AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Srinidhi Shetty: ‘ಕೋಬ್ರಾ’ ಪ್ರಚಾರದ ವೇಳೆ ಶ್ರೀನಿಧಿ ಶೆಟ್ಟಿ ತೆಲುಗಿನಲ್ಲಿ ಮಾತಾಡಿದ್ದು ಕೇಳಿ ಅಚ್ಚರಿ ವ್ಯಕ್ತಪಡಿಸಿದ ಫ್ಯಾನ್ಸ್​

Cobra Movie | Srinidhi Shetty: ‘ಕೋಬ್ರಾ’ ಚಿತ್ರ ನೋಡಿ ಪ್ರೋತ್ಸಾಹಿಸುವಂತೆ ಅಭಿಮಾನಿಗಳಲ್ಲಿ ಶ್ರೀನಿಧಿ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಈ ಸಿನಿಮಾ ತಮಗೆ ಯಾಕೆ ಸ್ಪೆಷಲ್ ಎಂಬುದನ್ನು ವಿವರಿಸಿದ್ದಾರೆ.

Srinidhi Shetty: ‘ಕೋಬ್ರಾ’ ಪ್ರಚಾರದ ವೇಳೆ ಶ್ರೀನಿಧಿ ಶೆಟ್ಟಿ ತೆಲುಗಿನಲ್ಲಿ ಮಾತಾಡಿದ್ದು ಕೇಳಿ ಅಚ್ಚರಿ ವ್ಯಕ್ತಪಡಿಸಿದ ಫ್ಯಾನ್ಸ್​
ಶ್ರೀನಿಧಿ ಶೆಟ್ಟಿ
TV9 Web
| Edited By: |

Updated on:Aug 29, 2022 | 8:19 AM

Share

ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ದೇಶಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 1’ ಮತ್ತು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗಳಿಂದ ಅವರಿಗೆ ಸಿಕ್ಕ ಜನಪ್ರಿಯತೆ ಅಪಾರ. ಅವರಿಗೆ ದೊಡ್ಡ ದೊಡ್ಡ ಸಿನಿಮಾ ಆಫರ್​ಗಳು ಹರಿದುಬರುತ್ತಿವೆ. ‘ಕೆಜಿಎಫ್​ 2’ ಬಿಡುಗಡೆಗೂ ಮುನ್ನವೇ ಅವರು ತಮಿಳಿನ ‘ಕೋಬ್ರಾ’ (Cobra Movie) ಚಿತ್ರದಲ್ಲಿ ನಟಿಸಿದರು. ಈಗ ಆ ಸಿನಿಮಾ ಬಿಡುಗಡೆ ಆಗುತ್ತಿದೆ. ಖ್ಯಾತ ನಟ ಚಿಯಾನ್​ ವಿಕ್ರಮ್​ (Chiyaan Vikram) ಜೊತೆ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಆಗಸ್ಟ್​ 31ರಂದು ಈ ಚಿತ್ರ ರಿಲೀಸ್​ ಆಗಲಿದ್ದು, ಪ್ರಚಾರ ಕಾರ್ಯದಲ್ಲಿ ಇಡೀ ತಂಡ ಬ್ಯುಸಿ ಆಗಿದೆ. ಇತ್ತೀಚೆಗೆ ಹೈದರಾಬಾದ್​ನಲ್ಲಿ ‘ಕೋಬ್ರಾ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್​​ ಮಾಡಲಾಯಿತು.

ಚಿಯಾನ್​ ವಿಕ್ರಮ್​ ಅವರಿಗೆ ಆಂಧ್ರ ಮತ್ತು ತೆಲಂಗಾಣದಲ್ಲೂ ಅಭಿಮಾನಿಗಳು ಇದ್ದಾರೆ. ಹಾಗಾಗಿ ಹೈದರಾಬಾದ್​ನಲ್ಲಿ ಅದ್ದೂರಿಯಾಗಿ ‘ಕೋಬ್ರಾ’ ಚಿತ್ರದ ಪ್ರಚಾರ ಮಾಡಲಾಗಿದೆ. ಈ ವೇಳೆ ನಟಿ ಶ್ರೀನಿಧಿ ಶೆಟ್ಟಿ ಅವರು ತೆಲುಗಿನಲ್ಲಿ ಮಾತನಾಡಿದ್ದು ಕೇಳಿ ಅಲ್ಲಿನ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶ್ರೀನಿಧಿ ಮೂಲತಃ ಕರ್ನಾಟಕದವರು. ಆದರೆ ಸಿನಿಮಾ ಸಲುವಾಗಿ ಅವರು ಬೇರೆ ಬೇರೆ ಭಾಷೆಗಳನ್ನು ಕಲಿತಿದ್ದಾರೆ.

ಸಿನಿಮಾ ಕಲಾವಿದರು ಯಾವುದೇ ಒಂದು ಭಾಷೆಗೆ ಸೀಮಿತವಲ್ಲ. ಪ್ಯಾನ್​ ಇಂಡಿಯಾ ಸಿನಿಮಾಗಳ ಟ್ರೆಂಡ್​ ಹೆಚ್ಚಿರುವ ಈ ಸಂದರ್ಭದಲ್ಲಿ ನಟ-ನಟಿಯರು ಹಲವು ರಾಜ್ಯಗಳಿಗೆ ತೆರಳಿ ಪ್ರಚಾರ ಮಾಡಬೇಕಾಗುತ್ತದೆ. ಬೇರೆ ಬೇರೆ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಭಾಷೆಗಳನ್ನು ಕಲಿತಿರಬೇಕಾದ್ದು ಅನಿವಾರ್ಯ.

ಇದನ್ನೂ ಓದಿ
Image
‘ಕೋಬ್ರಾ’ ಚಿತ್ರದ ಪ್ರಮೋಷನ್​ಗೆ ಬೆಂಗಳೂರಿಗೆ ಬಂದ ಚಿಯಾನ್ ವಿಕ್ರಮ್; ಹೇಗಿದೆ ನೋಡಿ ಕ್ರೇಜ್
Image
‘ಕೋಬ್ರಾ’ ಸಿನಿಮಾ ಟ್ರೇಲರ್​ನಲ್ಲಿ ಮಿಂಚಿದ ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್​; ಮೊದಲ ಸಿನಿಮಾದ ವಿಶೇಷತೆ ಏನು?
Image
Srinidhi Shetty Salary: ‘ಕೆಜಿಎಫ್​’ ಸುಂದರಿ ಶ್ರೀನಿಧಿ ಶೆಟ್ಟಿ ‘ಕೋಬ್ರಾ’ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು?
Image
Srinidhi Shetty: ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ ಕ್ಯೂಟ್ ಫೋಟೋ ಗ್ಯಾಲರಿ

ಹೈದರಾಬಾದ್​ನಲ್ಲಿ ಇರುವ ಅಭಿಮಾನಿಗಳು ಶ್ರೀನಿಧಿ ಶೆಟ್ಟಿ ಅವರ ಮಾತುಗಳನ್ನು ಕೇಳಿ ಖುಷಿಪಟ್ಟಿದ್ದಾರೆ. ಅಪ್ಪಟ ತೆಲುಗಿನಲ್ಲಿ ಮಾತನಾಡಿದ ‘ಕೆಜಿಎಫ್​ 2’ ಬೆಡಗಿಗೆ ಅಲ್ಲಿನ ಮಂದಿ ಭೇಷ್​ ಎನ್ನುತ್ತಿದ್ದಾರೆ. ತಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ಅಭಿಮಾನಿಗಳಲ್ಲಿ ಶ್ರೀನಿಧಿ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಈ ಸಿನಿಮಾ ತಮಗೆ ಯಾಕೆ ಸ್ಪೆಷಲ್ ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

‘ಕೋಬ್ರಾ’ ಸಿನಿಮಾಗೆ ಆರ್​. ಅಜಯ್​ ಜ್ಞಾನಮುತ್ತು ನಿರ್ದೇಶನ ಮಾಡಿದ್ದಾರೆ. ಹಲವು ಗೆಟಪ್​ಗಳಲ್ಲಿ ವಿಕ್ರಮ್​ ಕಾಣಿಸಿಕೊಂಡಿದ್ದಾರೆ. ಇರ್ಫಾನ್ ಪಠಾಣ್​ ಕೂಡ ಈ ಸಿಮಾದಲ್ಲಿ ನಟಿಸಿರುವುದು ವಿಶೇಷ. ಎ.ಆರ್​. ಹೆರಮಾನ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಕೋಬ್ರಾ’ ಟ್ರೇಲರ್​ಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:19 am, Mon, 29 August 22

Follow Us
Web contact
Web contact

TV9 Kannada

Read More
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್