‘ಈ ಸೆಟ್ ಮನೆಯಂತಾಗಿತ್ತು’; ‘ಪುಷ್ಪ 2’ ಶೂಟ್ ಮುಗಿಸಿ ಭಾವುಕರಾದ ರಶ್ಮಿಕಾ ಮಂದಣ್ಣ

‘ಕಿಸ್ಸಿಕ್..’ ಸಾಂಗ್​ನ ‘ಪುಷ್ಪ’ ತಂಡ ಇತ್ತೀಚೆಗೆ ಚೆನ್ನೈಯನಲ್ಲಿ ರಿಲೀಸ್ ಮಾಡಿತ್ತು. ಇದಾದ ಬೆನ್ನಲ್ಲೇ ಕೆಲ ಪ್ಯಾಚ್​​ವರ್ಕ್​ಗಳ ಶೂಟಿಂಗ್​ನ ತಂಡ ಮಾಡಿದೆ. ಆ ಬಳಿಕ ಕುಂಬಳಕಾಯಿಯನ್ನು ಒಡೆಯಲಾಗಿದೆ. ಈ ಬಗ್ಗೆ ರಶ್ಮಿಕಾ ಮಾಹಿತಿ ನೀಡಿದ್ದಾರೆ.

‘ಈ ಸೆಟ್ ಮನೆಯಂತಾಗಿತ್ತು’; ‘ಪುಷ್ಪ 2’ ಶೂಟ್ ಮುಗಿಸಿ ಭಾವುಕರಾದ ರಶ್ಮಿಕಾ ಮಂದಣ್ಣ
Follow us
ರಾಜೇಶ್ ದುಗ್ಗುಮನೆ
|

Updated on: Nov 27, 2024 | 11:55 AM

ರಶ್ಮಿಕಾ ಮಂದಣ್ಣ ಅವರು ಕಳೆದ ಕೆಲ ವರ್ಷಗಳಿಂದ ‘ಪುಷ್ಪ’ ಚಿತ್ರದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ‘ಪುಷ್ಪ’ ಚಿತ್ರದ ಮೊದಲ ಪಾರ್ಟ್ ಹಿಟ್ ಆದ ಬಳಿಕ ‘ಪುಷ್ಪ 2’ ಚಿತ್ರದ ಕೆಲಸಗಳು ಆರಂಭ ಆದವು. ಈಗ ಕುಂಬಳಕಾಯಿ ಒಡೆಯುವ ಸಮಯ. ಅರ್ಥಾತ್, ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಸಿನಿಮಾ ರಿಲೀಸ್​ಗೆ ಕೆಲವೇ ದಿನಗಳು ಬಾಕಿ ಇರುವಾಗ ‘ಪುಷ್ಪ 2’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ.

‘ಕಿಸ್ಸಿಕ್..’ ಸಾಂಗ್​ನ ‘ಪುಷ್ಪ’ ತಂಡ ಇತ್ತೀಚೆಗೆ ಚೆನ್ನೈಯನಲ್ಲಿ ರಿಲೀಸ್ ಮಾಡಿತ್ತು. ಇದಾದ ಬೆನ್ನಲ್ಲೇ ಕೆಲ ಪ್ಯಾಚ್​​ವರ್ಕ್​ಗಳ ಶೂಟಿಂಗ್​ನ ತಂಡ ಮಾಡಿದೆ. ಆ ಬಳಿಕ ಕುಂಬಳಕಾಯಿಯನ್ನು ಒಡೆಯಲಾಗಿದೆ. ಈ ಬಗ್ಗೆ ರಶ್ಮಿಕಾ ಮಾಹಿತಿ ನೀಡಿದ್ದಾರೆ. ಈಗ ಅವರು ಯಾವ ರೀತಿಯ ಭಾವನೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಹೇಳಿದ್ದಾರೆ.

‘ನನ್ನ 7/8 ವರ್ಷಗಳ ಜರ್ನಿಯಲ್ಲಿ ಕಳೆದ ಐದು ವರ್ಷಗಳು ಈ ಸೆಟ್​ನಲ್ಲಿ ಇದ್ದೆ. ಇದು ನನ್ನ ಮನೆಯ ತರಹದ ಭಾವನೆ ನೀಡಿದೆ. ಇದು ನನ್ನ ಕೊನೆ ದಿನ. ಪಾರ್ಟ್​ 3ನ ಸಾಕಷ್ಟು ಕೆಲಸಗಳು ಉಳಿದುಕೊಂಡಿವೆ. ಆದಾಗ್ಯೂ ಇದು ಕೊನೆ ಎಂದು ಭಾಸವಾಗುತ್ತಿದೆ’ ಎಂದು ರಶ್ಮಿಕಾ ಬರೆದಿಕೊಂಡಿದ್ದಾರೆ. ಈ ಮೂಲಕ ಮೂರನೇ ಪಾರ್ಟ್ ಬರೋದು ಸ್ಪಷ್ಟವಾಗಿದೆ.

‘ಅರ್ಥವಾಗದ ಕೆಲವು ರೀತಿಯ ದುಃಖ ನನ್ನನ್ನು ಕಾಡುತ್ತಿದೆ. ಇದ್ದಕ್ಕಿದ್ದಂತೆ ಎಲ್ಲಾ ಭಾವನೆಗಳು ಒಟ್ಟಿಗೆ ಸೇರಿಕೊಂಡಂತೆ ಭಾಸವಾಗುತ್ತಿದೆ. ಸಾಕಷ್ಟು ಕೆಲಸಗಳು ನನ್ನ ಬಳಿಗೆ ಧಾವಿಸಿ ಬಂದಾಗ ನಾನು ದಣಿದಿದ್ದೆ. ಅಷ್ಟು ಕೆಲಸ ಸಿಕ್ಕಿದ್ದಕ್ಕೆ ನಾನು ಕೃತಜ್ಞ’ ಎಂದಿದ್ದಾರೆ ಅವರು.

‘ಪುಷ್ಪ’ ಸಿನಿಮಾ ನಿರ್ಮಾಣದಲ್ಲಿ ಪ್ರಮುಖ ಭಾಗಿಯಾದ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್ ಅವರಿಗೆ ರಶ್ಮಿಕಾ ಮಂದಣ್ಣ ಅವರು ಧನ್ಯವಾದ ಹೇಳಿದ್ದಾರೆ. ಸದ್ಯ ಈ ಪೋಸ್ಟ್ ಎಲ್ಲ ಕಡೆಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: Kissik Song: ‘ಪುಷ್ಪ 2’ ಚಿತ್ರದ ಕಿಸಿಕ್ ಹಾಡು ರಿಲೀಸ್; ಮಿಂಚಿದ ಶ್ರೀಲೀಲಾ

ಮಂಗಳವಾರ (ನವೆಂಬರ್ 26) ಅಲ್ಲು ಅರ್ಜುನ್ ಕೂಡ ಪೋಸ್ಟರ್ ಒಂದನ್ನು ಹಂಚಿಕೊಂಡು ‘ಪುಷ್ಪ  ಚಿತ್ರದ ಶೂಟಿಂಗ್​ನ ಕೊನೆಯ ದಿನ. 5 ವರ್ಷಗಳ ಪುಷ್ಪ ಪ್ರಯಾಣ ಕೊನೆ ಆಗಿದೆ. ಎಂಥ ಅದ್ಭುತ ಜರ್ನಿ’ ಎಂದು ಅವರು ಬರೆದುಕೊಂಡಿದ್ದಾರೆ. ‘ಪುಷ್ಪ 2’ ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.