AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್​ನ ಮ್ಯಾನೇಜರ್ ಆಗಿರಲಿಲ್ಲ ದಿಶಾ; ಇಬ್ಬರ ಬಗ್ಗೆ ಹೊಸ ವಿಚಾರ ರಿವೀಲ್ ಮಾಡಿದ ಅಂಕಿತಾ

ದಿಶಾ ಸಾವಿಗೂ ಸುಶಾಂತ್ ಮರಣಕ್ಕೂ ಸಂಬಂಧ ಕಲ್ಪಿಸಲಾಯಿತು. ಎಲ್ಲ ಕಡೆಗಳಲ್ಲೂ ಸುಶಾಂತ್ ಮ್ಯಾನೇಜರ್ ದಿಶಾ ಎಂದೇ ಬಳಸಲಾಯಿತು. ಆದರೆ ಅಸಲಿ ವಿಚಾರ  ಆರೀತಿ ಇರಲಿಲ್ಲ ಎನ್ನುತ್ತಾರೆ ಅಂಕಿತಾ.

ಸುಶಾಂತ್​ನ ಮ್ಯಾನೇಜರ್ ಆಗಿರಲಿಲ್ಲ ದಿಶಾ; ಇಬ್ಬರ ಬಗ್ಗೆ ಹೊಸ ವಿಚಾರ ರಿವೀಲ್ ಮಾಡಿದ ಅಂಕಿತಾ
ದಿಶಾ ಸಾಲಿಯಾನ್-ಅಂಕಿತಾ-ಸುಶಾಂತ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 02, 2024 | 12:37 PM

ಖ್ಯಾತ ಕಿರುತೆರೆ ನಟಿ ಅಂಕಿತಾ ಲೋಖಂಡೆ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಅವರು ಈಗ ಪತಿ ವಿಕ್ಕಿ ಜೈನ್ ಜೊತೆ ‘ಬಿಗ್ ಬಾಸ್ ಹಿಂದಿ ಸೀಸನ್ 17’ಗೆ ಆಗಮಿಸಿದ್ದಾರೆ. ಅವರು ಪತಿಯ ಜೊತೆ ಸದಾ ಜಗಳವಾಡುತ್ತಾ ಸುದ್ದಿ ಆಗುತ್ತಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಅಂಕಿತಾ ಲೋಖಂಡೆ ಅವರು ಆಗಾಗ ತಮ್ಮ ಮಾಜಿ ಪ್ರಿಯಕರ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ಇತ್ತೀಚೆಗೆ, ಬಿಗ್ ಬಾಸ್‌ನ ಗಾರ್ಡನ್ ಏರಿಯಾದಲ್ಲಿ ಕುಳಿತಾಗ ಅಂಕಿತಾ ಅವರು ಮುನಾವರ್ ಫಾರೂಕಿ (Munawar Faruqui) ಜೊತೆ ಸುಶಾಂತ್ ಸಿಂಗ್ ರಜಪೂತ್ ಮತ್ತು ಅವರ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಬಗ್ಗೆ ಮಾತನಾಡಿದ್ದಾರೆ. ಈ ಸಂಭಾಷಣೆಯ ಸಮಯದಲ್ಲಿ ದಿಶಾ ಬಗ್ಗೆ ಅಂಕಿತಾ ದೊಡ್ಡ ವಿಚಾರ ಬಹಿರಂಗಪಡಿಸಿದ್ದಾರೆ. ದಿಶಾ ಅವರು ಸುಶಾಂತ್ ಸಿಂಗ್ ಮ್ಯಾನೇಜರ್ ಆಗಿರಲಿಲ್ಲವಂತೆ.

ಸುಶಾಂತ್ ಸಿಂಗ್ ಸಾಯುವುದಕ್ಕೂ ಕೆಲವೇ ದಿನ ಮೊದಲು ದಿಶಾ ಮೃತಪಟ್ಟಿದ್ದರು. ಕಟ್ಟಡದಿಂದ ಬಿದ್ದು ಅವರು ಕೊನೆಯುಸಿರು ಎಳೆದರು. ಈ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ದಿಶಾ ಸಾವಿಗೂ ಸುಶಾಂತ್ ಮರಣಕ್ಕೂ ಸಂಬಂಧ ಕಲ್ಪಿಸಲಾಯಿತು. ಎಲ್ಲ ಕಡೆಗಳಲ್ಲೂ ಸುಶಾಂತ್ ಮ್ಯಾನೇಜರ್ ದಿಶಾ ಎಂದೇ ಬಳಸಲಾಯಿತು. ಆದರೆ ಅಸಲಿ ವಿಚಾರ  ಆರೀತಿ ಇರಲಿಲ್ಲ ಎನ್ನುತ್ತಾರೆ ಅಂಕಿತಾ.

ಸುಶಾಂತ್ ಅವರಿಂದ ದೂರ ಆಗಿದ್ದಕ್ಕೆ ಅಂಕಿತಾ ಕೂಡ ಸಾಕಷ್ಟು ಟ್ರೋಲ್​ ಆದರು. ಈ ಬಗ್ಗೆ ಅವರು ಮಾತನಾಡಿದ್ದಾರೆ. ಮುನಾವರ್ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ‘ಸುಶಾಂತ್ ಸತ್ತ ಕೆಲವು ದಿನಗಳ ನಂತರ ಅವರ ಮ್ಯಾನೇಜರ್ ದಿಶಾ ಕೂಡ ಸತ್ತರು ಅಲ್ಲವೇ’ ಎಂದು ಮುನಾವರ್ ಕೇಳಿದರು. ಆಗ ಅಂಕಿತಾ ಅವರು ‘ಇಲ್ಲ, ದಿಶಾ ಮೊದಲೇ ಮೃತಪಟ್ಟಿದ್ದರು’ ಎಂದರು. ‘ದಿಶಾ ಅವರು ಸುಶಾಂತ್​ ಸಿಂಗ್​ನ ಮ್ಯಾನೇಜರ್ ಅಲ್ಲ. ಐದು-ಆರು ದಿನಗಳ ಕಾಲ ಸುಶಾಂತ್​ನ ಕೆಲಸವನ್ನು ದಿಶಾ ನಿರ್ವಹಿಸಿದ್ದರು ಅಷ್ಟೇ. ಅವರು ಮ್ಯಾನೇಜರ್ ಆಗಿರಲಿಲ್ಲ’ ಎಂದು ಹೇಳಿದರು ಅಂಕಿತಾ.

ಮೊದಲಿನಿಂದಲೂ ದಿಶಾ ಅವರು ಸುಶಾಂತ್ ಸಿಂಗ್​ನ ಮ್ಯಾನೇಜರ್ ಎಂದೇ ಪರಿಗಣಿಸಲಾಗಿದೆ. ಆದರೆ, ಈಗ ಅಸಲಿ ವಿಚಾರ ರಿವೀಲ್ ಆಗಿದೆ. ಜೂನ್ 8ರಂದು ದಿಶಾ ಅವರು ತಾವಿರುವ ಅಪಾರ್ಟ್​ಮೆಂಟ್​ನಿಂದ ಬಿದ್ದು ಮೃತಪಟ್ಟರು. ಅವರ ಸಾವಿನ ಕುರಿತ ತನಿಖೆಯ ವಿಚಾರಣೆಗೆ ‘ಎಸ್​ಐಟಿ’ ತಂಡ ರಚನೆ ಮಾಡಲಾಗಿದೆ. ಸುಶಾಂತ್ ಅವರ ಮ್ಯಾನೇಜರ್ ಪಟ್ಟವನ್ನು ದಿಶಾಗೆ ಏಕೆ ನೀಡಲಾಯಿತು ಎನ್ನುವ ಪ್ರಶ್ನೆ ಅನೇಕರಲ್ಲಿ ಕಾಡಿದೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಅಂತಿಮ ದರ್ಶನಕ್ಕೆ ಹೋಗಲಿಲ್ಲವೇಕೆ? ಮಾಜಿ ಗರ್ಲ್​ಫ್ರೆಂಡ್ ಅಂಕಿತಾ ಕೊಟ್ಟರು ಕಾರಣ

ಅಂಕಿತಾ ಹಾಗೂ ಸುಶಾಂತ್ ಸಿಂಗ್ ರಜಪೂತ್ ‘ಪವಿತ್ರ ರಿಷ್ತಾ’ ಧಾರಾವಾಹಿಯಲ್ಲಿ ಒಟ್ಟಾಗಿ ಕೆಲಸ ಮಾಡಿದರು. ಇವರ ಮಧ್ಯೆ ಪ್ರೀತಿ ಮೂಡಿತು. ಇಬ್ಬರೂ ಹಲವು ವರ್ಷ ಡೇಟ್ ಮಾಡಿದರು. 2016ರಲ್ಲಿ ಸುಶಾಂತ್‌ನಿಂದ ಅಂಕಿತಾ ಬೇರ್ಪಟ್ಟರು. ಆ ಬಳಿಕ ಅಂಕಿತಾಗೆ ವಿಕ್ಕಿ ಜೈನ್ ಪರಿಚಯ ಆಯಿತು. ಇಬ್ಬರೂ ಪ್ರೀತಿಸಿ ಮದುವೆ ಆದರು. ಇವರ ಸಂಬಂಧ ಹದಗೆಟ್ಟಿದ್ದು, ವಿಚ್ಛೇದನದವರೆಗೆ ಹೋಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?