AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pushpa 2: ‘ಪುಷ್ಪ 2’ ಚಿತ್ರಕ್ಕೆ ಭಯಾನಕ ವಿಲನ್​ ಎಂಟ್ರಿ? ವಿದೇಶಿ ನಟನಿಗೆ ಮಣೆ ಹಾಕಿದ ನಿರ್ದೇಶಕ ಸುಕುಮಾರ್​

Allu Arjun | Sajjad Delafrooz: ಅಲ್ಲು ಅರ್ಜುನ್​ ನಟನೆಯ ‘ಪುಷ್ಪ 2’ ಚಿತ್ರದಲ್ಲಿ ಹೀರೋ ಸಾಮ್ರಾಜ್ಯ ದೊಡ್ಡದಾಗಲಿದೆ. ಅದಕ್ಕೆ ತಕ್ಕಂತೆ ಪಾತ್ರವರ್ಗವನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ.

Pushpa 2: ‘ಪುಷ್ಪ 2’ ಚಿತ್ರಕ್ಕೆ ಭಯಾನಕ ವಿಲನ್​ ಎಂಟ್ರಿ? ವಿದೇಶಿ ನಟನಿಗೆ ಮಣೆ ಹಾಕಿದ ನಿರ್ದೇಶಕ ಸುಕುಮಾರ್​
ಅಲ್ಲು ಅರ್ಜುನ್, ಸಾಜದ್ ಡೆಲಾಫ್ರೂಜ್
TV9 Web
| Edited By: |

Updated on:Dec 04, 2022 | 12:43 PM

Share

ಬಹುನಿರೀಕ್ಷಿತ ‘ಪುಷ್ಪ 2’ (Pushpa 2) ಸಿನಿಮಾದ ಬಗ್ಗೆ ಹಲವು ಬಗೆಯ ಗಾಸಿಪ್​ಗಳು ಕೇಳಿಬರುತ್ತಲೇ ಇವೆ. ಆದರೆ ಆ ಯಾವ ವಿಚಾರಗಳ ಬಗ್ಗೆಯೂ ಚಿತ್ರತಂಡದವರಿಂದ ಸ್ಪಷ್ಟನೆ ಸಿಗುತ್ತಿಲ್ಲ. ಚಿತ್ರದ ಪಾತ್ರವರ್ಗದ ಬಗ್ಗೆ ಈಗ ಲೇಟೆಸ್ಟ್​ ಸುದ್ದಿ ಹರಿದಾಡುತ್ತಿದೆ. ಈ ಚಿತ್ರದಲ್ಲಿ ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಸೇರಿದಂತೆ ಅನೇಕರು ಮುಖ್ಯ​ ಪಾತ್ರಗಳನ್ನು ಮಾಡುತ್ತಿದ್ದಾರೆ. ಖಳನಾಯಕರ ಸಾಲಿಗೆ ವಿದೇಶಿ ನಟ ಸಜ್ಜಾದ್ ಡೆಲಾಫ್ರೂಜ್ (Sajjad Delafrooz) ಅವರು ಕೂಡ ಸೇರ್ಪಡೆ ಆಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಹಾಲಿವುಡ್​, ಬಾಲಿವುಡ್​ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಜ್ಜಾದ್ ಅವರು ಖ್ಯಾತಿ ಗಳಿಸಿದ್ದಾರೆ. ಅವರು ಅಲ್ಲು ಅರ್ಜುನ್​ (Allu Arjun) ಎದುರು ವಿಲನ್​ ಆಗಿ ಅಬ್ಬರಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

2021ರಲ್ಲಿ ತೆರೆಕಂಡ ‘ಪುಷ್ಪ’ ಸಿನಿಮಾ ಸೂಪರ್​ ಹಿಟ್​ ಆಯಿತು. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಯಶಸ್ಸು ಕಂಡಿದ್ದರಿಂದ ಸಹಜವಾಗಿಯೇ ಸೀಕ್ವೆಲ್​ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಆ ನಿರೀಕ್ಷೆಯ ಮಟ್ಟಕ್ಕೆ ಸಿನಿಮಾವನ್ನು ಕಟ್ಟಿಕೊಡಲು ನಿರ್ದೇಶಕ ಸುಕುಮಾರ್​ ಅವರು ಪ್ರಯತ್ನಿಸುತ್ತಿದ್ದಾರೆ. ವಿಲನ್​ ಸ್ಟ್ರಾಂಗ್ ಆಗಿ ಇದ್ದಷ್ಟು ಹೀರೋ ಗತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆ ಕಾರಣಕ್ಕಾಗಿ ಖಡಕ್​ ವಿಲನ್​ಗಳನ್ನು ಚಿತ್ರತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

ಸಜ್ಜಾದ್ ಡೆಲಾಫ್ರೂಜ್ ಅವರು ಇರಾನ್​ ಮೂಲದ ನಟ. ಸಲ್ಮಾನ್​ ಖಾನ್​ ನಟನೆಯ ‘ಟೈಗರ್​ ಜಿಂದಾ ಹೈ’ ಚಿತ್ರದಲ್ಲಿ ಅವರು ಭಯಾನಕ ವಿಲನ್​ ಪಾತ್ರ ಮಾಡಿ ಸೈ ಎನಿಸಿಕೊಂಡರು. ವೆಬ್​ ಸಿರೀಸ್​ಗಳಲ್ಲಿಯೂ ಅವರು ಖಳನಾಯಕನಾಗಿ ಅಬ್ಬರಿಸಿದ್ದಾರೆ. ಈಗ ‘ಪುಷ್ಪ 2’ ಚಿತ್ರದಲ್ಲಿ ನಟಿಸುವ ಚಾನ್ಸ್​ ಅವರಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಆದಷ್ಟು ಬೇಗ ಚಿತ್ರತಂಡದಿಂದ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ
Image
‘ಪುಷ್ಪ 2’ ಚಿತ್ರದಲ್ಲಿ ಅಸಲಿ ವಿಲನ್ ಯಾರು? ಅಲ್ಲು ಅರ್ಜುನ್ ಚಿತ್ರದಲ್ಲಿದೆ ದೊಡ್ಡ ಟ್ವಿಸ್ಟ್
Image
‘ಪುಷ್ಪ 2’ ಚಿತ್ರದ ಮುಹೂರ್ತಕ್ಕೆ ಗೈರಾದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ; ಕಾರಣ ಏನು?
Image
Allu Arjun: ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್​ ಲುಕ್​ ಹೀಗಿರುತ್ತಾ? ವೈರಲ್​ ಆಗಿದೆ ಹೊಸ ಫೋಟೋ
Image
Pushpa 2 Story: ರಾಕಿ ಭಾಯ್​ ರೀತಿ ವಿದೇಶಕ್ಕೆ ಹೋಗ್ತಾನಾ ಪುಷ್ಪರಾಜ್​? ‘ಕೆಜಿಎಫ್​ 2’ ಚಿತ್ರಕ್ಕೆ ‘ಪುಷ್ಪ 2’ ಕಥೆ ಹೋಲಿಕೆ

‘ಪುಷ್ಪ 2’ ಸಿನಿಮಾದ ಕಥೆಯ ಮೇಲೆ ನಿರ್ದೇಶಕ ಸುಕುಮಾರ್​ ಅವರು ಸಾಕಷ್ಟು ಹೋಮ್​ ವರ್ಕ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಥಾನಾಯಕ ಪುಷ್ಪರಾಜ್​ನ ಸಾಮ್ರಾಜ್ಯ ದೊಡ್ಡದಾಗಲಿದೆ. ರಕ್ತ ಚಂದನ ಸಾಗಣೆಯ ದಂಧೆ ವಿದೇಶಕ್ಕೂ ಹಬ್ಬಲಿದೆ. ಹಾಗಾಗಿ ವಿವಿಧ ದೇಶಗಳಿಗೆ ಪುಷ್ಪರಾಜ್​ ತೆರಳುತ್ತಾನೆ. ಅಲ್ಲಿ ಅನೇಕ ವಿಲನ್​ಗಳನ್ನು ಎದುರು ಹಾಕಿಕೊಳ್ಳುತ್ತಾನೆ. ಈ ರೀತಿಯಾಗಿ ಕಥೆ ಸಾಗಲಿದೆ. ಅದಕ್ಕೆ ತಕ್ಕಂತೆ ಪಾತ್ರವರ್ಗವನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಅಲ್ಲು ಅರ್ಜುನ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅವರು ಮುಂದುವರಿಯಲಿದ್ದಾರೆ. ಅವರ ಪಾತ್ರದ ಬಗ್ಗೆಯೂ ಅನೇಕ ಅಂತೆ-ಕಂತೆಗಳು ಹಬ್ಬಿವೆ. ಅಲ್ಲು ಅರ್ಜುನ್​ ಅವರು ಇನ್ನಷ್ಟೇ ಈ ಚಿತ್ರದ ಶೂಟಿಂಗ್​ನಲ್ಲಿ ಭಾಗಿ ಆಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:43 pm, Sun, 4 December 22