AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 3’ ಕೂಡ ಬರುತ್ತಾ? ‘ಪುಷ್ಪ 2’ ಬಿಡುಗಡೆಗೂ ಮುನ್ನ ಸುಳಿವು ನೀಡಿದ ರಶ್ಮಿಕಾ ಮಂದಣ್ಣ

ಭಾರಿ ನಿರೀಕ್ಷೆ ಹುಟ್ಟುಹಾಕಿರುವ ‘ಪುಷ್ಪ 2’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ‘ಪುಷ್ಪ’ ಚಿತ್ರದಲ್ಲಿ ಕಥಾನಾಯಕ ಪುಷ್ಪರಾಜ್​ನ ಬೆಳವಣಿಗೆ ಕಂಡಿತ್ತು. ‘ಪುಷ್ಪ 2’ ಚಿತ್ರದಲ್ಲಿ ಆತನ ಆಳ್ವಿಕೆ ಕಾಣಿಸಲಿದೆ. ಈ ನಡುವೆ, ‘ಪುಷ್ಪ 3’ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ರಶ್ಮಿಕಾ ಮಂದಣ್ಣ ಅವರು ಆ ಬಗ್ಗೆ ಸುಳಿವು ನೀಡಿ ಕುತೂಹಲ ಮೂಡಿಸಿದ್ದಾರೆ.

‘ಪುಷ್ಪ 3’ ಕೂಡ ಬರುತ್ತಾ? ‘ಪುಷ್ಪ 2’ ಬಿಡುಗಡೆಗೂ ಮುನ್ನ ಸುಳಿವು ನೀಡಿದ ರಶ್ಮಿಕಾ ಮಂದಣ್ಣ
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ
ಮದನ್​ ಕುಮಾರ್​
|

Updated on: Nov 27, 2024 | 7:02 PM

Share

ನಟಿ ರಶ್ಮಿಕಾ ಮಂದಣ್ಣ ಅವರ ಪಾಲಿಗೆ ‘ಪುಷ್ಪ 2’ ಸಿನಿಮಾ ಸಖತ್ ಸ್ಪೆಷಲ್ ಆಗಿದೆ. ‘ಪುಷ್ಪ’ ಸಿನಿಮಾದಿಂದ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಸಿಕ್ಕಿತ್ತು. ಆ ಬಳಿಕ ಅವರಿಗೆ ಸಾಲು ಸಾಲು ಅವಕಾಶಗಳು ಸಿಕ್ಕವು. ಈಗ ‘ಪುಷ್ಪ 2’ ಸಿನಿಮಾ ಬರುತ್ತಿದೆ. ಡಿಸೆಂಬರ್​ 5ರಂದು ‘ಪುಷ್ಪ 2’ ಬಿಡುಗಡೆ ಆಗಲಿದ್ದು, ಇತ್ತೀಚೆಗಷ್ಟೇ ಶೂಟಿಂಗ್ ಮುಕ್ತಾಯ ಆಗಿದೆ. ಚಿತ್ರೀಕರಣ ಮುಗಿಯಿತು ಎಂಬ ವಿಷಯವನ್ನು ಹಂಚಿಕೊಳ್ಳುವಾಗ ರಶ್ಮಿಕಾ ಮಂದಣ್ಣ ಅವರು ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಹೇಳಿದ್ದಾರೆ. ‘ಪುಷ್ಪ 3’ ಸಿನಿಮಾ ಕೂಡ ಬರಬಹುದು ಎಂಬ ಸುಳಿವನ್ನು ಅವರು ನೀಡಿದ್ದಾರೆ.

ಕಳೆದ 5 ವರ್ಷಗಳಿಂದ ರಶ್ಮಿಕಾ ಮಂದಣ್ಣ ಅವರು ‘ಪುಷ್ಪ’ ಹಾಗೂ ‘ಪುಷ್ಪ 2’ ಸಿನಿಮಾದ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದರು. ಹಾಗಾಗಿ ಅವರಿಗೆ ಈ ಟೀಮ್​ ಜೊತೆ ಉತ್ತಮವಾದ ಬಾಂಧವ್ಯ ಬೆಳೆದಿತ್ತು. ಈಗ ಶೂಟಿಂಗ್​ ಮುಗಿದಿರುವುದರಿಂದ ಅವರಿಗೆ ಬೇಸರ ಆಗಿದೆ. ಹಾಗಿದ್ದರೂ ಕೂಡ ಕೆಲಸಗಳು ಇನ್ನೂ ಇವೆ ಎಂದು ಅವರು ಹೇಳಿದ್ದಾರೆ. ಈ ಮಾತಿನ ಜೊತೆಗೆ ‘ಪುಷ್ಪ 3’ ಬಗ್ಗೆ ಹಿಂಟ್ ಕೊಟ್ಟಿದ್ದಾರೆ.

‘ಖಂಡಿತವಾಗಿಯೂ ಇನ್ನೂ ಸಾಕಷ್ಟು ಕೆಲಸಗಳು ಉಳಿದುಕೊಂಡಿವೆ. ಪ್ರಾಯಶಃ ಪಾರ್ಟ್​ 3 ಕೂಡ ಇದೆ’ ಎಂದು ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ. ಈ ಮಾತನ್ನು ಕೇಳಿ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಮೂರನೇ ಪಾರ್ಟ್​ ಬಗ್ಗೆ ಅಲ್ಲು ಅರ್ಜುನ್ ಅವರು ಸದ್ಯಕ್ಕೆ ಏನೂ ಹೇಳಿಲ್ಲ. ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್​’ ಏನು ಹೇಳುತ್ತದೆ ಎಂಬ ಕೌತುಕ ಕೂಡ ಅಭಿಮಾನಿಗಳಿಗೆ ಇದೆ.

ಇದನ್ನೂ ಓದಿ: ‘ಪುಷ್ಪ 2’ ಸಾಂಗ್ ರಿಲೀಸ್​ ವೇದಿಕೆಯಲ್ಲಿ ಶ್ರೀಲೀಲಾ ಮಸ್ತ್ ಡ್ಯಾನ್ಸ್

‘ಪುಷ್ಪ’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ‘ಪುಷ್ಪ 2’ ಸಿನಿಮಾದ ಮೇಲೆ ನಿರೀಕ್ಷೆ ಜಾಸ್ತಿ ಆಯಿತು. ಹಾಗಾಗಿ ದೊಡ್ಡ ಬಜೆಟ್​ನಲ್ಲಿ ಸೀಕ್ವೆಲ್ ನಿರ್ಮಾಣ ಮಾಡಲಾಯಿತು. ಈ ಕಥೆಯನ್ನು ಇನ್ನಷ್ಟು ಮುಂದುವರಿಸಬಹುದು ಎಂದಾದರೆ ಖಂಡಿತವಾಗಿ ಪಾರ್ಟ್​ 3 ಬರುತ್ತದೆ. ಈಗ ನಿರ್ದೇಶಕ ಸುಕುಮಾರ್​ ಅವರು ‘ಪುಷ್ಪ 2’ ಸಿನಿಮಾದ ಕಥೆಯನ್ನು ಹೇಗೆ ಕೊನೆಯಾಗಿಸಿದ್ದಾರೆ ಎಂಬುದು ತಿಳಿದರೆ ಮುಂದಿನ ದಾರಿ ಸ್ಪಷ್ಟವಾಗುತ್ತದೆ. ಅದನ್ನು ತಿಳಿಯಲು ಡಿಸೆಂಬರ್​ 5ಕ್ಕಾಗಿ ಕಾಯಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.