‘ಪೆದ್ದಿ’ ಸಿನಿಮಾ ಶೂಟಿಂಗ್​​ಗೆ ಹಳೆ ಕಾಲದ ತಂತ್ರಜ್ಞಾನ ಬಳಸಿದ್ದೇಕೆ?

Peddi movie: ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾವು ಗ್ರಾಮೀಣ ಭಾಗದ ಯುವಕನೊಬ್ಬನ ಕತೆಯನ್ನು ಒಳಗೊಂಡಿದ್ದು, ಕ್ರಿಕೆಟ್ ಆಟಗಾರನಾಗಿದ್ದ ಯುವಕ ನಂತರ ಕುಸ್ತಿ ಪಟುವಾಗಿ ದೇಶವನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ತಾಂತ್ರಿಕವಾಗಿ ಬಹಳ ರಿಚ್ ಆಗಿ ‘ಪೆದ್ದಿ’ ಮೂಡಿ ಬಂದಿದೆ ಎಂದು ನಿರ್ದೇಶಕ ಹೇಳಿದ್ದಾರೆ. ಆದರೆ ಈ ಸಿನಿಮಾದ ಚಿತ್ರೀಕರಣಕ್ಕೆ ಹಳೆ ಕಾಲದ ತಂತ್ರಜ್ಞಾನವನ್ನು ಬಳಸಲಾಗಿದೆ. ಅದೇಕೆ? ಇಲ್ಲಿದೆ ಮಾಹಿತಿ...

‘ಪೆದ್ದಿ’ ಸಿನಿಮಾ ಶೂಟಿಂಗ್​​ಗೆ ಹಳೆ ಕಾಲದ ತಂತ್ರಜ್ಞಾನ ಬಳಸಿದ್ದೇಕೆ?
R Rathnavelu

Updated on: May 27, 2026 | 3:59 PM

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ಭಾರಿ ಬಂಡವಾಳ ಹೂಡಲಾಗಿದ್ದು, ಸಿನಿಮಾಕ್ಕಾಗಿ ರಾಮ್ ಚರಣ್ ಸಾಕಷ್ಟು ಶ್ರಮ ಪಟ್ಟಿದ್ದಾರೆ. ‘ಪೆದ್ದಿ’ ಸಿನಿಮಾವು ಗ್ರಾಮೀಣ ಭಾಗದ ಯುವಕನೊಬ್ಬನ ಕತೆಯನ್ನು ಒಳಗೊಂಡಿದ್ದು, ಕ್ರಿಕೆಟ್ ಆಟಗಾರನಾಗಿದ್ದ ಯುವಕ ನಂತರ ಕುಸ್ತಿ ಪಟುವಾಗಿ ದೇಶವನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ತಾಂತ್ರಿಕವಾಗಿ ಬಹಳ ರಿಚ್ ಆಗಿ ‘ಪೆದ್ದಿ’ ಮೂಡಿ ಬಂದಿದೆ ಎಂದು ನಿರ್ದೇಶಕ ಹೇಳಿದ್ದಾರೆ. ಆದರೆ ಈ ಸಿನಿಮಾದ ಚಿತ್ರೀಕರಣಕ್ಕೆ ಹಳೆ ಕಾಲದ ತಂತ್ರಜ್ಞಾನವನ್ನು ಬಳಸಲಾಗಿದೆ. ಅದೇಕೆ? ಇಲ್ಲಿದೆ ಮಾಹಿತಿ…

‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್, ಜಾನ್ಹವಿ ಕಪೂರ್, ಶಿವರಾಜ್ ಕುಮಾರ್, ಜಗಪತಿ ಬಾಬು ಇನ್ನೂ ಕೆಲವು ಖ್ಯಾತನಾಮ ನಟ-ನಟಿಯರು ನಟಿಸಿದ್ದಾರೆ. ತೆರೆಯ ಹಿಂದೆಯೂ ಸಹ ಕೆಲವು ಖ್ಯಾತ ನಾಮ ತಂತ್ರಜ್ಞರು ಈ ಸಿನಿಮಾಕ್ಕಾಗಿ ದುಡಿದಿದ್ದಾರೆ. ಆಸ್ಕರ್ ವಿಜೇತ ಎಆರ್ ರೆಹಮಾನ್ ಸಂಗೀತ ನೀಡಿದ್ದರೆ, ಕ್ಯಾಮೆರಾ ಹಿಡಿದಿರುವುದು ಭಾರತೀಯ ಚಿತ್ರರಂಗದ ಟಾಪ್ ಸಿನಿಮಾಟೊಗ್ರಾಫರ್​​ಗಳಲ್ಲಿ ಒಬ್ಬರಾಗಿರುವ ಆರ್ ರತ್ನವೇಲು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರತ್ನವೇಲು, ತಾವು ಅರ್ಧ ಶತಮಾನಕ್ಕೂ ಹಳೆಯದಾದ ತಂತ್ರಜ್ಞಾನ ಬಳಸಿ ‘ಪೆದ್ದಿ’ ಸಿನಿಮಾದ ಚಿತ್ರೀಕರಣ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ರಾಮ್ ಚರಣ್-ಪವನ್ ಕಲ್ಯಾಣ್ ಬಾಂಡಿಂಗ್ ನೋಡಿ ಹೊಗಳಿದ ಶಿವಣ್ಣ 

ರತ್ನವೇಲು ಹೇಳಿರುವಂತೆ ಅವರನ್ನು ಈ ಸಿನಿಮಾದ ಭಾಗವನ್ನಾಗಿಸಿದ್ದು ಖುದ್ದು ರಾಮ್ ಚರಣ್ ಅವರಂತೆ. ರಾಮ್ ಅವರೇ ಖುದ್ದು ಕರೆ ಮಾಡಿ ‘ಪೆದ್ದಿ’ ಸಿನಿಮಾಕ್ಕೆ ಕೆಲಸ ಮಾಡುವಂತೆ ಕೇಳಿದ್ದರಂತೆ. ಬಳಿಕ ಬುಚ್ಚಿಬಾಬು ಸನಾ ಕತೆ ಹೇಳಿದಾಗ ಕತೆ ವಿಪರೀತ ಹಿಡಿಸಿ ಈ ಸಿನಿಮಾಕ್ಕೆ ಕೆಲಸ ಮಾಡಲು ಒಪ್ಪಿಕೊಂಡರಂತೆ. ಈ ಹಿಂದೆ ರಾಮ್ ಚರಣ್ ನಟಿಸಿದ್ದ ‘ರಂಗಸ್ಥಳಂ’ ಸಿನಿಮಾಕ್ಕೆ ರತ್ನವೇಲು ಅವರೇ ಕ್ಯಾಮೆರಾಮ್ಯಾನ್.

‘ಪೆದ್ದಿ’ ಸಿನಿಮಾ ತುಸು ಹಳೆಯ ಕಾಲಘಟ್ಟದಲ್ಲಿ ನಡೆಯುವ ಕತೆ ಹೊಂದಿರುವ ಜೊತೆಗೆ ರಾಮ್ ಚರಣ್ ಪಾತ್ರದ ವಿವಿಧ ಜರ್ನಿಯ ಕತೆಯನ್ನು ಸಹ ಒಳಗೊಂಡಿರುವ ಕಾರಣಕ್ಕೆ ಸಿನಿಮಾದ ಒಂದು ನಿರ್ದಿಷ್ಟ ಭಾಗವನ್ನು ರತ್ನವೇಲು ಅವರು ಹಳೆಯ ನೆಗೆಟಿವ್ ಗಳನ್ನು ಬಳಸಿ ಚಿತ್ರೀಕರಣ ಮಾಡಿದ್ದಾರಂತೆ. ದೃಶ್ಯಕ್ಕೆ ಹಳೆಯ ಫೀಲ್ ನೀಡಲು ರಾಮ್ ಚರಣ್ ಪಾತ್ರದ ಒಂದು ಭಾಗವನ್ನು ನೆಗೆಟಿವ್ ಫಿಲಂ ಬಳಸಿ ಅದಕ್ಕೆ ಹೊಂದುವ ಹಳೆಯ ಕ್ಯಾಮೆರಾ ಬಳಸಿ ಚಿತ್ರೀಕರಣ ಮಾಡಿದ್ದಾರಂತೆ.

ಅಂದಹಾಗೆ ರತ್ನವೇಲು ಅವರು ಭಾರತದ ಪ್ರತಿಭಾವಂತ ಸಿನಿಮಾಟೊಗ್ರಾಫರ್. ‘ರೋಬೊಟ್’, ತೆಲುಗಿನ ‘ಆರ್ಯ’, ‘ಕುಮಾರಿ 21ಎಫ್’, ‘ರಂಗಸ್ಥಳಂ’ ಇನ್ನೂ ಹಲವು ಸಿನಿಮಾಗಳಿಗೆ ಕ್ಯಾಮೆರಾ ಹಿಡಿದಿದ್ದಾರೆ. ಕನ್ನಡದಲ್ಲಿ ‘ಸೈನೈಡ್’ ಮತ್ತು ‘ಗಾಳಿಪಟ’ ಸಿನಿಮಾಗಳಿಗೆ ರತ್ನವೇಲು ಅವರೇ ಕ್ಯಾಮೆರಾಮ್ಯಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us