AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಿಚರ್ಡ್ ಆಂಟನಿ’ ಅಪ್ಡೇಟ್; ಕೊನೆಗೂ ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ ಎಂಬುದನ್ನು ಹೇಳಿದ ಹೇಮಂತ್ ರಾವ್

ರಕ್ಷಿತ್ ಶೆಟ್ಟಿ ಅವರ ಬಹುನಿರೀಕ್ಷಿತ 'ರಿಚರ್ಡ್ ಆ್ಯಂಟನಿ' ಸಿನಿಮಾ ಸೆಟ್ಟೇರುವುದು ತಡವಾಗುತ್ತಿರುವ ಬೆನ್ನಲ್ಲೇ ನಿರ್ದೇಶಕ ಹೇಮಂತ್ ರಾವ್ ಮಹತ್ವದ ಮಾಹಿತಿ ನೀಡಿದ್ದಾರೆ. ರಕ್ಷಿತ್ ಸದ್ಯ ಚಿತ್ರಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಕಾಯುವಿಕೆಯೇ ಚಿತ್ರಕ್ಕೆ ಅತಿ ದೊಡ್ಡ ಮಾರ್ಕೆಟಿಂಗ್ ಎಂದು ಅವರು ಹೇಳಿದ್ದಾರೆ.

'ರಿಚರ್ಡ್ ಆಂಟನಿ' ಅಪ್ಡೇಟ್; ಕೊನೆಗೂ ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ ಎಂಬುದನ್ನು ಹೇಳಿದ ಹೇಮಂತ್ ರಾವ್
ರಕ್ಷಿತ್ ಶೆಟ್ಟಿ
ರಾಜೇಶ್ ದುಗ್ಗುಮನೆ
|

Updated on: Jul 29, 2026 | 9:39 AM

Share

ಮುಖ್ಯಾಂಶಗಳು

  • ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ ಎಂದು ಹೇಳಿದ ಹೇಮಂತ್ ರಾವ್
  • 'ರಿಚರ್ಡ್ ಆ್ಯಂಟನಿ' ಸಿನಿಮಾ ಹೈಪ್ ಬಗ್ಗೆ ಗುಟ್ಟು ರಟ್ಟು
  • ಸಿಂಪಲ್ ಸ್ಟಾರ್ ಹೊಸ ಅವತಾರ ನೋಡಲು ಕಾಯ್ತಿದ್ದಾರೆ ಫ್ಯಾನ್ಸ್

ನಟ ರಕ್ಷಿತ್ ಶೆಟ್ಟಿ ಅವರು ಹಲವು ಹಿಟ್ ಚಿತ್ರಗಳನ್ನುನೀಡಿದ್ದಾರೆ. ಅವರು ತಮ್ಮ ಬಹುನಿರೀಕ್ಷಿತ ‘ರಿಚರ್ಡ್​ ಆಂಟನಿ’ ಸಿನಿಮಾ ಘೋಷಣೆ ಮಾಡಿ ಸಾಕಷ್ಟು ವರ್ಷಗಳು ಕಳೆದಿವೆ. ಆದರೆ ಸಿನಿಮಾ ಇನ್ನೂ ಸೆಟ್ಟೇರದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ‘ರಕ್ಷಿತ್ ಶೆಟ್ಟಿ ಸದ್ಯ ಎಲ್ಲಿದ್ದಾರೆ’ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಇದೀಗ ಈ ಮಿಲಿಯನ್ ಡಾಲರ್ ಪ್ರಶ್ನೆಗೆ ರಕ್ಷಿತ್ ಅವರ ಆಪ್ತ ಗೆಳೆಯ ಹಾಗೂ ಸ್ಟಾರ್ ನಿರ್ದೇಶಕ ಹೇಮಂತ್ ರಾವ್ ಉತ್ತರ ನೀಡಿದ್ದಾರೆ.

ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ? ಸತ್ಯ ಬಿಚ್ಚಿಟ್ಟ ನಿರ್ದೇಶಕ

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಮತ್ತು ‘ಸಪ್ತ ಸಾಗರದಾಚೆ ಎಲ್ಲೋ’ (ಪಾರ್ಟ್ ಎ ಹಾಗೂ ಬಿ) ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ರಕ್ಷಿತ್ ಜೊತೆ ನೀಡಿದ್ದ ನಿರ್ದೇಶಕ ಹೇಮಂತ್ ರಾವ್ ‘ಗೋಲ್ಡ್​ ಕ್ಲಾಸ್​​’ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ‘ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ ಎಂಬುದು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ. ಆದರೆ ಅವರು ಖಂಡಿತವಾಗಿಯೂ ತಮ್ಮ ಮುಂದಿನ ಸಿನಿಮಾಗಾಗಿ ಭರ್ಜರಿಯಾಗಿಯೇ ರೆಡಿಯಾಗುತ್ತಿದ್ದಾರೆ ಎಂಬ ನಂಬಿಕೆ ನನಗಿದೆ’ ಎಂದು ನಗುತ್ತಲೇ ಹೇಮಂತ್ ರಾವ್ ಸ್ಪಷ್ಟನೆ ನೀಡಿದ್ದಾರೆ.

‘ರಿಚರ್ಡ್ ಆಂಟನಿ’ ಚಿತ್ರಕ್ಕೆ ಇದುವೇ ಬೆಸ್ಟ್ ಮಾರ್ಕೆಟಿಂಗ್

ರಕ್ಷಿತ್ ಶೆಟ್ಟಿ ಸದ್ಯಕ್ಕೆ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ಸಿನಿಮಾಗೆ ಪ್ರಚಾರ ಎಂದು ಹೇಮಂತ್ ರಾವ್ ಅಭಿಪ್ರಾಯಪಟ್ಟಿದ್ದಾರೆ. ‘ರಕ್ಷಿತ್ ಶೆಟ್ಟಿ ಚಿತ್ರರಂಗದಲ್ಲಿ ಒಬ್ಬ ಅದ್ಭುತ ನಟ. ಅವರ ಸಿನಿಮಾ ಮತ್ತು ಎಮೋಷನ್‌ಗಳ ಮೇಲಿರುವ ಸ್ಕೇಲ್ ಬೇರೆಯದೇ ಮಟ್ಟದ್ದು. ಸದ್ಯ ಅವರು ಎಲ್ಲೂ ಕಾಣಿಸಿಕೊಳ್ಳದೆ ಇರುವುದೇ ರಿಚರ್ಡ್ ಆಂಟನಿ ಸಿನಿಮಾಗೆ ಸಿಗುತ್ತಿರುವ ಬೆಸ್ಟ್ ಮಾರ್ಕೆಟಿಂಗ್’ ಎಂದು ಅಭಿಪ್ರಾಯಪಟ್ಟಿದ್ದಾರೆ. ನಟನಿಗಾಗಿ ಇಡೀ ಗಾಂಧಿನಗರ ಹಾಗೂ ಪ್ರೇಕ್ಷಕರು ಕಾಯುತ್ತಿದ್ದಾರೆ ಎಂದರೆ, ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಮೂಡಿಬರಲಿದೆ ಎಂಬುದನ್ನು ಊಹಿಸಬಹುದು ಎಂದು ಅವರು ಪರೋಕ್ಷವಾಗಿ ಚಿತ್ರದ ಹೈಪ್ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಬಿಳಿ ಶರ್ಟು ಪಂಚೆ ತೊಟ್ಟು ಕಾಣಿಸಿಕೊಂಡ ರಕ್ಷಿತ್ ಶೆಟ್ಟಿ, ವಿಶೇಷತೆಯೇನು?

ಸಿನಿಮಾ ಬಗ್ಗೆ

ರಕ್ಷಿತ್ ಶೆಟ್ಟಿ ಅವರು 2023ರಲ್ಲಿ ರಿಲೀಸ್ ಆದ ‘ಸಪ್ತ ಸಾಗರಾದಚೆ ಎಲ್ಲೋ: ಸೈಡ್ ಬಿ’ ಚಿತ್ರವೇ ಕೊನೆ. ಇದಾದ ಬಳಿಕ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಇದರ ಜೊತೆಗೆ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದಾರೆ. ಹೇಮಂತ್ ರಾವ್ ಅವರು ‘666 ಆಪರೇಷನ್ ಡ್ರೀಮ್ ಥಿಯೇಟರ್’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಪ್ರಶ್ನೆ: ರಕ್ಷಿತ್  ಶೆಟ್ಟಿ ಮುಂದಿನ ಸಿನಿಮಾ ಯಾವುದು? ಉತ್ತರ: ರಿಚರ್ಡ್ ಆಂಟನಿ

ಪ್ರಶ್ನೆ: ರಕ್ಷಿತ್  ಶೆಟ್ಟಿ ಕೊನೆಯ ಸಿನಿಮಾ ಯಾವುದು? ಉತ್ತರ: ‘ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್​ ಬಿ’

ಪ್ರಶ್ನೆ: ರಕ್ಷಿತ್  ಶೆಟ್ಟಿ ಈಗ ಏನು ಮಾಡುತ್ತಿದ್ದಾರೆ? ಉತ್ತರ: ರಿಚರ್ಡ್ ಆಂಟನಿ ಸ್ಕ್ರಿಪ್ಟ್​ ಕೆಲಸದಲ್ಲಿ ಬ್ಯುಸಿ ಇದ್ದಾರೆ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?