
‘ಧುರಂಧರ್’ ಸಿನಿಮಾ (Dhurandhar) ಬಾಕ್ಸ್ ಆಫೀಸ್‌ನಲ್ಲಿ ಮೇಲುಗೈ ಸಾಧಿಸುತ್ತಿದೆ. ರಿಲೀಸ್ ಆಗಿ ಒಂದೂವರೆ ತಿಂಗಳು ಕಳೆದರೂ ಸಿನಿಮಾ ಇನ್ನೂ ಕೋಟಿಗಳಲ್ಲಿ ಕಲೆಕ್ಷನ್ ಮಾಡುತ್ತಿದೆ. ನಿರಂತರ ನಾಗಾಲೋಟದ ನಂತರ ‘ಧುರಂದರ್’ ಸಿನಿಮಾ ಒಟಿಟಿಗೆ ಬರಲು ರೆಡಿ ಆಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಇದರ ದಿನಾಂಕ ಕೂಡ ರಿವೀಲ್ ಆಗಿದೆ.
ರಣವೀರ್ ಸಿಂಗ್, ಅಕ್ಷಯ್ ಖನ್ನಾ ಮೊದಲಾದವರು ನಟಿಸಿದ ‘ಧುರಂಧರ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ 5ರಂದು ಥಿಯೇಟರ್ನಲ್ಲಿ ರಿಲೀಸ್ ಆಯಿತು. ಸಿನಿಮಾ ರಿಲೀಸ್ಗೂ ಮೊದಲು ಚಿತ್ರದ ಬಗ್ಗೆ ಸಾಕಷ್ಟು ನೆಗೆಟಿವಿಟಿ ಹರಡಿತ್ತು. ಆದರೆ, ಎಲ್ಲವನ್ನೂ ಚಿತ್ರ ಮೆಟ್ಟಿ ನಿಂತಿದೆ. ಈ ಸಿನಿಮಾ ಯಾವಾಗ ಒಟಿಟಿಗೆ ಬರುತ್ತದೆ ಎಂದು ಕೆಲವರು ಕಾದು ಕುಳಿತಿದ್ದಾರೆ. ಅವರಿಗೆ ಸಿಹಿ ಸುದ್ದಿ ಸಿಕ್ಕಿದೆ.
‘ಧುರಂಧರ್’ ಸಿನಿಮಾ ಜನವರಿ 30ರಂದು ನೆಟ್ಫ್ಲಿಕ್ಸ್ ಮೂಲಕ ಪ್ರಸಾರ ಆಂಭಿಸಲಿದೆ. ಈ ಮೊದಲಿನ ಯೋಜನೆ ಪ್ರಕಾರ 30 ದಿನಕ್ಕೆ ಚಿತ್ರವನ್ನು ಒಟಿಟಿಗೆ ತರೋ ಆಲೋಚನೆ ಇತ್ತು. ಆದರೆ, ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಕಲೆಕ್ಷನ್ ಆಗಿದ್ದರಿಂದ ಸಿನಿಮಾ ಒಟಿಟಿ ರಿಲೀಸ್ ದಿನಾಂಕವನ್ನು 25 ದಿನ ಮತ್ತೆ ಮುಂದಕ್ಕೆ ಹಾಕಲಾಯಿತು. ಈಗ ಅಂತಿಮವಾಗಿ ಜನವರಿ 30ರಂದು ಸಿನಿಮಾ ಒಟಿಟಿಗೆ ಬರಲಿದೆ.
ಇದನ್ನೂ ಓದಿ: ‘ಧುರಂಧರ್’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣ್ವೀರ್ ಸಿಂಗ್
ಮಾರ್ಚ್ 19ರಂದು ‘ಧುರಂಧರ್ 2’ ಥಿಯೇಟರ್ ಅಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಮೊದಲ ಭಾಗವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲೇಬೇಕಾದ ಅನಿವಾರ್ಯತೆ ತಂಡಕ್ಕೆ ಇದೆ. ಅಲ್ಲದೆ, ಮೊದಲ ಭಾಗವನ್ನು ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಿಸಿ ಇಷ್ಟಪಟ್ಟರೆ, ಸೀಕ್ವೆಲ್ಗೆ ಸಹಕಾರಿ ಆಗಲಿದೆ. ‘ಧುರಂಧರ್’ ಚಿತ್ರವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು ಸ್ಪೈ ಆಗಿ ಕಾಣಿಸಿಕೊಂಡಿದ್ದಾರೆ. ಹಿಂದಿಯಲ್ಲಿ ಮಾತ್ರ ರಿಲೀಸ್ ಆದರೂ ಚಿತ್ರ ವಿಶ್ವಾದ್ಯಂತ 1300 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:03 pm, Thu, 22 January 26