‘ಸಲಾರ್’ಗಾಗಿ ಸೆಟ್ ಹಾಕಿದ್ದು ಎಲ್ಲಿ? ಎಷ್ಟು ಬೃಹತ್ ಆಗಿತ್ತು ಆ ಸೆಟ್?
Salaar: ‘ಸಲಾರ್’ ಸಿನಿಮಾದ ಸಿನಿಮಾಟೊಗ್ರಾಫರ್ ಭುವನ್ ಗೌಡ, ‘ಸಲಾರ್’ ಸಿನಿಮಾದ ಬೃಹತ್ತತೆಯ ಬಗ್ಗೆ ಮಾತನಾಡಿದ್ದಾರೆ. ಸಿನಿಮಾಕ್ಕೆ ಹಾಕಿದ್ದ ಸೆಟ್ ಎಷ್ಟು ದೊಡ್ಡದಿತ್ತು ಗೊತ್ತೆ?

ಪ್ರಭಾಸ್ (Prabhas) ನಟನೆಯ ‘ಸಲಾರ್’ (Salaar) ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ‘ಕೆಜಿಎಫ್’ ನಿರ್ಮಾಣ ಮಾಡಿದ್ದ ತಂಡವೇ ‘ಸಲಾರ್’ ಸಿನಿಮಾವನ್ನೂ ಸಹ ನಿರ್ಮಿಸಿದ್ದು, ಭಾರಿ ನಿರೀಕ್ಷೆ ಸಿನಿಮಾದ ಮೇಲಿದೆ. ಈ ವರ್ಷದ ಅತಿ ದೊಡ್ಡ ಬ್ಲಾಕ್ ಬಸ್ಟರ್ ಈ ಸಿನಿಮಾ ಆಗಲಿದೆ ಎಂಬ ಲೆಕ್ಕಾಚಾರವಿದೆ. ‘ಕೆಜಿಎಫ್’, ‘ಕೆಜಿಎಫ್ 2’ ಅಂಥಹಾ ಬ್ಲಾಕ್ ಬಸ್ಟರ್ ನೀಡಿರುವ ತಂತ್ರಜ್ಞರ ತಂಡವೇ ‘ಸಲಾರ್’ ಸಿನಿಮಾಕ್ಕೂ ಕೆಲಸ ಮಾಡಿದ್ದು, ‘ಕೆಜಿಎಫ್’ ಗಿಂತಲೂ ಐದು ಪಟ್ಟು ಬೃಹತ್ ಆದ ಸಿನಿಮಾ ‘ಸಲಾರ್’ ಎಂದು ಸಿನಿಮಾದ ಕ್ಯಾಮೆರಾಮನ್ ಭುವನ್ ಗೌಡ ಹೇಳಿದ್ದಾರೆ. ಕೆಲವು ಉದಾಹರಣೆಗಳನ್ನು ಸಹ ನೀಡಿದ್ದಾರೆ.
ರಾಮೋಜಿರಾವ್ ಫಿಲ್ಮ್ ಸಿಟಿಯೊಳಗೆ ‘ಸಲಾರ್’ ಸಿನಿಮಾದ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಭುವನ್ ಹೇಳಿರುವಂತೆ ರಾಮೋಜಿರಾವ್ ಒಳಗೆ ಮತ್ತೊಂದು ರಾಮೋಜಿರಾವ್ ಫಿಲ್ಮ್ ಸಿಟಿಯನ್ನೇ ನಿರ್ಮಾಣ ಮಾಡಿತ್ತಂತೆ ಚಿತ್ರತಂಡ. ಸಿನಿಮಾದ ಕಲಾ ನಿರ್ದೇಶಕ ಶಿವಕುಮಾರ್ ಮತ್ತು ಅವರ ತಂಡ ಬರೋಬ್ಬರಿ 100 ಎಕರೆ ಜಾಗ ಬಳಸಿ ಭಾರಿ ದೊಡ್ಡ-ದೊಡ್ಡ ಸೆಟ್ ನಿರ್ಮಾಣ ಮಾಡಿದ್ದರಂತೆ. ಆ 100 ಎಕರೆ ಸೆಟ್ ಅನ್ನು ರಕ್ಷಿಸಲು ದೊಡ್ಡ ಗೋಡೆಗಳನ್ನು ಸಹ ತಾತ್ಕಾಲಿಕವಾಗಿ ಕಟ್ಟಲಾಗಿತ್ತಂತೆ.
‘‘ಇಷ್ಟು ಬೃಹತ್ ಆದ ಸೆಟ್ ಅನ್ನು ಭಾರತದ ಇನ್ಯಾವುದೇ ಸಿನಿಮಾಕ್ಕೂ ಹಾಕಿರಲಿಕ್ಕೆ ಸಾಧ್ಯವಿಲ್ಲ. ಕೆಜಿಎಫ್ಗೆ ಹೋಲಿಸಿದರೆ ಐದು ಪಟ್ಟು ಬೃಹತ್ ಆದ ಸಿನಿಮಾ ಇದು ಎಂದಿರುವ ಭುವನ್ ಗೌಡ ‘‘ಸಿನಿಮಾದ ಬಹುತೇಕ ಭಾಗವನ್ನು ಸೆಟ್ಗಳಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿ ಕೇವಲ 5 ಪ್ರತಿಶತಃ ಮಾತ್ರವೇ ವಿಎಫ್ಎಕ್ಸ್ ಅನ್ನು ಬಳಸಲಾಗಿದೆ. ಹಾಗಾಗಿ ಸಿನಿಮಾ ಹೆಚ್ಚು ರಿಯಲಿಸ್ಟಿಕ್ ಆಗಿ ಮೂಡಿ ಬಂದಿದೆ’’ ಎಂದಿದ್ದಾರೆ.
ಇದನ್ನೂ ಓದಿ:Prabhas: ಪ್ರಭಾಸ್ಗಾಗಿ ‘ಸಲಾರ್’ ಪ್ರಮೋಷನ್ಗೆ ಬರಲಿದ್ದಾರೆ ನಿರ್ದೇಶಕ ರಾಜಮೌಳಿ
‘ಸಲಾರ್’ ಸಿನಿಮಾಕ್ಕೆ ಬಳಸಿರುವ ಕ್ಯಾಮೆರಾ ಬಗ್ಗೆಯೂ ಭುವನ್ ಗೌಡ ಮಾಹಿತಿ ನೀಡಿದ್ದು, ‘ಸಲಾರ್’ ಸಿನಿಮಾಕ್ಕೆ ಅಲೆಕ್ಸಾ 39 ಎನ್ನು ಅತ್ಯಾಧುನಿಕ ಕ್ಯಾಮೆರಾ ಬಳಸಲಾಗಿದೆ. ಈ ಕ್ಯಾಮೆರಾದ ದೃಶ್ಯಗಳು ಐಮ್ಯಾಕ್ಸ್ ಗುಣಮಟ್ಟವನ್ನು ಹೊಂದಿರುತ್ತವೆ, ಎಲ್ಲ ರೀತಿಯ ಪರದೆಗಳ ಮೇಲೂ ಸಹ ಅದ್ಭುತ ಗುಣಮಟ್ಟದ ದೃಶ್ಯಗಳನ್ನು ಮೂಡಿಸುತ್ತವೆ’ ಎಂದಿದ್ದಾರೆ.
‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾಕ್ಕೂ ಭುವನ್ ಗೌಡ ಅವರೇ ಸಿನಿಮಾಟೊಗ್ರಾಫರ್ ಆಗಿದ್ದರು. ಯಶ್ರ ಮುಂದಿನ ಸಿನಿಮಾ ‘ಟಾಕ್ಸಿಕ್’ಗೂ ಇವರದ್ದೇ ಸಿನಿಮಾಟೊಗ್ರಫಿ ಇರುವ ಸಾಧ್ಯತೆ ಇದೆ. ‘ಸಲಾರ್’ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಡಿಸೆಂಬರ್ 22ಕ್ಕೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ