ಮೂರೇ ದಿನಕ್ಕೆ 200 ಕೋಟಿ ಕಲೆಕ್ಷನ್ ದಾಟಿದ ‘ವಾರ್ 2’, ‘ಕೂಲಿ’ ಎಷ್ಟು?

War 2 vs Coolie: ಹೃತಿಕ್ ರೋಷನ್-ಜೂ ಎನ್​ಟಿಆರ್ ನಟನೆಯ ‘ವಾರ್ 2’ ಹಾಗೂ ರಜನೀಕಾಂತ್ ಮತ್ತು ಇನ್ನಿತರೆ ಸ್ಟಾರ್​ಗಳು ನಟಿಸಿರುವ ‘ಕೂಲಿ’ ಸಿನಿಮಾ ಒಂದೇ ದಿನ ಬಿಡುಗಡೆ ಆಗಿದ್ದು ಬಾಕ್ಸ್ ಆಫೀಸ್​​ನಲ್ಲಿ ರೇಸಿಗೆ ಬಿದ್ದಿವೆ. ಸಿನಿಮಾದ ಮೂರು ದಿನಗಳ ಕಲೆಕ್ಷನ್ ರಿಪೋರ್ಟ್ ಬಂದಿದ್ದು, ಈ ಹಂತದಲ್ಲಿ ಯಾವ ಸಿನಿಮಾ ಬಾಕ್ಸ್ ಆಫೀಸ್​​ ರೇಸಿನಲ್ಲಿ ಮುಂದೆ ಇದೆ. ಸಿನಿಮಾಗಳ ಕಲೆಕ್ಷನ್ ಎಷ್ಟು?

ಮೂರೇ ದಿನಕ್ಕೆ 200 ಕೋಟಿ ಕಲೆಕ್ಷನ್ ದಾಟಿದ ‘ವಾರ್ 2’, ‘ಕೂಲಿ’ ಎಷ್ಟು?
Coolie War 2

Updated on: Aug 17, 2025 | 6:52 PM

ಕೆಲ ದಿನಗಳ ಹಿಂದೆ ಆಗಸ್ಟ್ 14 ರಂದು ಮೂವರು ಸ್ಟಾರ್ ನಟರುಗಳ ಎರಡು ಭಾರಿ ಬಜೆಟ್ ಸಿನಿಮಾಗಳು ಬಿಡುಗಡೆ ಆದವು. ಅವುಗಳೇ ‘ವಾರ್ 2’ (War 2) ಮತ್ತು ‘ಕೂಲಿ’ (Coolie). ಎರಡೂ ಸಿನಿಮಾಗಳು ಪರಸ್ಪರ ಬಾಕ್ಸ್ ಆಫೀಸ್​ನಲ್ಲಿ ಸ್ಪರ್ಧೆಗೆ ಬಿದ್ದಿವೆ. ಈ ಬಾಕ್ಸ್ ಆಫೀಸ್​​ ರೇಸ್​​ನಲ್ಲಿ ಎರಡೂ ಸಿನಿಮಾಗಳು ಭರ್ಜರಿ ವೇಗದ ಓಟ ನಡೆಸಿವೆ. ಆದರೆ ಯಾರು ಮುಂದೆ ಇದ್ದಾರೆ? ಯಾರು ಹಿಂದೆ ಇದ್ದಾರೆ? ಅಸಲಿಗೆ ಸಿನಿಮಾ ಬಿಡುಗಡೆ ಆದ ಮೂರೇ ದಿನಗಳಲ್ಲಿ ‘ವಾರ್ 2’ ಸಿನಿಮಾ 200 ಕೋಟಿ ಕಲೆಕ್ಷನ್ ದಾಟಿದೆ. ಆದರೆ ‘ಕೂಲಿ’ ಸಿನಿಮಾ ಕಲೆಕ್ಷನ್ ಎಷ್ಟು?

‘ವಾರ್ 2’ ಸಿನಿಮಾ ನೋಡಿದವರು ಸಿನಿಮಾ ಬಗ್ಗೆ ಧನಾತ್ಮಕ ಅಭಿಪ್ರಾಯಗಳನ್ನು ಹಂಚಿಕೊಂಡಿಲ್ಲ ಆದರೆ ಈ ನೆಗೆಟಿವ್ ವಿಮರ್ಶೆಗಳು ಸಿನಿಮಾದ ಕಲೆಕ್ಷನ್​ಗೆ ಯಾವುದೇ ಹೊಡೆತ ನೀಡಿಲ್ಲ. ‘ವಾರ್ 2’ ಸಿನಿಮಾ ಬಿಡುಗಡೆ ಆದ ಮೂರು ದಿನಗಳಲ್ಲಿ 215 ಕೋಟಿಗೂ ಹೆಚ್ಚು ಮೊತ್ತವನ್ನು ಭಾರತ ಹಾಗೂ ವಿಶ್ವದಾದ್ಯಂತ ಗಳಿಕೆ ಮಾಡಿದೆ. ಭಾನುವಾರದ ಕಲೆಕ್ಷನ್ ಇದರಲ್ಲಿ ಸೇರಿಲ್ಲ. ಭಾನುವಾರದ ಅಂತ್ಯಕ್ಕೆ ಸಿನಿಮಾದ ಕಲೆಕ್ಷನ್ 250 ಕೋಟಿಗೂ ಹೆಚ್ಚಾಗುವ ನಿರೀಕ್ಷೆ ಇದೆ.

ಇನ್ನು ‘ಕೂಲಿ’ ಸಿನಿಮಾ ಬಾಕ್ಸ್ ಆಫೀಸ್​​ ರೇಸಿನಲ್ಲಿ ಆರಂಭದಿಂದಲೂ ಮುಂದೆಯೇ ಇದೆ. ‘ವಾರ್ 2’ ಸಿನಿಮಾವನ್ನು ಸುಲಭವಾಗಿ ಹಿಂದಿಕ್ಕಿದೆ ‘ಕೂಲಿ’ ಸಿನಿಮಾ. ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ಬಿಡುಗಡೆ ಆದ ಮೂರು ದಿನಗಳಲ್ಲಿ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 320 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 200 ಕೋಟಿ ಗಳಿಕೆ ಮಾಡಿದೆ. ಈ ಮೊತ್ತಕ್ಕೆ ಭಾನುವಾರದ ಕಲೆಕ್ಷನ್ ಸೇರಿಲ್ಲ. ಈ ಸಿನಿಮಾ ಇನ್ನೊಂದು ವಾರದಲ್ಲಿ ವಿಶ್ವ ಬಾಕ್ಸ್​​ನಲ್ಲಿ 500 ಕೋಟಿ ಕಲೆಕ್ಷನ್ ದಾಟುವ ನಿರೀಕ್ಷೆ ಇದೆ.

ಇದನ್ನೂ ಓದಿ:ಕದ್ದು-ಮುಚ್ಚಿ ‘ವಾರ್ 2’-‘ಕೂಲಿ’ ಸಿನಿಮಾ ವೀಕ್ಷಿಸಿದ ಸ್ಟಾರ್ ನಟ

‘ವಾರ್ 2’ ಸಿನಿಮಾದ ಒಟ್ಟು ಬಜೆಟ್ 400 ಕೋಟಿ, ಸಿನಿಮಾದ ಬಾಕ್ಸ್ ಆಫೀಸ್​​ ಕಲೆಕ್ಷನ್ 200 ಕೋಟಿ ಆಗಿದ್ದು, ಇನ್ನೂ 200 ಕೋಟಿ ಗಳಿಕೆ ಆಗಬೇಕಿದೆ. ಇನ್ನು ‘ಕೂಲಿ’ ಸಿನಿಮಾದ ಒಟ್ಟು ಬಜೆಟ್ 350 ಕೋಟಿ ರೂಪಾಯಿಗಳು. ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 320 ಕೋಟಿ ಕಲೆಕ್ಷನ್ ದಾಟಿದೆ. ‘ಕೂಲಿ’ ಸಿನಿಮಾನಲ್ಲಿ ರಜನೀಕಾಂತ್, ಆಮಿರ್ ಖಾನ್, ಉಪೇಂದ್ರ, ಅಕ್ಕಿನೇನಿ ನಾಗಾರ್ಜುನ, ಶ್ರುತಿ ಹಾಸನ್, ಸೌಬಿನ್, ರಚಿತಾ ರಾಮ್ ನಟಿಸಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ. ‘ವಾರ್ 2’ ಸಿನಿಮಾನಲ್ಲಿ ಹೃತಿಕ್ ರೋಷನ್, ಜೂ ಎನ್​ಟಿಆರ್ ಹಾಗೂ ಕಿಯಾರಾ ಅಡ್ವಾಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ