‘ಬಾಹುಬಲಿ’-‘ದೇವರ’ ಕ್ಲೈಮ್ಯಾಕ್ಸ್ ಒಂದೇ ರೀತಿ ಇದೆ; ತಲೆಗೆ ಹುಳು ಬಿಟ್ಟ ತಂತ್ರಜ್ಞ

Devara Movie: ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ‘ದೇವರ’ ಸಿನಿಮಾದ ಕ್ಲೈಮ್ಯಾಕ್ ಮತ್ತು ‘ಬಾಹುಬಲಿ’ ಸಿನಿಮಾದ ಕ್ಲೈಮ್ಯಾಕ್ಸ್ ಒಂದೇ ರೀತಿಯಲ್ಲಿದೆ ಎಂದಿದ್ದಾರೆ ‘ದೇವರ’ಕ್ಕೆ ಕೆಲಸ ಮಾಡಿರುವ ತಂತ್ರಜ್ಞನೊಬ್ಬ.

‘ಬಾಹುಬಲಿ’-‘ದೇವರ’ ಕ್ಲೈಮ್ಯಾಕ್ಸ್ ಒಂದೇ ರೀತಿ ಇದೆ; ತಲೆಗೆ ಹುಳು ಬಿಟ್ಟ ತಂತ್ರಜ್ಞ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Sep 25, 2024 | 6:44 PM

‘ಬಾಹುಬಲಿ’ ಮೊದಲ ಭಾಗ ಹುಟ್ಟು ಹಾಕಿದಷ್ಟು ಕ್ರೇಜ್ನ ಮತ್ಯಾವ ಚಿತ್ರವೂ ಸೃಷ್ಟಿ ಮಾಡಿರಲಿಲ್ಲ ಎಂದರೆ ತಪ್ಪಾಗಲಾರದು. ‘ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ’ ಎಂಬ ಪ್ರಶ್ನೆ ಪ್ರೇಕ್ಷಕರನ್ನು ಬಹುವಾಗಿ ಕಾಡುವಂತೆ ಮಾಡಿದ ಸಿನಿಮಾ ಇದು. ಇದರ ಉತ್ತರ ಕಂಡುಕೊಳ್ಳಲು ಎರಡನೇ ಭಾಗ ನೋಡಿದ ಅನೇಕರು ಇದ್ದರು. ವಿಶೇಷ ಎಂದರೆ ಇದೇ ರೀತಿಯಲ್ಲೇ ‘ದೇವರ’ ಸಿನಿಮಾದ ಕ್ಲೈಮ್ಯಾಕ್ಸ್ ಕೂಡ ಇದೆ ಎಂದು ವರದಿ ಆಗಿದೆ. ಈ ವಿಚಾರವನ್ನು ಜೂನಿಯರ್ ಎನ್ಟಿಆರ್ ಸಿನಿಮಾದ ಛಾಯಾಗ್ರಾಹಕ ರಿವೀಲ್ ಮಾಡಿದ್ದಾರೆ.

ಆಲಿಯಾ ಭಟ್, ಕರಣ್ ಜೋಹರ್, ಜೂನಿಯರ್ ಎನ್ಟಿಆರ್ ಅವರು ಒಂದೆಡೆ ಸೇರಿದ್ದರು. ಸಿನಿಮಾ ಬಗ್ಗೆ ಮಾತನಾಡುವಾಗ ‘ದೇವರ’ ಕ್ಲೈಮ್ಯಾಕ್ಸ್ ಬಗ್ಗೆ ಕೇಳಲಾಯಿತು. ‘ಸಿನಿಮಾದ ಅಂತಿಮ ದೃಶ್ಯಗಳ ಬಗ್ಗೆ ಕೇಳಿ ಅಚ್ಚರಿ ಆಯಿತು’ ಎಂದು ಕರಣ್ ಹೇಳಿದರು.

ಛಾಯಾಗ್ರಾಹಕ ರತ್ನವೇಲು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಅವರು ಪ್ರಚಾರದ ಭಾಗವಾಗುತ್ತಿದ್ದು, ಕ್ಲೈಮ್ಯಾಕ್ಸ್ ಬಗ್ಗೆ ಹೇಳಿದ್ದಾರೆ. ‘ದೇವರ’ ಸಿನಿಮಾ ಕ್ಲೈಮ್ಯಾಕ್ಸ್ ಪ್ರೇಕ್ಷಕರ ಮೇಲೆ ಸಾಕಷ್ಟು ಪ್ರಭಾವ ಬೀರಲಿದೆ. ಬಾಹುಬಲಿ 1 ಕ್ಲೈಮ್ಯಾಕ್ಸ್ ಮಾಡಿದ ಪ್ರಭಾವವನ್ನೇ ಇದು ಕೂಡ ಮಾಡಲಿದೆ’ ಎಂದಿದ್ದಾರೆ ರತ್ನವೇಲು.

ಇದನ್ನೂ ಓದಿ:Devara: ‘ದೇವರ’ ಸಿನಿಮಾಕ್ಕೆ ಶಾಕ್ ಕೊಟ್ಟ ಆಂಧ್ರ ಹೈಕೋರ್ಟ್

ಮೊದಲೇ ಹೇಳಿರುವಂತೆ ದೇವರ ಸಿನಿಮಾ ಎರಡು ಭಾಗದಲ್ಲಿ ಬರುತ್ತಿದೆ. ಎರಡನೇ ಭಾಗವನ್ನು ಜನರು ಇಷ್ಟಪಡಬೇಕು, ನೋಡಬೇಕು ಎಂದರೆ ಮೊದಲ ಭಾಗದ ಕೊನೆಯಲ್ಲಿ ಅದ್ಭುತ ಟ್ವಿಸ್ಟ್ ಇಡಬೇಕು. ಅಂದಾಗ ಮಾತ್ರ ಸಿನಿಮಾಗೆ ತೂಕ ಬರೋಕೆ ಸಾಧ್ಯ. ಈಗ ಆ ಕೆಲಸವನ್ನು ಕೊರಟಾಲ ಶಿವ ಮಾಡಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ಕೊರಟಾಲ ಶಿವ ಅವರು ಈ ಮೊದಲು ‘ಆಚಾರ್ಯ’ ಸಿನಿಮಾ ಮಾಡಿದ್ದರು. ಈ ಸಿನಿಮಾ ಸಖತ್ ಫ್ಲಾಪ್ ಆಗಿತ್ತು. ಆ ಬಳಿಕ ಅವರು ನಿರ್ದೇಶನ ಮಾಡಿರೋ ಚಿತ್ರವೇ ‘ದೇವರ’. ರಾಜಮೌಳಿ ಸಿನಿಮಾ ಮಾಡಿದ ನಂತರ ಆ ಹೀರೋ ಬೇರೆ ಯಾವುದೇ ನಿರ್ದೇಶಕನ ಜೊತೆ ಮಾಡಿದರೂ ಸಿನಿಮಾ ಸೋಲುತ್ತದೆ ಎನ್ನುವ ನಂಬಿಕೆ ಇದೆ. ಈ ಎಲ್ಲಾ ಕಾರಣದಿಂದ ‘ದೇವರ’ ಸಿನಿಮಾ ಬಗ್ಗೆ ಫ್ಯಾನ್ಸ್ಗೆ ಭಯ ಮೂಡುವಂತೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್