ಮೀ ಟೂ ಆರೋಪಿ ಜೊತೆ ವೇದಿಕೆ ಹಂಚಿಕೊಂಡ ಕಮಲ್ ಹಾಸನ್; ಗಾಯಕಿಯ ಅಸಮಾಧಾನ

|

Updated on: Jan 02, 2024 | 11:48 AM

2018ರಲ್ಲಿ ಗೀತರಚನಕಾರ ವೈರಮುತ್ತು ವಿರುದ್ಧ ಚಿನ್ಮಯಿ ಅವರು ಲೈಂಗಿಕ ಕಿರಕುಳ ಆರೋಪ ಹೊರಿಸಿದ್ದರು. ಆ ಬಳಿಕ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಅವರನ್ನು ಐದು ವರ್ಷಗಳ ಕಾಲ ಇಂಡಸ್ಟ್ರಿಯಿಂದ ಬ್ಯಾನ್ ಮಾಡಲಾಯಿತು.

ಮೀ ಟೂ ಆರೋಪಿ ಜೊತೆ ವೇದಿಕೆ ಹಂಚಿಕೊಂಡ ಕಮಲ್ ಹಾಸನ್; ಗಾಯಕಿಯ ಅಸಮಾಧಾನ
ಕಮಲ್ ಹಾಸನ್-ಚಿನ್ಮಯಿ
Follow us on

ಗಾಯಕಿ ಚಿನ್ಮಯಿ ಶ್ರೀಪಾದ್ (Chinmayi Sripad) ಅವರು ಹಲವು ವಿಚಾರಗಳ ಬಗ್ಗೆ ಧ್ವನಿ ಎತ್ತುತ್ತಾರೆ. ಈಗ ಅವರು ಕಮಲ್ ಹಾಸನ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಮೀ ಟೂ ಆರೋಪಿ ವೈರಮುತ್ತು ಜೊತೆ ಕಮಲ್ ಹಾಸನ್ ವೇದಿಕೆ ಹಂಚಿಕೊಂಡಿದ್ದಾರೆ. ಇದನ್ನು ಚಿನ್ಮಯಿ ಶ್ರೀಪಾದ್ ಅವರು ಖಂಡಿಸಿದ್ದಾರೆ. ಅವರು ಮಾಡಿರುವ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ.

ಗೀತರಚನಕಾರ ವೈರಮುತ್ತು ಅವರು ಬರೆದ ‘ಮಹಾ ಕಿವಿತೈ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇತ್ತಿಚೆಗೆ ನಡೆದಿದೆ. ಈ ಕಾರ್ಯಕ್ರಮಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಕಮಲ್ ಹಾಸನ್ ಮೊದಲಾದವರು ಭಾಗಿ ಆಗಿದ್ದರು. ಇದನ್ನು ಚಿನ್ಮಯಿ ಅವರು ಖಂಡಿಸಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡಿದವರ ಬೆಂಬಲಕ್ಕೆ ದೊಡ್ಡ ದೊಡ್ಡ ವ್ಯಕ್ತಿಗಳು ಇದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದ ಕುರಿತು ಸನ್ ನ್ಯೂಸ್ ಟ್ವೀಟ್ ಮಾಡಿತ್ತು. ಇದನ್ನು ಚಿನ್ಮಯಿ ಅವರು ರೀಟ್ವೀಟ್ ಮಾಡಿಕೊಂಡಿದ್ದಾರೆ. ‘ನನಗೆ ಕಿರುಕುಳ ನೀಡಿದ ವ್ಯಕ್ತಿಗೆ ತಮಿಳುನಾಡಿನ ಕೆಲವು ಶಕ್ತಿಶಾಲಿ ವ್ಯಕ್ತಿಗಳು ಆಧಾರವಾಗಿದ್ದಾರೆ’ ಎಂದು ಅವರು ಟೀಕಿಸಿದ್ದಾರೆ.


ಇದನ್ನೂ ಓದಿ: ವಿನ್ನರ್​ಗೆ ಸಿಗೋದು 50 ಲಕ್ಷ ಅಲ್ಲ, 25 ಲಕ್ಷ ರೂಪಾಯಿ; ಶಿಕ್ಷೆ ಕೊಟ್ಟ ಬಿಗ್ ಬಾಸ್

2018ರಲ್ಲಿ ಗೀತರಚನಕಾರ ವೈರಮುತ್ತು ವಿರುದ್ಧ ಚಿನ್ಮಯಿ ಅವರು ಲೈಂಗಿಕ ಕಿರಕುಳ ಆರೋಪ ಹೊರಿಸಿದ್ದರು. ಆ ಬಳಿಕ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಅವರನ್ನು ಐದು ವರ್ಷಗಳ ಕಾಲ ಇಂಡಸ್ಟ್ರಿಯಿಂದ ಬ್ಯಾನ್ ಮಾಡಲಾಯಿತು. ಇದನ್ನು ಅವರು ಟೀಕಿಸುತ್ತಲೇ ಬರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ