‘ವಾರ್ 2’ Vs ‘ಕೂಲಿ’: ಬುಕ್​ ಮೈ ಶೋನಲ್ಲಿ ಯಾರಿಗೆ ಹೆಚ್ಚಿದೆ ಬೆಂಬಲ?

ಎರಡು ಬಹುನಿರೀಕ್ಷಿತ ಸಿನಿಮಾಗಳು ಒಂದೇ ದಿನ ಬಿಡುಗಡೆ ಆದರೆ ಪ್ರೇಕ್ಷಕರಿಗೆ ಗೊಂದಲ ಸಹಜ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕೂಲಿ’ ಮತ್ತು ‘ವಾರ್ 2’ ಚಿತ್ರಗಳು ಆಗಸ್ಟ್ 14ರಂದು ತೆರೆಕಾಣುತ್ತಿವೆ. ಹಾಗಾಗಿ ಈ ವಾರ ಸಿನಿಪ್ರಿಯರಿಗೆ ಮನರಂಜನೆಯ ಹಬ್ಬ ಆಗಲಿದೆ. ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕಿಂಗ್ ಮಾಡುತ್ತಿದ್ದಾರೆ.

‘ವಾರ್ 2’ Vs ‘ಕೂಲಿ’: ಬುಕ್​ ಮೈ ಶೋನಲ್ಲಿ ಯಾರಿಗೆ ಹೆಚ್ಚಿದೆ ಬೆಂಬಲ?
War 2, Coolie

Updated on: Aug 10, 2025 | 12:51 PM

ಈ ಬಾರಿ ಸ್ವಾತಂತ್ರ್ಯ ದಿನಾಚರಣೆಗೆ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಕ್ಲ್ಯಾಶ್ ಏರ್ಪಡುತ್ತಿದೆ. ಸ್ವಾತಂತ್ರ್ಯ ದಿನಾಚರಣೆಗೂ ಒಂದು ದಿನ ಮೊದಲು ಅಂದರೆ, ಆಗಸ್ಟ್ 14ರಂದು ಬಹುನಿರೀಕ್ಷಿತ ‘ವಾರ್ 2’ ಹಾಗೂ ‘ಕೂಲಿ’ (Coolie) ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈ ಸಿನಿಮಾಗಳಲ್ಲಿ ಬಹುತಾರಾಗಣ ಇದೆ. ಹಾಗಾಗಿ ಅಭಿಮಾನಿಗಳಿಗೆ ಭರ್ಜರಿ ನಿರೀಕ್ಷೆ ಮೂಡಿದೆ. ವಿಶ್ವಾದ್ಯಂತ ಈ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ‘ಕೂಲಿ’ ಮತ್ತು ‘ವಾರ್ 2’ (War 2) ಇವರೆಡರಲ್ಲಿ ಮೊದಲು ಯಾವ ಚಿತ್ರವನ್ನು ನೋಡಬೇಕು ಎಂಬ ಗೊಂದಲಲ್ಲಿ ಪ್ರೇಕ್ಷಕರು ಇದ್ದಾರೆ. ‘ಬುಕ್​ ಮೈ ಶೋ’ನಲ್ಲಿ (Book My Show) ಎರಡೂ ಸಿನಿಮಾಗಳು ಟ್ರೆಂಡ್ ಆಗುತ್ತಿವೆ.

ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾಗೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡಿದ್ದಾರೆ. ರಜನಿಕಾಂತ್ ಸಿನಿಮಾ ಎಂದರೆ ಕ್ರೇಜ್ ಜೋರಾಗಿಯೇ ಇರುತ್ತದೆ. ಬಿಡುಗಡೆಗೆ ಇನ್ನು ಕೇವಲ 3 ದಿನ ಬಾಕಿ ಇರುವಾಗ ಬುಕ್ ಮೈ ಶೋನಲ್ಲಿ ಈ ಸಿನಿಮಾಗೆ 7 ಲಕ್ಷದ 52 ಸಾವಿರ ಜನರು ಇಂಟರೆಸ್ಟ್ ತೋರಿಸಿದ್ದಾರೆ. ವಿದೇಶದಲ್ಲಿ ಕೂಡ ಭರ್ಜರಿ ಬುಕಿಂಗ್ ಆಗುತ್ತಿದೆ.

ಇನ್ನು, ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್​ಟಿಆರ್ ನಟನೆಯ ‘ವಾರ್ 2’ ಸಿನಿಮಾದ ಕ್ರೇಜ್ ಕೂಡ ಜೋರಾಗಿದೆ. ಈ ಸಿನಿಮಾಗೆ ಅಯಾನ್ ಮುಖರ್ಜಿ ಅವರು ನಿರ್ದೇಶನ ಮಾಡಿದ್ದಾರೆ. ಭರ್ಜರಿ ಆ್ಯಕ್ಷನ್ ಸನ್ನಿವೇಶಗಳು ಈ ಚಿತ್ರದಲ್ಲಿವೆ. ಅದ್ದೂರಿ ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಬುಕ್​ ಮೈ ಶೋನಲ್ಲಿ ಈ ಸಿನಿಮಾಗೆ 8 ಲಕ್ಷದ 79 ಸಾವಿರ ಜನರು ಇಂಟರೆಸ್ಟ್ ತೋರಿಸಿದ್ದಾರೆ.

ಇದನ್ನೂ ಓದಿ
ಜೂ ಎನ್​ಟಿಆರ್ ದೇಹತೂಕ ಇಳಿಸಿಕೊಳ್ಳಲು ಕಾರಣ ಯಾರು?
ಜೂ.ಎನ್​ಟಿಆರ್ ಎಷ್ಟು ಶ್ರೀಮಂತ ಅನ್ನೋದು ಗೊತ್ತಾ? ಇಲ್ಲಿದೆ ಆಸ್ತಿ ವಿವರ
ಸೆಕ್ಯೂರಿಟಿ ಒದ್ದು ಓಡಿಸ್ತಾರೆ: ಫ್ಯಾನ್ಸ್ ಮೇಲೆ ಜೂನಿಯರ್ ಎನ್​ಟಿಆರ್ ಗರಂ
ಜೂ ಎನ್​ಟಿಆರ್ ಧರ್ಮದ ಬಗ್ಗೆ ಚರ್ಚೆ, ಮೊಹಮ್ಮದ್ ಶರೀಫ್ ಖಾನ್ ಯಾರು?

ಹಾಡುಗಳು ಮತ್ತು ಟ್ರೇಲರ್ ಮೂಲಕ ‘ವಾರ್ 2’ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಜೂನಿಯರ್ ಎನ್​ಟಿಆರ್​, ಹೃತಿಕ್ ರೋಷನ್ ಜೊತೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಅವರು ಅಭಿನಯಿಸಿದ್ದಾರೆ. ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯು ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಇದು ಜೂನಿಯರ್ ಎನ್​​ಟಿಆರ್ ನಟಿಸಿರುವ ಮೊದಲ ಬಾಲಿವುಡ್ ಸಿನಿಮಾ ಎಂಬುದು ವಿಶೇಷ.

ಇದನ್ನೂ ಓದಿ: ‘ವಾರ್ 2’ ಹೊಸ ಹಾಡಿನಲ್ಲಿ ಧೂಳೆಬ್ಬಿಸಿದ ಜೂ. ಎನ್​ಟಿಆರ್, ಹೃತಿಕ್ ರೋಷನ್

ಪಾತ್ರವರ್ಗದ ಕಾರಣದಿಂದಲೇ ‘ಕೂಲಿ’ ಸಿನಿಮಾ ಸದ್ದು ಮಾಡುತ್ತಿದೆ. ವಿವಿಧ ಭಾಷೆಯ ಸ್ಟಾರ್ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಜನಿಕಾಂತ್ ಜೊತೆ ಶ್ರುತಿ ಹಾಸನ್, ಉಪೇಂದ್ರ, ಸತ್ಯರಾಜ್, ಆಮಿರ್ ಖಾನ್, ನಾಗಾರ್ಜುನ ಮುಂತಾದವರು ನಟಿಸಿದ್ದಾರೆ. ಪೂಜಾ ಹೆಗ್ಡೆ ಅವರು ‘ಮೋನಿಕಾ’ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಆ ಹಾಡಿನಿಂದಲೂ ಸಿನಿಮಾ ಮೇಲಿನ ಹೈಪ್ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us