ಮಾಜಿ ಮಾವ ರಜನಿ ಎದುರು ಸ್ಪರ್ಧೆ ತಪ್ಪಿಸಿಕೊಂಡ ಧನುಶ್: ‘ಓಂ’ ಮುಂದೂಡಿಕೆ

ಧನುಶ್, ಮಮ್ಮುಟಿ ಇನ್ನೂ ಕೆಲವು ಪ್ರತಿಭಾವಂತ ನಟ-ನಟಿಯರು ಒಟ್ಟಿಗೆ ನಟಿಸಿರುವ ‘ಓಂ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 16ಕ್ಕೆ ರಿಲೀಸ್ ಆಗಬೇಕಿತ್ತು. ಅದೇ ದಿನ ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾದ ರಿಲೀಸ್ ಸಹ ಇದೆ. ಮಾಜಿ ಮಾವ ಮತ್ತು ಅಳಿಯ ಬಾಕ್ಸ್ ಆಫೀಸ್​​ನಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ ಎಂದೇ ಎಣಿಸಲಾಗಿತ್ತು. ಆದರೆ ಈಗ ‘ಓಂ’ ಸಿನಿಮಾದ ರಿಲೀಸ್ ಅನ್ನು ಮುಂದೂಡಲಾಗಿದೆ.

ಮಾಜಿ ಮಾವ ರಜನಿ ಎದುರು ಸ್ಪರ್ಧೆ ತಪ್ಪಿಸಿಕೊಂಡ ಧನುಶ್: ‘ಓಂ’ ಮುಂದೂಡಿಕೆ
Dhanush Rajini

Updated on: Sep 23, 2026 | 7:00 PM

ಧನುಶ್ ಮತ್ತು ಮಮ್ಮುಟಿ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ತಮಿಳು ಸಿನಿಮಾ ‘ಓಂ: ಚಾಪ್ಟರ್ 1’ ಹಲವು ಕಾರಣಗಳಿಗಾಗಿ ಸಿನಿಮಾ ಪ್ರಿಯರ ಗಮನ ಸೆಳೆದಿದೆ. ಧನುಶ್ ಹಾಗೂ ಮಮ್ಮುಟಿ ಅಂಥಹಾ ಅದ್ಭುತ ನಟರು ಒಟ್ಟಿಗೆ ನಟಿಸಿರುವ ಈ ಸಿನಿಮಾ ಅನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಜ್​​ಕುಮಾರ್ ಪೆರಿಸ್ವಾಮಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಸಿನಿಮಾ ಅನ್ನು ಅಕ್ಟೋಬರ್ 16ಕ್ಕೆ ರಿಲೀಸ್ ಮಾಡಲು ಯೋಜಿಸಲಾಗಿತ್ತು. ಆದರೆ ಅದೇ ದಿನ ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ಸಹ ಬಿಡುಗಡೆ ಆಗುತ್ತಿದ್ದು, ‘ಮಾಜಿ ಮಾವ-ಅಳಿಯ’ ಬಾಕ್ಸ್ ಆಫೀಸ್​​ನಲ್ಲಿ ಪರಸ್ಪರ ಎದುರಾಗಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಈಗ ಆ ಸ್ಪರ್ಧೆಯನ್ನು ಅವಾಯ್ಡ್ ಮಾಡಲಾಗಿದೆ.

ರಜನೀಕಾಂತ್ ಅವರ ‘ಜೈಲರ್ 2’ ಸಿನಿಮಾದ ಎದುರು ಸ್ಪರ್ಧೆ ತಪ್ಪಿಸಲೆಂದೇ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗುತ್ತಿದೆ ಎಂಬ ಸುದ್ದಿ ಇದೆ. ‘ಜೈಲರ್ 2’ ಸಿನಿಮಾಕ್ಕೆ ಭಾರಿ ಹೈಪ್ ಇದ್ದು, ಇದು ಸೀಕ್ವೆಲ್ ಸಿನಿಮಾ ಆಗಿರುವ ಕಾರಣ ಸಹಜವಾಗಿಯೇ ಸಿನಿಮಾದ ಬಗ್ಗೆ ಕ್ರೇಜ್ ಹೆಚ್ಚಿರುತ್ತದೆ. ಇದೆಲ್ಲದರ ಜೊತೆಗೆ ರಜನೀಕಾಂತ್ ಅವರ ಮೇಲಿನ ಗೌರವದ ಕಾರಣವೂ ಬೆರೆತು ‘ಓಂ’ ಸಿನಿಮಾದ ರಿಲೀಸ್ ಅನ್ನು ಚಿತ್ರತಂಡ ಮುಂದೂಡಲು ನಿರ್ಣಯಿಸಿದೆ. ವರದಿಗಳ ಪ್ರಕಾರ, ಚಿತ್ರದ ನಿರ್ಮಾಪಕರು ಇದರ ಬಿಡುಗಡೆಯನ್ನು ನವೆಂಬರ್ 27 ಅಥವಾ ಡಿಸೆಂಬರ್ 3, 2026 ಕ್ಕೆ ಮುಂದೂಡಲು ಪರಿಗಣಿಸುತ್ತಿದ್ದಾರೆ. ಸಿನಿಮಾದ ಹೊಸ ಅಧಿಕೃತ ರಿಲೀಸ್ ದಿನಾಂಕವನ್ನು ಚಿತ್ರತಂಡ ಶೀಘ್ರವೇ ಪ್ರಕಟಿಸಲಿದೆ.

ಇದನ್ನೂ ಓದಿ:ಮೋಹನ್​ಲಾಲ್ ತಾಯಿ ಶಾಂತಕುಮಾರಿ ನಿಧನ; ಅಂತಿಮ ನಮನ ಸಲ್ಲಿಸಿದ ಮಮ್ಮುಟಿ

ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾವು ಡಿಸೆಂಬರ್​​ನಲ್ಲಿ ಬಿಡುಗಡೆ ಆಗಬೇಕಿತ್ತು ಆದರೆ ಅದರ ರಿಲೀಸ್ ಮುಂದೂಡಲ್ಪಟ್ಟಿದೆ. ಹಾಗಾಗಿ ಆ ಸ್ಥಾನವನ್ನು ‘ಓಂ’ ಸಿನಿಮಾ ತೆಗೆದುಕೊಳ್ಳುವ ಸಾಧ್ಯತೆ ಇದೆ. ‘ಓಂ: ಚಾಪ್ಟರ್ 1’ ಒಂದು ಆಕ್ಷನ್ ಡ್ರಾಮಾವಾಗಿದ್ದು, ಧನುಶ್ ಮತ್ತು ಮಮ್ಮುಟಿಯ ಜೊತೆಗೆ ಸಾಯಿ ಪಲ್ಲವಿ ಹಾಗೂ ಶ್ರೀಲೀಲಾ ಅವರುಗಳು ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ಬಾಲಿವುಡ್ ಹಿರಿಯ ನಟ ನಸಿರುದ್ದೀನ್ ಶಾ ಸಹ ಪ್ರಮುಖ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಸಾಯಿ ಅಭ್ಯಂಕರ್ ಅವರು ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗಲಿದೆ.

ಇತ್ತೀಚೆಗೆ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಓಂ’ ಸಿನಿಮಾದ ಪ್ರಮುಖರಾದ ಧನುಶ್, ಮಮ್ಮುಟಿ ಮತ್ತು ನಿರ್ದೇಶಕ ರಾಜ್​​ಕುಮಾರ್ ಪೆರಿಯಸ್ವಾಮಿ ಮೂವರೂ ಸಹ ಬೇರೆ ಬೇರೆ ಸಿನಿಮಾಗಳಿಗಾಗಿ ರಾಷ್ಟ್ರಪ್ರಶಸ್ತಿಯನ್ನು ಸ್ವೀಕರಿಸಿದ್ದು ವಿಶೇಷವಾಗಿತ್ತು. ಹಲವು ರಾಷ್ಟ್ರಪ್ರಶಸ್ತಿ ವಿಜೇತರು ಒಟ್ಟಿಗೆ ಕೆಲಸ ಮಾಡುತ್ತಿರುವ ಕಾರಣ ಈ ಸಿನಿಮಾದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us