ನಟ ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ 2024ರ ವರ್ಷ ತುಂಬ ಸ್ಪೆಷಲ್. ಯಾಕೆಂದರೆ ಈ ವರ್ಷ ಅವರಿಗೆ ಅನೇಕ ಪುರಸ್ಕಾರಗಳು ಸಿಗುತ್ತಿವೆ. ಅವರು ‘ಪದ್ಮ ವಿಭೂಷಣ’ ಪ್ರಶಸ್ತಿ ಪಡೆದಿದ್ದು ಅಭಿಮಾನಿಗಳಿಗೆ ಹೆಮ್ಮೆಯ ವಿಷಯ. ಈಗ ಚಿರಂಜೀವಿ ಅವರು ಗಿನ್ನೆಸ್ ದಾಖಲೆ ಬರೆದಿದ್ದಾರೆ. ಇಂದು (ಸೆಪ್ಟೆಂಬರ್ 22) ಅವರಿಗೆ ‘ಭಾರತೀಯ ಚಿತ್ರರಂಗದ ಮೋಸ್ಟ್ ಪ್ರೊಫೈಲಿಕ್ ಸ್ಟಾರ್’ ಎಂದು ಪ್ರಮಾಣಪತ್ರ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಬಾಲಿವುಡ್ ನಟ ಆಮಿರ್ ಖಾನ್ ಕೂಡ ಹಾಜರಿದ್ದರು.
ಚಿರಂಜೀವಿ ಅವರು ಈವರೆಗೂ 156 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಳೆದ 46 ವರ್ಷಗಳಿಂದ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಈವರೆಗಿನ ತಮ್ಮ ವೃತ್ತಿ ಜೀವನದಲ್ಲಿ ಚಿರಂಜೀವಿ ಅವರು 537 ಹಾಡುಗಳಲ್ಲಿ ಡ್ಯಾನ್ಸ್ ಮಾಡಿದ್ದಾರೆ. 24 ಸಾವಿರ ಡ್ಯಾನ್ಸ್ ಸ್ಟೆಪ್ಸ್ ಹಾಕಿದ್ದಾರೆ. ಈ ಸಾಧನೆಗಾಗಿ ಅವರ ಹೆಸರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿ ಸೇರಿಕೊಂಡಿದೆ.
ಇದನ್ನೂ ಓದಿ: ಹಿಮ್ಮುಖವಾಗಿ ಇನ್ಲೈನ್ ಸ್ಕೇಟಿಂಗ್ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ ಕರ್ನಾಟಕ ಕ್ಲಬ್ ಸದಸ್ಯ
ಹೈದರಾಬಾದ್ನಲ್ಲಿ ಚಿರಂಜೀವಿ ಅವರಿಗೆ ಗಿನ್ನಿಸ್ ರೆಕಾರ್ಡ್ನ ಪ್ರಮಾಣಪತ್ರ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಅಶ್ವಿನಿ ದತ್ತ, ಬಿ. ಗೋಪಾಲ್, ಅಲ್ಲು ಅರವಿಂದ್, ಸುರೇಶ್ ಬಾಬು, ರಾಘವೇಂದ್ರ ರಾವ್, ಬಾಬಿ, ಗುಣಶೇಖರ್, ವಸಿಷ್ಠ, ಸುಷ್ಮಿತಾ, ವರುಣ್ ತೇಜ್, ವೈಷ್ಣವ್ ತೇಜ್ ಮುಂತಾದವರು ಆಗಮಿಸಿದ್ದರು. ಎಲ್ಲರ ಸಮ್ಮುಖದಲ್ಲಿ ಚಿರಂಜೀವಿ ಅವರು ಈ ಪ್ರಮಾಣಪತ್ರ ಪಡೆದಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.
MEGASTAR #Chiranjeevi garu Honored with Guinness World Record for 537 songs , 24,000 dance moves in 156 films #GuinnessRecordForMEGASTAR
The Dancing Sensation @KChiruTweets #MegastarChiranjeevi pic.twitter.com/H5uGBPFCDx
— Chiranjeevi Army (@chiranjeeviarmy) September 22, 2024
ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಅವರು ಮಾತನಾಡಿ, ‘ಚಿರಂಜೀವಿ ನನಗೆ ಅಣ್ಣನ ಸಮಾನ. ನಾನು ಅವರ ಅಭಿಮಾನಿ ಕೂಡ. ಅವರಿಗೆ ಇಂದು ಈ ಗೌರವ ಸಿಕ್ಕಿದ್ದಕ್ಕೆ ನನಗೆ ಖುಷಿಯಾಗಿದೆ’ ಎಂದರು. ತಮ್ಮನ್ನು ಓರ್ವ ಡ್ಯಾನಿಂಗ್ ಹೀರೋ ಎಂದು ಗುರುತಿಸಿದ್ದಕ್ಕೆ ಚಿರಂಜೀವಿ ಅವರಿಗೆ ಸಂತಸ ಆಗಿದೆ. ಅಂದಹಾಗೆ, ಈ ದಿನ (ಸೆ.22) ಚಿರಂಜೀವಿ ಪಾಲಿಗೆ ವಿಶೇಷ ದಿನಾಂಕ. ಯಾಕೆಂದರೆ, ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಕೂಡ ಇದೇ (1978ರ ಸೆಪ್ಟೆಂಬರ್ 22) ದಿನಾಂಕದಲ್ಲಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:51 pm, Sun, 22 September 24