ಬರಿಗಾಲಲ್ಲಿ ಬಂದು ವೋಟ್ ಮಾಡಿದ ಚಿರಂಜೀವಿ; ಫ್ಯಾನ್ಸ್ಗೆ ಆಶ್ಚರ್ಯ
ಚಿರಂಜೀವಿ ಅವರು ವೋಟಿಂಗ್ಬೂತ್ಗೆ ಬರಿಗಾಲಲ್ಲಿ ಆಗಮಿಸಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ತೆಲಂಗಾಣ ವಿಧಾನಸಭೆ ಚುನಾವಣೆ ಆರಂಭ ಆಗಿದೆ. ಇಂದು (ನವೆಂಬರ್ 30) ಮತದಾನ ನಡೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ವೋಟ್ ಮಾಡುತ್ತಿದ್ದಾರೆ. ಚಿರಂಜೀವಿ, ರಾಜಮೌಳಿ (SS Rajamouli) ಸೇರಿ ಅನೇಕ ಸೆಲೆಬ್ರಿಟಿಗಳು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿ ಅಭಿಮಾನಿಗಳ ಬಳಿ ಮತದಾನ ಮಾಡುವಂತೆ ಕೋರಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರು ಪೋಲಿಂಗ್ಬೂತ್ಗೆ ಬರಿಗಾಲಿನಲ್ಲಿ ಸಾಗಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಫ್ಯಾನ್ಸ್ ವಲಯದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ.
ಚಿರಂಜೀವಿ ಅವರು ಕಾರಿನಲ್ಲಿ ಮತದಾನದ ಕೇಂದ್ರಕ್ಕೆ ಬಂದರು. ಅವರು ಜೀನ್ಸ್ ಹಾಗೂ ಶರ್ಟ್ ಹಾಕಿ ಬರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರು ಕಪ್ಪು ಪಂಚೆ ಹಾಗೂ ಕಪ್ಪು ಬಣ್ಣದ ಶರ್ಟ್ ಧರಿಸಿದ್ದರು. ಹೆಗಲಿಗೆ ಕಪ್ಪು ಬಣ್ಣದ ಶಾಲು ಹಾಕಿದ್ದರು. ಕಾಲಿಗೆ ಚಪ್ಪಲಿ ಧರಿಸಿರಲಿಲ್ಲ. ಇದಕ್ಕೆ ಕಾರಣವೂ ಇದೆ. ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕಿದರೆ ಈ ರೀತಿಯ ಬಟ್ಟೆ ಧರಿಸುತ್ತಾರೆ. ಹೀಗಾಗಿ, ಚಿರಂಜೀವಿ ಅವರು ಅಯ್ಯಪ್ಪನಿಗೆ ಮಾಲೆ ಹಾಕಿದ್ದಾರೆ ಎಂದು ಎಲ್ಲರೂ ಊಹಿಸಿದ್ದಾರೆ.
ಸಿನಿಮಾ ವಿಚಾರದಲ್ಲಿ ಚಿರಂಜೀವಿ ಅವರು ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ. ‘ಗಾಡ್ ಫಾದರ್’ ಹಾಗೂ ‘ಭೋಲಾ ಶಂಕರ್’ ಸಿನಿಮಾಗಳು ಹೀನಾಯವಾಗಿ ಸೋತವು. ‘ವಾಲ್ತೇರು ವೀರಯ್ಯ’ ಚಿತ್ರ ಕೂಡ ಸಾಧಾರಾಣ ಹಿಟ್ ಎನಿಸಿಕೊಂಡಿತು. ಸದ್ಯ ‘ಮೆಗಾ 156, 157 ಹಾಗೂ 158’ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಎಲ್ಲಾ ಸಿನಿಮಾಗಳು ಘೋಷಣೆ ಆಗಿದ್ದು, ಸಿನಿಮಾ ಕೆಲಸ ಇನ್ನಷ್ಟೇ ಆರಂಭ ಆಗಬೇಕಿದೆ.
Megastar @KChiruTweets #Surekha and #Sreeja came to cast their vote 🗳️ at booth no.149, Jubilee Hills.
#MegastarChiranjeevi #Chiranjeevi #TelanganaElections2023 #Elections2023 pic.twitter.com/apyWCh1leS
— mega family fans kothagudem (@RamaRao73268275) November 30, 2023
ಇದನ್ನೂ ಓದಿ: ಬಾಲ್ಯದ ಗೆಳೆಯನಿಗೆ ಅನಾರೋಗ್ಯ, ಕೂಡಲೇ ಸಹಾಯಕ್ಕೆ ಧಾವಿಸಿದ ಮೆಗಾಸ್ಟಾರ್ ಚಿರಂಜೀವಿ
ಚಿರಂಜೀವಿ 156ನೇ ಚಿತ್ರಕ್ಕೆ ಸುಷ್ಮಿತಾ ಕೊನಿಡೆಲಾ ಅವರು ನಿರ್ದೇಶನ ಮಾಡುತ್ತಿದ್ದಾರೆ. 157ನೇ ಚಿತ್ರಕ್ಕೆ ವಸಿಷ್ಠ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೊದಲು ‘ಬಿಂಬಿಸಾರ’ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ಚಿರಂಜೀವಿ 158ನೇ ಚಿತ್ರಕ್ಕೆ ಬೋಯಪತಿ ಶ್ರೀನು ನಿರ್ದೇಶನ ಮಾಡಲಿದ್ದಾರೆ. ಸಾಕಷ್ಟು ಆ್ಯಕ್ಷನ್ ಚಿತ್ರಗಳನ್ನು ಅವರು ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ