AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಟ್​ನಲ್ಲಿ ಇದ್ದರೆ ಚಿರು, ಜೋಶ್ ಶುರು: ಹೊಸ ಸಿನಿಮಾ ಚಿತ್ರೀಕರಣದ ವಿಡಿಯೋ ಹಂಚಿಕೊಂಡ ಮೆಗಾಸ್ಟಾರ್

Bhola Shankar: ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ಚಿತ್ರೀಕರಣ ಸೆಟ್​ನಲ್ಲಿ ಹೇಗಿರುತ್ತಾರೆ? ಸಹನಟರೊಟ್ಟಿಗೆ ಹೇಗೆ ವರ್ತಿಸುತ್ತಾರೆ? ವಿಡಿಯೋ ಇಲ್ಲಿದೆ...

ಸೆಟ್​ನಲ್ಲಿ ಇದ್ದರೆ ಚಿರು, ಜೋಶ್ ಶುರು: ಹೊಸ ಸಿನಿಮಾ ಚಿತ್ರೀಕರಣದ ವಿಡಿಯೋ ಹಂಚಿಕೊಂಡ ಮೆಗಾಸ್ಟಾರ್
ಭೋಲಾ ಶಂಕರ್
Follow us
ಮಂಜುನಾಥ ಸಿ.
|

Updated on: Jun 09, 2023 | 3:41 PM

ಮೆಗಾಸ್ಟಾರ್ ಚಿರಂಜೀವಿಗೆ (Megastar Chiranjeevi) ಈಗ ವಯಸ್ಸು 67 ವರ್ಷ ವಯಸ್ಸು. ಈಗಲೂ ಸಿನಿಮಾಗಳಲ್ಲಿ ಹದಿ ಹರೆಯದವರಂತೆ ನೃತ್ಯ ಮಾಡುತ್ತಾರೆ. ಫೈಟ್ ದೃಶ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಾರೆ. ಕಿರಿಯರ ಸಿನಿಮಾಗಳ ಕಾರ್ಯಕ್ರಮಕ್ಕೆ ಹೋಗಿ ಶುಭ ಹಾರೈಸುತ್ತಾರೆ. ನರೆ-ಹೊರೆಯ ಚಿತ್ರರಂಗದವರ ಖಾಸಗಿ ಕಾರ್ಯಕ್ರಮಗಳಿಗೆ ಹೋಗುತ್ತಾರೆ. ಈ ವಯಸ್ಸಿನಲ್ಲೂ ಸಖತ್ ಉತ್ಸಾಹಭರಿತರಾಗಿರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಚಿರಂಜೀವಿ ಸ್ವತಃ ಅವರದ್ದೇ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಎರಡು ದಿನಗಳ ಹಿಂದಷ್ಟೆ ಅಂಬರೀಶ್-ಸುಮಲತಾ (Ambareesh-Sumalatha) ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಅವರುಗಳ ಆರತಕ್ಷತೆಗೆ ಬಂದಿದ್ದ ಚಿರಂಜೀವಿ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಸಿನಿಮಾ ಚಿತ್ರೀಕರಣವನ್ನು ತಪ್ಪಿಸಿಕೊಳ್ಳುವುದಿಲ್ಲ. ಇದೀಗ ಭೋಲಾ ಶಂಕರ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ನಟ ಚಿರಂಜೀವಿ ಸಿನಿಮಾ ಶೂಟಿಂಗ್​ನ ದೃಶ್ಯವೊಂದನ್ನು ಹಂಚಿಕೊಂಡಿದ್ದಾರೆ. ಚಿತ್ರೀಕರಣ ಸೆಟ್​ನಲ್ಲಿ ಮೆಗಾಸ್ಟಾರ್ ಎಂಬ ಹಮ್ಮು-ಬಿಮ್ಮು ಇಲ್ಲದೆ ಎಲ್ಲರೊಟ್ಟಿಗೂ ಎಷ್ಟು ಸರಳವಾಗಿ ವರ್ತಿಸುತ್ತಾರೆ, ಎಲ್ಲರನ್ನೂ ನಗಿಸುತ್ತಾ ಹೇಗೆ ಸೆಟ್​ಗೆ ಜೋಶ್​ಗೆ ತುಂಬಿಸುತ್ತಾರೆ ಎಂಬುದು ವಿಡಿಯೋದಿಂದ ಗೊತ್ತಾಗುತ್ತಿದೆ.

ಭೋಲಾ ಶಂಕರ್ ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್, ತಮನ್ನಾ ಸೇರಿದಂತೆ ಇನ್ನೂ ಹಲವು ನಟರು ನಟಿಸಿದ್ದು, ಹಾಡೊಂದರ ದೃಶ್ಯದ ಚಿತ್ರೀಕರಣದ ವಿಡಿಯೋವನ್ನು ಚಿರಂಜೀವಿ ಹಂಚಿಕೊಂಡಿದ್ದು, ಕೀರ್ತಿ ಸುರೇಶ್, ತಮನ್ನಾ ಅವರೊಟ್ಟಿಗೆ ಬಹು ಆತ್ಮೀಯತೆಯಿಂದ ಚಿರಂಜೀವಿ ವರ್ತಿಸುತ್ತಾರೆಂಬುದಕ್ಕೆ ವಿಡಿಯೋ ಸಾಕ್ಷಿಯಾಗಿದೆ. ಕೇವಲ ತಮ್ಮ ಸಹನಟರೊಟ್ಟಿಗೆ ಮಾತ್ರವೇ ಅಲ್ಲದೆ, ಸಿನಿಮಾ ಸೆಟ್​ನಲ್ಲಿರುವ ಎಲ್ಲರೊಟ್ಟಿಗೆ ಮಾತನಾಡುತ್ತಾ, ನಗುತ್ತಾ. ನಗಿಸುತ್ತಾ ಎಲ್ಲರಿಗೂ ಜೋಶ್​ ತುಂಬುತ್ತಾ ಚಿತ್ರೀಕರಣ ಸಾಗುವಂತೆ ಮಾಡುತ್ತಾರೆ ನಟ ಚಿರಂಜೀವಿ.

ಇದೀಗ ಚಿರಂಜೀವಿ ಹಂಚಿಕೊಂಡಿರುವ ವಿಡಿಯೋನಲ್ಲಿ ಚಿರು ಹಾಗೂ ನಟಿ ಕೀರ್ತಿ ಸುರೇಶ್ ನಡುವೆ ಇರುವ ಆಪ್ತ ಬಾಂಧವ್ಯದ ಅರಿವಾಗುತ್ತಿದೆ. ಇಬ್ಬರು ಪರಸ್ಪರ ಬಹಳ ಆಪ್ತರು. ಭೋಲಾ ಶಂಕರ್ ಸಿನಿಮಾದಲ್ಲಿ ಕೀರ್ತಿ ಸುರೇಶ್, ಚಿರಂಜೀವಿಯ ಸಹೋದರಿಯ ಮಾತ್ರದಲ್ಲಿ ನಟಿಸಿದ್ದಾರೆ. ನಟಿ ತಮನ್ನಾ, ಚಿರಂಜೀವಿಯ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಕೀರ್ತಿ ಸುರೇಶ್ ಬಾಯ್​ಫ್ರೆಂಡ್ ಪಾತ್ರದಲ್ಲಿ ಸಂತೋಶ್ ಅನುಮೋಲ್ ನಟಿಸಿದ್ದಾರೆ. ಎಲ್ಲರೂ ಸಹ ಒಟ್ಟಿಗೆ ಹಾಡೊಂದರ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ನಟ ಚಿರಂಜೀವಿ ನಟನೆಯ ಭೋಲಾ ಶಂಕರ್ ತಮಿಳಿನ ಸಿನಿಮಾದ ರೀಮೇಕ್ ಆಗಿದೆ. ತಮಿಳಿನಲ್ಲಿ ಅಜಿತ್ ನಟಿಸಿದ್ದ ಪಾತ್ರದಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಭೋಲಾ ಶಂಖರ್ ಬಳಿಕ ಆಟೋ ಜಾನಿ ಸಿನಿಮಾದಲ್ಲಿ ಚಿರಂಜೀವಿ ನಟಿಸಲಿದ್ದಾರೆ. ಈ ಎರಡೂ ಸಿನಿಮಾಗಳ ಬಳಿಕ ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟ ಚಿರಂಜೀವಿ. ಅದಾದ ಬಳಿಕ ತೆಲುಗಿನ ಸ್ಟಾರ್ ನಿರ್ದೇಶಕರೊಬ್ಬರ ಸಿನಿಮಾದಲ್ಲಿ ಚಿರಂಜೀವಿ ನಟಿಸಲಿದ್ದಾರೆ ಎಂಬ ಮಾತುಗಳಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ