AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಗೆ ಮೆಗಾಸ್ಟಾರ್ ಪದಾರ್ಪಣೆ, ಪಡೆಯಲಿದ್ದಾರೆ ಭರ್ಜರಿ ಸಂಭಾವನೆ

ಒಟಿಟಿ ದೈತ್ಯ ನೆಟ್​​ಫ್ಲಿಕ್ಸ್​​, ಮೆಗಾಸ್ಟಾರ್ ಚಿರಂಜೀವಿ ಅವರಿಂದ ಟಾಕ್ ಶೋ ನಿರೂಪಣೆ ಮಾಡಿಸಲಿದೆ. ತೆಲುಗು ಮತ್ತು ಇಂಗ್ಲೀಷ್​​ನಲ್ಲಿ ಈ ಟಾಕ್ ಶೋ ಪ್ರಸಾರ ಆಗಲಿದ್ದು, ಇದಕ್ಕಾಗಿ ದೊಡ್ಡ ಮೊತ್ತವನ್ನೇ ವಿನಿಯೋಗಿಸುತ್ತಿದೆ. ವಿಶೇಷವೆಂದರೆ ಭಾರತದ ಒಟಿಟಿ ಇತಿಹಾಸದಲ್ಲಿಯೇ ದೊಡ್ಡ ಸಂಭಾವನೆಯನ್ನು ಮೆಗಾಸ್ಟಾರ್ ಚಿರಂಜೀವಿ ಅರು ಇದಕ್ಕಾಗಿ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ, ಪ್ರತಿ ಸೀಸನ್​​ಗೆ ಸುಮಾರು 200 ಕೋಟಿ ಸಂಭಾವನೆಯನ್ನು ಚಿರಂಜೀವಿ ಅವರು ಟಾಕ್ ಶೋ ನಿರೂಪಣೆಗೆ ಪಡೆಯಲಿದ್ದಾರೆ.

ಒಟಿಟಿಗೆ ಮೆಗಾಸ್ಟಾರ್ ಪದಾರ್ಪಣೆ, ಪಡೆಯಲಿದ್ದಾರೆ ಭರ್ಜರಿ ಸಂಭಾವನೆ
Chiranjeevi
ಮಂಜುನಾಥ ಸಿ.
|

Updated on:Sep 30, 2026 | 12:11 PM

Share

ಮುಖ್ಯಾಂಶಗಳು

  • ಮೆಗಾಸ್ಟಾರ್ ಚಿರಂಜೀವಿ ಟಾಕ್ ಶೋ ನಡೆಸಲಿದ್ದಾರೆ
  • ಒಟಿಟಿಗಾಗಿ ದೊಡ್ಡ ಶೋ ಒಂದನ್ನು ನಡೆಸಿಕೊಡಲಿದ್ದಾರೆ
  • ಟಾಕ್ ಶೋಗಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ

ಒಟಿಟಿಗಳು ಸಾಮಾನ್ಯವಾಗಿ ಯುವ ನಟ, ನಟಿಯರನ್ನೇ ಟಾರ್ಗೆಟ್ ಮಾಡುವುದು ಹೆಚ್ಚು. ಒಟಿಟಿಗಳಲ್ಲಿ ಪ್ರಸಾರ ಆಗುತ್ತಿರುವ ಬಹುತೇಕ ಜನಪ್ರಿಯ ಶೋ, ಟಾಕ್ ಶೋಗಳ ನಿರೂಪಣೆ ಮಾಡುತ್ತಿರುವುದು ಯುವ ನಟ-ನಟಿಯರೇ. ಆದರೆ ಇದೀಗ ಹಿರಿಯ ನಟ, ಸೂಪರ್ ಸ್ಟಾರ್ ಮೆಗಾಸ್ಟಾರ್ ಚಿರಂಜೀವಿ ಒಟಿಟಿಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಮೆಗಾಸ್ಟಾರ್ ಎಂಟ್ರಿ ‘ಮೆಗಾ’ ಆಗಿಯೇ ಇರಲಿದೆ. ಹೊಸದೊಂದು ಟಾಕ್ ಶೋ ನಡೆಸಿಕೊಡಲು ಚಿರಂಜೀವಿ ಒಪ್ಪಿಗೆ ಸೂಚಿಸಿದ್ದು, ಇದಕ್ಕಾಗಿ ದಾಖಲೆಯ ಸಂಭಾವನೆಯನ್ನು ಸಹ ಪಡೆಯಲಿದ್ದಾರೆ.

ಒಟಿಟಿ ದೈತ್ಯ ನೆಟ್​​ಫ್ಲಿಕ್ಸ್​​, ಮೆಗಾಸ್ಟಾರ್ ಚಿರಂಜೀವಿ ಅವರಿಂದ ಟಾಕ್ ಶೋ ನಿರೂಪಣೆ ಮಾಡಿಸಲಿದೆ. ತೆಲುಗು ಮತ್ತು ಇಂಗ್ಲೀಷ್​​ನಲ್ಲಿ ಈ ಟಾಕ್ ಶೋ ಪ್ರಸಾರ ಆಗಲಿದ್ದು, ಇದಕ್ಕಾಗಿ ದೊಡ್ಡ ಮೊತ್ತವನ್ನೇ ವಿನಿಯೋಗಿಸುತ್ತಿದೆ. ವಿಶೇಷವೆಂದರೆ ಭಾರತದ ಒಟಿಟಿ ಇತಿಹಾಸದಲ್ಲಿಯೇ ದೊಡ್ಡ ಸಂಭಾವನೆಯನ್ನು ಮೆಗಾಸ್ಟಾರ್ ಚಿರಂಜೀವಿ ಅರು ಇದಕ್ಕಾಗಿ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ, ಪ್ರತಿ ಸೀಸನ್​​ಗೆ ಸುಮಾರು 200 ಕೋಟಿ ಸಂಭಾವನೆಯನ್ನು ಚಿರಂಜೀವಿ ಅವರು ಟಾಕ್ ಶೋ ನಿರೂಪಣೆಗೆ ಪಡೆಯಲಿದ್ದಾರೆ.

ಅಂದಹಾಗೆ ಮೆಗಾಸ್ಟಾರ್ ಚಿರಂಜೀವಿ ಅವರ ಈ ಟಾಕ್ ಶೋಗೆ ತೆಲುಗಿನ ಸ್ಟಾರ್ ನಟ, ನಟಿಯರ ಜೊತೆಗೆ ಬಾಲಿವುಡ್​​ನ ಸ್ಟಾರ್ ನಟ-ನಟಿಯರು ಸಹ ಅತಿಥಿಗಳಾಗಿ ಭಾಗಿ ಆಗಲಿದ್ದಾರೆ. ಟಾಕ್ ಶೋ, ಹಾಸ್ಯ ಪ್ರಧಾನವಾಗಿರಲಿದ್ದು, ಟಾಕ್ ಶೋನಲ್ಲಿ ಆಪ್ತ ಮಾತುಕತೆಯ ಜೊತೆಗೆ ಅತಿಥಿಗಳಿಂದ ಗೇಮ್ಸ್​​ಗಳನ್ನು ಸಹ ಚಿರಂಜೀವಿ ಆಡಿಸಲಿದ್ದಾರೆ. ಚಿರಂಜೀವಿ ಪಾಲಿಗೆ ಇದು ಮೊಟ್ಟ ಮೊದಲ ಟಾಕ್ ಶೋ ಆಗಲಿದೆ. ಚಿರಂಜೀವಿ ಅವರು ಈ ಹಿಂದೆ 2017ರಲ್ಲಿ ತೆಲುಗಿನಲ್ಲಿ ಕೋಟ್ಯಧಿಪತಿ ಶೋ ನಿರೂಪಣೆ ಮಾಡಿದ್ದರು. ಅದು ತಕ್ಕ ಮಟ್ಟಿಗೆ ಹಿಟ್ ಆಗಿತ್ತು. ಅದಾದ ಬಳಿಕ ಈಗ ಟಾಕ್ ಶೋ ನಿರೂಪಣೆ ಮಾಡಲು ರೆಡಿಯಾಗಿದ್ದಾರೆ.

ಇದನ್ನೂ ಓದಿ:ತಮ್ಮ ಪವನ್ ಕಲ್ಯಾಣ್ ವ್ಯಕ್ತಿತ್ವದ ಬಗ್ಗೆ ಅಣ್ಣ ಚಿರಂಜೀವಿ ಹೆಮ್ಮೆಯ ಮಾತು

ತೆಲುಗಿನ ಮತ್ತೊಬ್ಬ ಹಿರಿಯ ಸ್ಟಾರ್ ನಟ, ಚಿರಂಜೀವಿ ಅವರ ಪ್ರತಿಸ್ಪರ್ಧಿ ಎನಿಸಿಕೊಂಡಿರುವ ನಂದಮೂರಿ ಬಾಲಕೃಷ್ಣ ಅವರು ಕಳೆದ ಕೆಲ ವರ್ಷಗಳಿಂದಲೂ ಟಾಕ್ ಶೋ ನಡೆಸಿಕೊಡುತ್ತಿದ್ದಾರೆ. ‘ಆಹಾ’ನಲ್ಲಿ ಅವರ ಟಾಕ್ ಶೋ ಪ್ರಸಾರ ಆಗುತ್ತಿದ್ದು, ಸಖತ್ ಹಿಟ್ ಆಗಿದೆ. ಅದಕ್ಕೆ ಠಕ್ಕರ್ ಕೊಡಲೆಂದು ಇದೀಗ ಚಿರಂಜೀವಿ ಅವರು ಹೊಸ ಶೋ ಪ್ರಾರಂಭ ಮಾಡುತ್ತಿದ್ದಾರೆ.

ಚಿರಂಜೀವಿ ಅವರು ಒಳ್ಳೆಯ ಮಾತುಗಾರರಾಗಿದ್ದು, ಒಳ್ಳೆಯ ಹಾಸ್ಯಪ್ರಜ್ಞೆಯೂ ಅವರಿಗೆ ಇದೆ. ಜೊತೆಗೆ ತೆಲುಗು ಮಾತ್ರವೇ ಅಲ್ಲದೆ ಇಡೀ ಭಾರತದ ಚಿತ್ರರಂಗದಲ್ಲಿ ಚಿರಂಜೀವಿ ಆಹ್ವಾನಿಸಿದರೆ ಬರದೇ ಇರುವ ಸ್ಟಾರ್ ನಟ-ನಟಿ ಇಲ್ಲ. ಹಾಗಾಗಿ ಚಿರಂಜೀವಿ ಅವರನ್ನೇ ನಿರೂಪಕರನ್ನಾಗಿ ಆಯ್ಕೆ ಮಾಡಿದೆ ನೆಟ್​​ಫ್ಲಿಕ್ಸ್​​. ದೊಡ್ಡ ಪರದೆಯ ಮೇಲೆ ಹಲವಾರು ರೀತಿಯ ಪಾತ್ರಗಳ ಮೂಲಕ ಜನರನ್ನು ರಂಜಿಸಿರುವ ಮೆಗಾಸ್ಟಾರ್ ಚಿರಂಜೀವಿ, ನಿರೂಪಕನಾಗಿ ಯಶಸ್ಸು ಗಳಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Wed, 30 September 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ
ಇಂದೂ ಬೆಂಗಳೂರಿನಲ್ಲಿ ವರುಣನ ಆರ್ಭಟ; ಕೆರೆಯಂತಾದ ರಸ್ತೆಗಳು!
ಇಂದೂ ಬೆಂಗಳೂರಿನಲ್ಲಿ ವರುಣನ ಆರ್ಭಟ; ಕೆರೆಯಂತಾದ ರಸ್ತೆಗಳು!
ಸರ್ವೀಸ್ ರೈಫಲ್‌ನಿಂದ ನಾಲ್ವರು ಸಹೋದ್ಯೋಗಿಗಳನ್ನೇ ಕೊಂದ ಯೋಧ
ಸರ್ವೀಸ್ ರೈಫಲ್‌ನಿಂದ ನಾಲ್ವರು ಸಹೋದ್ಯೋಗಿಗಳನ್ನೇ ಕೊಂದ ಯೋಧ