ನಿರ್ದೇಶಕ ಎ.ಆರ್. ಮುರುಗದಾಸ್ (A R Murugadoss) ಅವರು ಇತ್ತೀಚೆಗೆ ಸೈಲೆಂಟ್ ಆಗಿದ್ದಾರೆ. ಒಂದು ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಅವರು ಈಗ ನಿರ್ದೇಶನದಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ನಿರ್ಮಾಣ ಮಾಡಿರುವ ‘ಆಗಸ್ಟ್ 16, 1947’ ಸಿನಿಮಾದ ಸುದ್ದಿಗೋಷ್ಠಿ ಇತ್ತೀಚೆಗೆ ಮುಂಬೈನಲ್ಲಿ ನಡೆಯಿತು. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಎ.ಆರ್. ಮುರುಗದಾಸ್ ಅವರು ‘ಘಜಿನಿ’ ಸಿನಿಮಾ (Ghajini) ನಿರ್ದೇಶಿಸಿ ದೊಡ್ಡ ಯಶಸ್ಸು ಕಂಡಿದ್ದರು. ಆ ಚಿತ್ರಕ್ಕೆ ಸೀಕ್ವೆಲ್ (Ghajini 2) ಬರಲಿದೆ ಎಂದು ಸಿನಿಪ್ರಿಯರು ನಿರೀಕ್ಷಿಸಿದ್ದರು. ಆದರೆ ಅದು ಸಾಧ್ಯವಿಲ್ಲ ಎಂದು ಈಗ ಸ್ವತಃ ಎ.ಆರ್. ಮುರುಗದಾಸ್ ಅವರು ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಕೆಲವು ಅಭಿಮಾನಿಗಳಿಗೆ ಬೇಸರ ಆಗಿದೆ.
2005ರಲ್ಲಿ ತಮಿಳಿನ ‘ಘಜಿನಿ’ ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಯಿತು. ಆ ಚಿತ್ರದಲ್ಲಿ ಸೂರ್ಯ ಅವರ ನಟನೆಗೆ ಫ್ಯಾನ್ಸ್ ಫಿದಾ ಆದರು. ಅವರಿಗೆ ಜೋಡಿಯಾಗಿ ಯಾಸಿನ್ ನಟಿಸಿದ್ದರು. ನಂತರ ಅದೇ ಸಿನಿಮಾವನ್ನು ಬಾಲಿವುಡ್ಗೆ ರಿಮೇಕ್ ಮಾಡಲಾಯಿತು. 2008ರಲ್ಲಿ ಬಂದ ಹಿಂದಿಯ ‘ಘಜಿನಿ’ ಸಿನಿಮಾದಲ್ಲಿ ಆಮಿರ್ ಖಾನ್ ಮತ್ತು ಯಾಸಿನ್ ತೆರೆಹಂಚಿಕೊಂಡರು. ಆ ಚಿತ್ರ ಕೂಡ ಬ್ಲಾಕ್ಬಸ್ಟರ್ ಹಿಟ್ ಆಯಿತು.
ಇದನ್ನೂ ಓದಿ: ‘ಸಲಾರ್’ ಸಿನಿಮಾಗೆ ಸೀಕ್ವೆಲ್ ಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಲಿದೆ ಈ ವಿಚಾರ
ಬಾಲಿವುಡ್ನಲ್ಲಿ 100 ಕೋಟಿ ರೂಪಾಯಿ ಗಳಿಸಿದ ಮೊದಲ ಸಿನಿಮಾ ಎಂಬ ಖ್ಯಾತಿ ‘ಘಜಿನಿ’ ಚಿತ್ರಕ್ಕಿದೆ. ಆ ಬಳಿಕ ಹಿಂದಿ ಚಿತ್ರರಂಗದಲ್ಲಿ ಮುರುಗದಾಸ್ ಅವರಿಗೆ ಸಖತ್ ಬೇಡಿಕೆ ಸೃಷ್ಟಿ ಆಯಿತು. ಇಷ್ಟೆಲ್ಲ ಸಕ್ಸಸ್ ತಂದುಕೊಟ್ಟ ‘ಘಜಿನಿ’ ಸಿನಿಮಾದ ಸೀಕ್ವೆಲ್ಗಾಗಿ ಅವರು ಸ್ಕ್ರಿಪ್ಟ್ ಮಾಡುತ್ತಿದ್ದಾರೆ ಎಂದು ಕೆಲವರು ಗಾಸಿಪ್ ಹಬ್ಬಿಸಿದ್ದರು. ಆದರೆ ಅದು ನಿಜವಲ್ಲ ಎಂದು ಸ್ವತಃ ಮುರುಗದಾಸ್ ಹೇಳಿದ್ದಾರೆ.
ಇದನ್ನೂ ಓದಿ: 2022ರಲ್ಲಿ ಸೀಕ್ವೆಲ್ಗಳದ್ದೇ ದರ್ಬಾರು; ‘ಪಾರ್ಟ್ 2’ ಮಾಡಿ ಗೆದ್ದ ನಿರ್ಮಾಪಕರು
‘ಘಜಿನಿ 2 ಬಗ್ಗೆ ನನಗೆ ಏನೂ ತಿಳಿದಿಲ್ಲ. ನಾಯಕಿ ಪಾತ್ರ ಸತ್ತು ಹೋಯ್ತು, ಕಥಾನಾಯಕನಿಗೆ ನೆನಪಿನ ಶಕ್ತಿ ಇಲ್ಲ. ಈಗ ನಾನು ಹೊಸದೇನನ್ನೋ ಮಾಡುತ್ತೇನೆ. ಒಂದೆರಡು ಸ್ಕ್ರಿಪ್ಟ್ಗಳು ಇವೆ. ಹಿಂದಿಯಲ್ಲಿ ಹೊಸ ಪ್ರಯತ್ನ ಮಾಡುತ್ತೇನೆ’ ಎಂದು ಎ.ಆರ್. ಮುರುಗದಾಸ್ ಹೇಳಿದ್ದಾರೆ. ಆ ಮೂಲಕ ಅವರು ‘ಘಜಿನಿ 2’ ಬಗೆಗಿನ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಎ.ಆರ್. ಮುರುಗದಾಸ್ ನಿರ್ಮಾಣ ಮಾಡಿರುವ ‘ಆಗಸ್ಟ್ 16, 1947’ ಸಿನಿಮಾ ಏಪ್ರಿಲ್ 7ರಂದು ರಿಲೀಸ್ ಆಗಲಿದೆ. ಹಲವು ಭಾಷೆಗಳಿಗೆ ಡಬ್ ಮಾಡಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಈ ಸಿನಿಮಾ ಹೊಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.