2022ರಲ್ಲಿ ಸೀಕ್ವೆಲ್ಗಳದ್ದೇ ದರ್ಬಾರು; ‘ಪಾರ್ಟ್ 2’ ಮಾಡಿ ಗೆದ್ದ ನಿರ್ಮಾಪಕರು
ಈ ವರ್ಷ ಸೀಕ್ವೆಲ್ಗಳ ದರ್ಬಾರು ನಡೆದಿದೆ. ಎರಡನೇ ಪಾರ್ಟ್ ಮಾಡಿ ಗೆದ್ದ ಸಿನಿಮಾಗಳ ಪಟ್ಟಿ ದೊಡ್ಡಿದಿದೆ. ‘ಲವ್ ಮಾಕ್ಟೇಲ್ 2’ , ‘ಕೆಜಿಎಫ್ 2’, ‘ಭೂಲ್ ಭುಲಯ್ಯ 2’ ಸೇರಿ ಅನೇಕ ಸಿನಿಮಾಗಳು ಗೆದ್ದಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಒಂದು ಸಿನಿಮಾ ಯಶಸ್ಸು ಕಂಡ ಬಳಿಕ ಅದಕ್ಕೆ ಅನೇಕರು ಸೀಕ್ವೆಲ್ ಮಾಡುತ್ತಾರೆ. ಕೆಲವು ಸೀಕ್ವೆಲ್ಗಳಿಗೆ ಲಿಂಕ್ ಇರುತ್ತದೆ. ಇನ್ನೂ ಕೆಲವು ಸೀಕ್ವೆಲ್ಗಳಲ್ಲಿ ಬೇರೆಯದೇ ಕಥೆ ಇರುತ್ತದೆ. ಕನ್ನಡ (Kannada Cinema), ಹಿಂದಿ ಸೇರಿ ಅನೇಕ ಕಡೆಗಳಲ್ಲಿ ಈ ವರ್ಷ ಸೀಕ್ವೆಲ್ಗಳ ದರ್ಬಾರು ನಡೆದಿದೆ. ಎರಡನೇ ಪಾರ್ಟ್ ಮಾಡಿ ಗೆದ್ದ ಸಿನಿಮಾಗಳ ಪಟ್ಟಿ ದೊಡ್ಡಿದಿದೆ. ‘ಲವ್ ಮಾಕ್ಟೇಲ್ 2’ (Love Moctail 2), ‘ಕೆಜಿಎಫ್ 2’, ‘ಭೂಲ್ ಭುಲಯ್ಯ 2’ ಸೇರಿ ಅನೇಕ ಸಿನಿಮಾಗಳು ಗೆದ್ದಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
‘ಲವ್ ಮಾಕ್ಟೇಲ್ 2’
‘ಲವ್ ಮಾಕ್ಟೇಲ್’ ಸಿನಿಮಾ ಗೆದ್ದು ಬೀಗಿತ್ತು. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಟನೆಯ ಈ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅದಕ್ಕೆ ಸೀಕ್ವೆಲ್ ಸಿದ್ಧಪಡಿಸಿದರು ಡಾರ್ಲಿಂಗ್ ಕೃಷ್ಣ. ಮೊದಲ ಪಾರ್ಟ್ಗೆ ಕನೆಕ್ಷನ್ ಕೊಟ್ಟು ಚಿತ್ರದ ಕಥೆಯನ್ನು ಮುಂದುವರಿಸಿದ್ದರು. ಇದು ಪ್ರೇಕ್ಷಕರಿಗೆ ಇಷ್ಟವಾಯಿತು ಈ ಸಿನಿಮಾ ಗೆದ್ದಿದೆ. ಫೆಬ್ರವರಿ 11ರಂದು ಚಿತ್ರ ರಿಲೀಸ್ ಆಗಿದೆ.
‘ಕೆಜಿಎಫ್ 2’
‘ಕೆಜಿಎಫ್’ ಸಿನಿಮಾ ಅಬ್ಬರಿಸಿ ನಾಲ್ಕು ವರ್ಷಗಳ ಬಳಿಕ ‘ಕೆಜಿಎಫ್ 2’ ರಿಲೀಸ್ ಆಯಿತು. ಈ ಸಿನಿಮಾ ಏಪ್ರಿಲ್ 14ರಂದು ರಿಲೀಸ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಒಟಿಟಿಯಲ್ಲೂ ಚಿತ್ರ ಗೆದ್ದಿದೆ. ಯಶ್ ನಟನೆಯ ಈ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ ಇದೆ.
‘ಭೂಲ್ ಭುಲಯ್ಯ 2’
ಹಿಂದಿಯಲ್ಲಿ ರಿಲೀಸ್ ಆದ ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದರು. ಈ ಸಿನಿಮಾ ಯಶಸ್ಸು ಕಂಡಿತ್ತು. ಎರಡನೇ ಪಾರ್ಟ್ಗೆ ಕಾರ್ತಿಕ್ ಆರ್ಯನ್ ಹೀರೋ ಆದರು. ಸೀಕ್ವೆಲ್ಗೆ ಹೀರೋ ಬೇರೆ ಆದರೂ ಥೀಮ್ ಅದೇ ಇಟ್ಟುಕೊಳ್ಳಲಾಗಿತ್ತು. ಈ ಕಾರಣಕ್ಕೆ ಸಿನಿಮಾ ಗೆದ್ದಿತ್ತು. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.
ಇದನ್ನೂ ಓದಿ: ‘ಕೆಜಿಎಫ್’ ತಾತ ಈಗ ಕಾಶ್ಮೀರಿ ಪಂಡಿತ; ಈ ವಯಸ್ಸಲ್ಲೂ ಕಾಡಲ್ಲಿ ಓಡಿದ ಕೃಷ್ಣ
‘ದೃಶ್ಯಂ 2’
ಅಜಯ್ ದೇವಗನ್ ನಟನೆಯ ‘ದೃಶ್ಯಂ’ ಸಿನಿಮಾ ಮಲಯಾಳಂನ ‘ದೃಶ್ಯಂ’ ಚಿತ್ರದ ರಿಮೇಕ್. ಮಲಯಾಳಂನಲ್ಲಿ ಬಂದ ‘ದೃಶ್ಯಂ 2’ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಾಯಿತು. ಈ ಚಿತ್ರ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ವರ್ಷ ಗೆದ್ದ ಕೆಲವೇ ಕೆಲವು ಬಾಲಿವುಡ್ ಚಿತ್ರಗಳಲ್ಲಿ ಇದು ಕೂಡ ಒಂದು.
‘ಕಾರ್ತಿಕೇಯ 2’
‘ಕಾರ್ತಿಕೇಯ’ ಸಿನಿಮಾ ಹಿಟ್ ಆದ ನಂತರದಲ್ಲಿ ‘ಕಾರ್ತಿಕೇಯ 2’ ಚಿತ್ರ ತೆರೆಗೆ ಬಂತು. ಆಗಸ್ಟ್ ತಿಂಗಳಲ್ಲಿ ರಿಲೀಸ್ ಆದ ಈ ಚಿತ್ರದಲ್ಲಿ ನಿಖಿಲ್ ಸಿದ್ದಾರ್ಥ್ ಹಾಗೂ ಅನುಪಮಾ ಪರಮೇಶ್ವರನ್ ನಟಿಸಿದ್ದರು. ಈ ಸಿನಿಮಾ ಗೆದ್ದಿದೆ.
ವಿಕ್ರಮ್
ಲೋಕೇಶ್ ಕನಗರಾಜ್ ನಿರ್ದೇಶನದ, ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ಸೂಪರ್ ಹಿಟ್ ಆಯಿತು. ಕಾರ್ತಿ ನಟನೆಯ ‘ಕೈದಿ’ ಚಿತ್ರದ ಸೀಕ್ವೆಲ್ ರೀತಿಯಲ್ಲಿ ಈ ಸಿನಿಮಾ ಮೂಡಿ ಬಂದಿತ್ತು. 1986ರಲ್ಲಿ ತೆರೆಗೆ ಬಂದ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಚಿತ್ರಕ್ಕೂ ಕನೆಕ್ಷನ್ ಇತ್ತು ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:16 am, Sun, 4 December 22