ಸೆಲೆಬ್ರಿಟಿಗಳಿಗೆ ಮಗು ಜನಿಸಿದ ಕೂಡಲೇ ದೊಡ್ಡ ಸುದ್ದಿ ಆಗುವುದು ಸಹಜ. ಆದರೆ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರಿಗೆ ಮಗು ಜನಿಸಿ 2 ತಿಂಗಳಾಗುವವರೆಗೂ ಆ ವಿಚಾರವನ್ನು ಮುಚ್ಚಿಡಲಾಗಿತ್ತು. ಈಗ ಸ್ವತಃ ದಿಯಾ ಮಿರ್ಜಾ ಅವರು ಸತ್ಯ ಬಾಯಿ ಬಿಟ್ಟಿದ್ದಾರೆ. ಆತಂಕದ ವಿಷಯ ಏನೆಂದರೆ ಅವಧಿಗೂ ಮುನ್ನವೇ ಅವರಿಗೆ ಮಗು ಜನಿಸಿದ್ದು ತಾಯಿ-ಮಗುವಿನ ಪ್ರಾಣಕ್ಕೆ ಅಪಾಯ ಕೂಡ ಎದುರಾಗಿತ್ತು. ಆದರೆ ವೈದ್ಯರ ಆರೈಕೆಯಿಂದಾಗಿ ಇಬ್ಬರೂ ಸೇಫ್ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ದಿಯಾ ಮಿರ್ಜಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಮೇ 14ರಂದು ದಿಯಾ ಮಿರ್ಜಾಗೆ ಮಗು ಜನಿಸಿತ್ತು. ಮಗುವಿಗೆ ಅವ್ಯಾನ್ ಆಜಾದ್ ರೇಖಿ ಎಂದು ಹೆಸರು ಇಡಲಾಗಿದೆ. ‘ತುಂಬ ಬೇಗ ಜನಿಸಿರುವ ಈ ಚಿಕ್ಕ ಅದ್ಭುತವನ್ನು ವೈದ್ಯರು ಮತ್ತು ನರ್ಸ್ಗಳು ಐಸಿಯುನಲ್ಲಿ ಇಟ್ಟು ಕಾಪಾಡಿದ್ದಾರೆ’ ಎಂದು ದಿಯಾ ಮಿರ್ಜಾ ತಿಳಿಸಿದ್ದಾರೆ.
ಪ್ರೆಗ್ನೆನ್ಸಿ ಸಂದರ್ಭದಲ್ಲಿ ದಿಯಾ ಮಿರ್ಜಾಗೆ ಅಪೆಂಡಿಸೈಟಿಸ್ ಆಗಿತ್ತು. ಜೊತೆಗೆ ಆತಂಕಕಾರಿ ರೀತಿಯಲ್ಲಿ ಇನ್ಫೆಕ್ಷನ್ ಕೂಡ ಆಗಿತ್ತು. ಇದರಿಂದ ತಾಯಿ ಮತ್ತು ಮಗುವಿನ ಪ್ರಾಣಕ್ಕೆ ಅಪಾಯ ಎದುರಾಗಿತ್ತು. ಕೂಡಲೇ ಸಿಸರಿನ್ ಡೆಲಿವರಿ ಮಾಡಿಸಲಾಯಿತು. ಈ ಕಷ್ಟದ ಸಂದರ್ಭದಲ್ಲಿ ತಮ್ಮ ಸಹಾಯಕ್ಕೆ ನಿಂತ ಎಲ್ಲರಿಗೂ, ಬೆಂಬಲ ನೀಡಿದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ದಿಯಾ ಮಿರ್ಜಾ ಧನ್ಯವಾದ ತಿಳಿಸಿದ್ದಾರೆ. ಆದಷ್ಟು ಬೇಗ ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
???? pic.twitter.com/iL6ioUGc15
— Dia Mirza (@deespeak) July 14, 2021
ಈ ವರ್ಷ ಫೆಬ್ರವರಿಯಲ್ಲಿ ದಿಯಾ ಮಿರ್ಯಾ ಅವರು ಉದ್ಯಮಿ ವೈಭವ್ ರೇಖಿ ಜೊತೆ ಮದುವೆ ಆಗಿದ್ದರು. ಇದು ಅವರಿಗೆ ಎರಡನೇ ವಿವಾಹ. ಅದಕ್ಕೂ ಮುನ್ನ 2014ರಲ್ಲಿ ಅವರು ಸಾಹಿಲ್ ಸಂಘ ಜೊತೆ ಮದುವೆಯಾಗಿ, 2019ರಲ್ಲಿ ವಿಚ್ಛೇದನ ನೀಡಿದ್ದರು. ರೆಹ್ನಾ ಹೈ ತೇರೆ ದಿಲ್ ಮೆ, ಲಗೇ ರಹೋ ಮುನ್ನಾ ಭಾಯ್, ಸಂಜು ಮುಂತಾದ ಸಿನಿಮಾಗಳಿಂದ ದಿಯಾ ಮಿರ್ಜಾ ಹೆಚ್ಚು ಫೇಮಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಅವರು ಹೆಚ್ಚು ಆ್ಯಕ್ಟೀವ್ ಆಗಿರುತ್ತಾರೆ.
ಇದನ್ನೂ ಓದಿ:
‘ಉರಿ’ ನಿರ್ದೇಶಕನ ಜೊತೆ ಗುಟ್ಟಾಗಿ ಮದುವೆಯಾದ ‘ಉಲ್ಲಾಸ ಉತ್ಸಾಹ’ ಚಿತ್ರದ ನಟಿ ಯಾಮಿ ಗೌತಮ್
ತಾಯಿಯಾದ ಬಳಿಕ ಸೀರಿಯಲ್ ನಟಿ ಟಾಪ್ ಲೆಸ್ ಪೋಸ್; ಬೇಸರಗೊಂಡ ಫ್ಯಾನ್ಸ್ ಹೇಳಿದ್ದೇನು?
Published On - 1:31 pm, Wed, 14 July 21