ಒಟಿಟಿಗೆ ಬಂದ ‘ಧುರಂಧರ್’ ಸಿನಿಮಾ; ಕನ್ನಡ ಪ್ರೇಕ್ಷಕರಿಗೆ ನಿರಾಸೆ

ಥಿಯೇಟರ್‌ಗಳಲ್ಲಿ ಎರಡು ತಿಂಗಳು ಅಬ್ಬರಿಸಿದ ‘ಧುರಂಧರ್’ ಸಿನಿಮಾ ಈಗ ನೆಟ್‌ಫ್ಲಿಕ್ಸ್ ಮೂಲಕ ಪ್ರಸಾರವಾಗುತ್ತಿದೆ. ರಣವೀರ್ ಸಿಂಗ್ ನಟನೆಯ, ಆದಿತ್ಯ ಧಾರ್ ನಿರ್ದೇಶನದ ಈ ಸ್ಪೈ ಚಿತ್ರ ಒಟಿಟಿಯಲ್ಲಿ ತೆಲುಗು, ತಮಿಳಿಗೆ ಡಬ್ ಆಗಿದ್ದರೂ, ಕನ್ನಡದಲ್ಲಿ ಲಭ್ಯವಿಲ್ಲದಿರುವುದು ಕನ್ನಡಿಗರಿಗೆ ನಿರಾಸೆ ಮೂಡಿಸಿದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕನ್ನಡಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡದಿರುವುದು ಬೇಸರದ ಸಂಗತಿ.

ಒಟಿಟಿಗೆ ಬಂದ ‘ಧುರಂಧರ್’ ಸಿನಿಮಾ; ಕನ್ನಡ ಪ್ರೇಕ್ಷಕರಿಗೆ ನಿರಾಸೆ
ಧುರಂಧರ್

Updated on: Jan 30, 2026 | 10:16 AM

ಒಟಿಟಿ ಯುಗದಲ್ಲೂ ಸುಮಾರು ಎರಡು ತಿಂಗಳುಗಳ ಕಾಲ ಥಿಯೇಟರ್​​​ನಲ್ಲಿ ಅಬ್ಬರಿಸಿದ ‘ಧುರಂಧರ್’ ಸಿನಿಮಾ ಈಗ ನೆಟ್​​ಫ್ಲಿಕ್ಸ್ ಮೂಲಕ ಪ್ರಸಾರ ಆರಂಭಿಸಿದೆ. ‘ಧರುಂಧರ್’ ಚಿತ್ರ (Dhurandhar Movie) ಡಿಸೆಂಬರ್ 5ರಂದು ಥಿಯೇಟರ್​​​ನಲ್ಲಿ ಬಿಡುಗಡೆ ಆಯಿತು. ಚಿತ್ರವನ್ನು ಎಲ್ಲರೂ ನೋಡಿ ಕೊಂಡಾಡಿದರು. ಈಗ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ. ಒಟಿಟಿ ಪ್ರೇಕ್ಷಕರು ಈ ಚಿತ್ರವನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಕುತೂಹಲ ಮೂಡಿದೆ.

‘ಧುರಂಧರ್’ ಚಿತ್ರ ಥಿಯೇಟರ್​​​ನಲ್ಲಿ ಹಿಂದಿ ಭಾಷೆಯಲ್ಲಿ ಮಾತ್ರ ರಿಲೀಸ್ ಆಯಿತು. ಈಗ ಒಟಿಟಿಯಲ್ಲಿ ತಂಡದವರು ತಮಿಳು ಹಾಗೂ ತೆಲುಗು ಭಾಷೆಗೂ ಡಬ್ ಮಾಡಿ ರಿಲೀಸ್ ಮಾಡಿದ್ದಾರೆ. ಆದರೆ, ಕನ್ನಡಿಗರಿಗೆ ಈ ವಿಷಯದಲ್ಲಿ ನಿರಾಸೆ ಆಗಿದೆ. ಈ ಚಿತ್ರದ ಕನ್ನಡ ವರ್ಷನ್ ವೀಕ್ಷಣೆಗೆ ಲಭ್ಯವಿಲ್ಲ. ಇದು ಕನ್ನಡಿಗರ ಬೇಸರಕ್ಕೆ ಕಾರಣ ಆಗಿದೆ. ಬಹುತೇಕ ಒಟಿಟಿಗಳು ಕನ್ನಡಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿಲ್ಲ. ಇದು ಕರ್ನಾಟಕದ ಜನತೆಗೆ ನಿಜಕ್ಕೂ ಬೇಸರದ ವಿಷಯ.

‘ಧುರಂಧರ್’ ಸಿನಿಮಾದಲ್ಲಿ ರಣವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಆದಿತ್ಯ ಧಾರ್ ಅವರ ನಿರ್ದೇಶನ ಇದೆ. ಈ ಚಿತ್ರ ರಿಲೀಸ್​​ಗೂ ಮೊದಲು ಸಾಕಷ್ಟು ನೆಗೆಟಿವ್ ಪ್ರಚಾರ ಪಡೆಯಿತು. ಆದರೆ, ಇದನ್ನು ಸಿನಿಮಾ ಮೆಟ್ಟಿ ನಿಂತಿತು. ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಅತಿ ದೀರ್ಘ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರಕ್ಕೆ ಸಿಕ್ಕಿದೆ. ಸಿನಿಮಾದ ಅವಧಿ ಒಟಿಟಿಯಲ್ಲಿ ಮೂರುವರೆ ಗಂಟೆ ಇದೆ.

ಇದನ್ನೂ ಓದಿ: ದಕ್ಷಿಣದ ಮೇಲೆ ಕಣ್ಣು ಪ್ಯಾನ್ ಇಂಡಿಯಾ ಆಗಲಿದೆ ‘ಧುರಂಧರ್ 2’

ಆದಿತ್ಯ ಧಾರ್ ನಿರ್ದೇಶನಕ್ಕೆ ಜನರು ಮರುಳಾಗಿದ್ದಾರೆ. ಈ ಚಿತ್ರ ಸ್ಪೈ ಕಥೆಯನ್ನು ಹೊಂದಿದೆ. ಈ ಸಿನಿಮಾನ ಥಿಯೇಟರ್​​​ನಲ್ಲಿ ಮಿಸ್ ಮಾಡಿಕೊಂಡವರು ಅಥವಾ ಸಿನಿಮಾನ ಚಿತ್ರಮಂದಿರದಲ್ಲಿ ನೋಡಿ ಮತ್ತೊಮ್ಮೆ, ಮಗದೊಮ್ಮೆ ನೋಡಬೇಕು ಎಂದುಕೊಂಡವರು ಈ ಚಿತ್ರವನ್ನು ಒಟಿಟಿಯಲ್ಲಿ ಕಣ್ತುಂಬಿಕೊಳ್ಳಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:15 am, Fri, 30 January 26