯ ಪಾತ್ರಗಳನ್ನು ಮಾಡಿ ಗಮನ ಸೆಳೆದವರು. ಈಗ ಅವರು ಹಾರರ್ ಅವತಾರ ತಾಳಿದ್ದಾರೆ. ಇದನ್ನು ಹೇಗೆ ನಿಭಾಯಿಸಿದ್ದಾರೆ ಎಂಬುದನ್ನು ನೋಡುವ ತವಕ ಅಭಿಮಾನಿಗಳಲ್ಲಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:49 am, Mon, 4 September 23