AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗ ಚೈತನ್ಯ-ಶೋಭಿತಾ ಮದುವೆ ಮಾರಿಕೊಂಡರೆ? ಸತ್ಯಾಂಶವೇನು?

Sobhita Dhulipala Naga Chaitanya: ಶೋಭಿತಾ ಧುಲಿಪಾಲ ಮತ್ತು ನಾಗ ಚೈತನ್ಯ ಅವರುಗಳು ತಮ್ಮ ಮದುವೆಯನ್ನು ನೆಟ್​ಫ್ಲಿಕ್ಸ್​ಗೆ ಮಾರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ನಿಜಾಂಶವೇನು?

ನಾಗ ಚೈತನ್ಯ-ಶೋಭಿತಾ ಮದುವೆ ಮಾರಿಕೊಂಡರೆ? ಸತ್ಯಾಂಶವೇನು?
ಮಂಜುನಾಥ ಸಿ.
|

Updated on: Nov 27, 2024 | 12:35 PM

Share

ನಟ ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಶೀಘ್ರವೇ ಮದುವೆ ಆಗಲಿದ್ದಾರೆ. ಸಮಂತಾ ಜೊತೆ ವಿವಾಹವಾಗಿದ್ದ ನಾಗ ಚೈತನ್ಯ ವಿಚ್ಛೇದನ ಪಡೆದುಕೊಂಡಿದ್ದರು. ವಿಚ್ಛೇದನದ ಮೂರು ವರ್ಷಗಳ ಬಳಿಕ ಇದೀಗ ನಟಿ ಶೋಭಿತಾ ದುಲಿಪಾಲ ಜೊತೆಗೆ ವಿವಾಹವಾಗುತ್ತಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಡಿಸೆಂಬರ್ 05 ರಂದು ವಿವಾಹ ನಡೆಯಲಿದೆ. ಆದರೆ ಈ ವಿವಾಹದ ವಿಡಿಯೋವನ್ನು ಈ ಜೋಡಿ ನೆಟ್​ಫ್ಲಿಕ್ಸ್​ಗೆ ಭಾರಿ ಮೊತ್ತಕ್ಕೆ ಮಾರಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಶೋಭಿತಾ ಧುಲಿಪಾಲ ಹಾಗೂ ನಾಗ ಚೈತನ್ಯ ಅವರ ವಿವಾಹದ ಪ್ರಸಾರದ ಹಕ್ಕನ್ನು ನೆಟ್​ಫ್ಲಿಕ್ಸ್​ 50 ಕೋಟಿ ರೂಪಾಯಿ ಖರೀದಿ ಮಾಡಿದೆ. ಇಬ್ಬರ ವಿವಾಹ ಕಾರ್ಯಕ್ರಮದ ವಿಧಿ ವಿಧಾನ, ಅತಿಥಿಗಳ ಶುಭ ಹಾರೈಕೆ ಇನ್ನಿತರೆಗಳನ್ನು ನೆಟ್​ಫ್ಲಿಕ್ಸ್​ ಪ್ರಸಾರ ಮಾಡಲಿದೆ ಎನ್ನಲಾಗಿತ್ತು. ಆದರೆ ಇದು ಸುಳ್ಳೆಂದು ಅಕ್ಕಿನೇನಿ ಕುಟುಂಬದ ಮೂಲಗಳು ತಿಳಿಸಿವೆ.

ಅಕ್ಕಿನೇನಿ ಕುಟುಂಬದ ಆಪ್ತರು ಈ ವಿಷಯವನ್ನು ಸ್ಪಷ್ಟಪಡಿಸಿದೆ ಎಂದು ಪಿಂಕ್​ವಿಲ್ಲಾ ವರದಿ ಮಾಡಿದೆ. ‘ಅಕ್ಕಿನೇನಿ ಕುಟುಂಬ ಸದಸ್ಯರು, ಕುಟುಂಬದ ಆಚಾರದಂತೆ ಮದುವೆಯ ಶ್ರೇಷ್ಠತೆ, ಖಾಸಗಿತನವನ್ನು ಕಾಪಾಡಲಿದ್ದು, ಯಾವುದೇ ಕಾರಣಕ್ಕೂ ಮದುವೆಯ ವಿಡಿಯೋ ಅನ್ನು ಯಾವುದೇ ಒಟಿಟಿಗೆ ಮಾರಿಕೊಳ್ಳುತ್ತಿಲ್ಲ. ನೆಟ್​ಫ್ಲಿಕ್ಸ್​ಗೆ ಮದುವೆಯನ್ನು ಮಾರಿಕೊಳ್ಳಲಾಗಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು’ ಎಂದಿದ್ದಾರೆ.

ಇದನ್ನೂ ಓದಿ:ಮದುವೆಯನ್ನು 50 ಕೋಟಿ ರೂಪಾಯಿಗೆ ಮಾರಾಟಕ್ಕೆ ಇಟ್ಟ ನಾಗ ಚೈತನ್ಯ-ಶೋಭಿತಾ ದಂಪತಿ

ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ತಮ್ಮ ಮದುವೆಯನ್ನು ಸರಳವಾಗಿ ಮಾಡಿಕೊಳ್ಳಲಿದ್ದಾರೆ. ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರನ್ನು ಸಾನಿಧ್ಯದಲ್ಲಿ ಈ ವಿವಾಹ ಕಾರ್ಯಕ್ರಮ ನಡೆಯಲಿದೆ. ಈ ಸಂತೋಷದಾಯಕ ಸಂದರ್ಭವನ್ನು ಖಾಸಗಿಯಾಗಿ ಮತ್ತು ಪವಿತ್ರವಾಗಿ ಇಟ್ಟುಕೊಳ್ಳುವ ಮೂಲಕ ಅಕ್ಕಿನೇನಿ ಕುಟುಂಬದ ಪರಂಪರೆಯನ್ನು ಎತ್ತಿಹಿಡಿಯಲು ಅವರು ಬದ್ಧರಾಗಿದ್ದಾರೆ ಎಂದಿದ್ದಾರೆ ಕುಟುಂಬದ ಆಪ್ತರು.

ನಾಗ ಚೈತನ್ಯ ಹಾಗೂ ಸಮಂತಾ 2017 ರಲ್ಲಿ ವಿವಾಹವಾಗಿದ್ದರು. ಅದಕ್ಕೆ ಮುಂಚೆ ಸುಮಾರು ಹತ್ತು ವರ್ಷಗಳ ಕಾಲ ಅವರು ಪ್ರೀತಿಸಿದ್ದರು. ಆದರೆ ಮದುವೆಯಾದ ನಾಲ್ಕು ವರ್ಷಕ್ಕೆ ಅವರು ವಿಚ್ಛೇದನ ಪಡೆದುಕೊಂಡರು. ಆ ನಂತರ ಶೋಭಿತಾ ದುಲಿಪಾಲ ಜೊತೆಗೆ ಪ್ರೇಮದಲ್ಲಿ ಬಿದ್ದ ನಾಗ ಚೈತನ್ಯ ಆಗಸ್ಟ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಡಿಸೆಂಬರ್ 05 ರಂದು ಈ ಜೋಡಿ ವಿವಾಹವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ