AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲ್-ರಜನಿ ಕಾಂಬಿನೇಷನ್ ಸಿನಿಮಾ: ಯುವ ನಿರ್ದೇಶಕನಿಗೆ ಅದೃಷ್ಟ

Rajinikanth-Kamal Haasan: ಪರಸ್ಪರ ಒಳ್ಳೆಯ ಗೆಳೆರಾಗಿರುವ ಕಮಲ್ ಹಾಸನ್ ಮತ್ತು ರಜನೀಕಾಂತ್ ಅವರನ್ನು ಒಟ್ಟಿಗೆ, ಒಂದೇ ಸಿನಿಮಾನಲ್ಲಿ ತೆರೆಗೆ ತರಲು ಕಳೆದ ಕೆಲ ವರ್ಷಗಳಿಂದ ಹಲವು ನಿರ್ಮಾಪಕರು, ನಿರ್ದೇಶಕರು ಪ್ರಯತ್ನಿಸಿದರಾದರೂ ಸಾಧ್ಯ ಆಗಿರಲಿಲ್ಲ. ಆದರೆ ಇದೀಗ ಸ್ವತಃ ಕಮಲ್ ಹಾಸನ್ ಅವರೇ ಈ ಅಸಾಧ್ಯವನ್ನು ಸಾಧ್ಯ ಮಾಡಲು ಮುಂದಾಗಿದ್ದಾರೆ. ಇದೀಗ ಈ ಪ್ರಾಜೆಕ್ಟ್​​ಗೆ ನಿರ್ದೇಶಕರು ಸಹ ಸಿಕ್ಕಿದ್ದಾರೆ.

ಕಮಲ್-ರಜನಿ ಕಾಂಬಿನೇಷನ್ ಸಿನಿಮಾ: ಯುವ ನಿರ್ದೇಶಕನಿಗೆ ಅದೃಷ್ಟ
Kamal Haasan Rajinikanth
ಮಂಜುನಾಥ ಸಿ.
|

Updated on: Jan 04, 2026 | 8:52 PM

Share

ಕಮಲ್ ಹಾಸನ್ (Kamal Haasan) ಮತ್ತು ರಜನೀಕಾಂತ್ ತಮಿಳುನಾಡಿನ ಮಾತ್ರವಲ್ಲ ಭಾರತೀಯ ಚಿತ್ರರಂಗದ ಇಬ್ಬರು ಮೇರು ಸೂಪರ್ ಸ್ಟಾರ್​​ಗಳು. ಇಬ್ಬರ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾಗಳು ಆಗ ಸೂಪರ್ ಹಿಟ್ ಆಗಿದ್ದವು. ಆದರೆ ಇಬ್ಬರಿಗೂ ಸ್ಟಾರ್​​ಡಮ್ ಬಂದ ಬಳಿಕ ಒಟ್ಟಿಗೆ ನಟಿಸಿದ್ದೇ ಇಲ್ಲ. ಪರಸ್ಪರ ಒಳ್ಳೆಯ ಗೆಳೆಯರೂ ಆಗಿರುವ ಕಮಲ್ ಹಾಸನ್ ಮತ್ತು ರಜನೀಕಾಂತ್ ಅವರನ್ನು ಒಟ್ಟಿಗೆ ತರಲು ಹಲವು ನಿರ್ಮಾಪಕರು, ನಿರ್ದೇಶಕರು ಪ್ರಯತ್ನಿಸಿದರಾದರೂ ಸಾಧ್ಯ ಆಗಿರಲಿಲ್ಲ. ಆದರೆ ಇದೀಗ ಸ್ವತಃ ಕಮಲ್ ಹಾಸನ್ ಅವರೇ ಈ ಅಸಾಧ್ಯವನ್ನು ಸಾಧ್ಯ ಮಾಡಲು ಮುಂದಾಗಿದ್ದಾರೆ.

ಕಮಲ್ ಹಾಸನ್ ಅವರು ತಮ್ಮ ಬಹು ದಶಕದ ಗೆಳೆಯ ರಜನೀಕಾಂತ್ ಅವರಿಗಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾನಲ್ಲಿ ಕಮಲ್ ಹಾಸನ್ ಅತಿಥಿ ಪಾತ್ರದಲ್ಲಿ ಮಾತ್ರವೇ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕೆಲ ವಾರಗಳ ಹಿಂದಷ್ಟೆ ಈ ಸಿನಿಮಾದ ಘೋಷಣೆ ಆಗಿತ್ತು. ಸಿನಿಮಾ ಅನ್ನು ತಮಿಳು ಚಿತ್ರರಂಗದ ಅನುಭವಿ ನಿರ್ದೇಶಕ ಸುಂದರ್ ಸಿ ನಿರ್ದೇಶನ ಮಾಡಲಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ ಕೆಲ ದಿನಗಳ ಬಳಿಕ ಸುಂದರ್ ಸಿ ಅವರು ಸ್ವತಃ ಸಿನಿಮಾದಿಂದ ಹೊರಗೆ ಹೋದರು.

ಸುಂದರ್ ಸಿ ಅವರ ನಿರ್ಗಮನದ ಬಳಿಕ ರಜನೀಕಾಂತ್ ಅವರ 173ನೇ ಸಿನಿಮಾದ ನಿರ್ದೇಶಕನಿಗಾಗಿ ಹುಡುಕಾಟ ನಡೆಸಿದ್ದರು ಕಮಲ್ ಹಾಸನ್. ಇದೀಗ ನಿರ್ದೇಶಕನ ನಿಗದಿ ಆಗಿದೆ. ಯುವ ನಿರ್ದೇಶಕನಿಗೆ ರಜನೀಕಾಂತ್ ಅವರ 173ನೇ ಸಿನಿಮಾ ನಿರ್ದೇಶಿಸುವ ಅವಕಾಶ ಸಿಗುವ ಜೊತೆಗೆ ಕಮಲ್ ಹಾಸನ್ ಅವರ ನೇತೃತ್ವದಲ್ಲಿ ಈ ಸಿನಿಮಾದ ನಿರ್ದೇಶನ ಮಾಡುವ ಅವಕಾಶ ಒದಗಿ ಬಂದಿದೆ.

ಇದನ್ನೂ ಓದಿ:ನಿವೃತ್ತಿ ಬಗ್ಗೆ ಕಮಲ್ ಹಾಸನ್ ಮಾತು: ಕೊನೆ ಸಿನಿಮಾ ಯಾವಾಗ?

ಯುವ ನಿರ್ದೇಶಕ ಶಿಬಿ ಚಕ್ರವರ್ತಿ ಅವರು ರಜನೀಕಾಂತ್ ನಟಿಸಿ, ಕಮಲ್ ಹಾಸನ್ ನಿರ್ಮಾಣ ಮಾಡುತ್ತಿರುವ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ಶಿಬಿ ಅವರು ಈ ವರೆಗೆ ನಿರ್ದೇಶನ ಮಾಡಿರುವುದು ಕೇವಲ ಒಂದು ಸಿನಿಮಾ ಮಾತ್ರ. ಶಿವಕಾರ್ತಿಕೇಯನ್ ನಿರ್ದೇಶನದ ‘ಡಾನ್’ ಸಿನಿಮಾ ನಿರ್ದೇಶನ ಮಾಡಿದ್ದ ಶಿಬಿ. ಕೆಲವಾರು ಸಿನಿಮಾಗಳಿಗೆ ಪ್ರಮುಖ ಅಸಿಸ್ಟೆಂಟ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದೀಗ ರಜನೀಕಾಂತ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಅಸಲಿಗೆ ಈ ಸಿನಿಮಾ ನಿರ್ದೇಶನ ಮಾಡುವ ರೇಸಿನಲ್ಲಿ ತಮಿಳಿನ ಹಲವು ನಿರ್ದೇಶಕರುಗಳಿದ್ದರು. ನೆಲ್ಸನ್, ನಿಥಿಲನ್ ಸಾಮಿನಾಥನ್, ಎಸ್‌ಯು ಅರುಣ್‌ಕುಮಾರ್, ಆರ್‌ಜೆ ಬಾಲಾಜಿ, ಬಾಲಕೃಷ್ಣನ್ ಇನ್ನೂ ಕೆಲವರ ಹೆಸರುಗಳು ಕೇಳಿ ಬಂದಿದ್ದವು. ಆದರೆ ಅಂತಿಮವಾಗಿ ಅವಕಾಶ ಶಿಬಿ ಅವರಿಗೆ ದೊರೆತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ
ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ