AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sreeleela: ಅಲ್ಲು ಅರ್ಜುನ್​ ಜತೆ ತೆರೆ ಹಂಚಿಕೊಂಡ ಶ್ರೀಲೀಲಾ; ಇಲ್ಲಿದೆ ಇಂಟರೆಸ್ಟಿಂಗ್​ ಅಪ್​ಡೇಟ್​

Allu Arjun | Tollywood News: ಟಾಲಿವುಡ್​ ಪ್ರೇಕ್ಷಕರಿಗೆ ಶ್ರೀಲೀಲಾ ಹೆಚ್ಚು ಇಷ್ಟ ಆಗಿದ್ದಾರೆ. ಪರಿಣಾಮವಾಗಿ ಒಂದಕ್ಕಿಂತ ಮತ್ತೊಂದು ದೊಡ್ಡ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

Sreeleela: ಅಲ್ಲು ಅರ್ಜುನ್​ ಜತೆ ತೆರೆ ಹಂಚಿಕೊಂಡ ಶ್ರೀಲೀಲಾ; ಇಲ್ಲಿದೆ ಇಂಟರೆಸ್ಟಿಂಗ್​ ಅಪ್​ಡೇಟ್​
ಶ್ರೀಲೀಲಾ, ಅಲ್ಲು ಅರ್ಜುನ್
TV9 Web
| Edited By: |

Updated on:Nov 28, 2022 | 1:31 PM

Share

ನಟಿ ಶ್ರೀಲೀಲಾ (Sreeleela) ಅವರು ಕನ್ನಡದಲ್ಲಿ ಮಿಂಚುವುದರ ಜೊತೆಗೆ ಪರಭಾಷೆಯಲ್ಲೂ ನಟಿಸಿದ್ದಾರೆ. ಕನ್ನಡದ ‘ಕಿಸ್​’, ‘ಭರಾಟೆ’, ‘ಬೈಟೂ ಲವ್​’ ಸಿನಿಮಾಗಳಲ್ಲಿ ಜನರನ್ನು ರಂಜಿಸಿದ ಈ ಸುಂದರಿಗೆ ತೆಲುಗು ಮಂದಿ ಮಣೆ ಹಾಕುತ್ತಿದ್ದಾರೆ. ಟಾಲಿವುಡ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಆಫರ್​ಗಳನ್ನು ಪಡೆದುಕೊಳ್ಳುತ್ತ ಶ್ರೀಲೀಲಾ ಮುಂದುವರಿಯುತ್ತಿದ್ದಾರೆ. ಅಚ್ಚರಿ ಎಂದರೆ ಅವರೀಗ ಅಲ್ಲು ಅರ್ಜನ್​ (Allu Arjun) ಜೊತೆ ನಟಿಸಿದ್ದಾರೆ! ಇಂಥ ಚಾನ್ಸ್​ ಸಿಕ್ಕಿದ್ದಕ್ಕೆ ಅವರ ಫ್ಯಾನ್ಸ್​ ಖುಷಿ ಆಗಿದ್ದಾರೆ. ಆದರೆ ಶ್ರೀಲೀಲಾ ಅವರು ಅಲ್ಲು ಅರ್ಜುನ್​ ಜೊತೆ ತೆರೆ ಹಂಚಿಕೊಂಡಿರುವುದು ಸಿನಿಮಾಗಾಗಿ ಅಲ್ಲ. ಬದಲಿಗೆ, ಒಂದು ಜಾಹೀರಾತಿನಲ್ಲಿ ಇವರಿಬ್ಬರು ಜೋಡಿ ಆಗಿದ್ದಾರೆ. ಒಟಿಟಿ (OTT) ಸಂಸ್ಥೆಯೊಂದರ ಜಾಹೀರಾತಿನ ಸಲುವಾಗಿ ಅಲ್ಲು ಅರ್ಜುನ್​ ಮತ್ತು ಶ್ರೀಲೀಲಾ ಅವರು ಜೊತೆಯಾಗಿ ಕ್ಯಾಮೆರಾ ಎದುರಿಸಿದ್ದಾರೆ.

ಅಲ್ಲು ಅರ್ಜುನ್​ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಡಿಮ್ಯಾಂಡ್​ ಇದೆ. ಅವರ ಜೊತೆ ನಟಿಸಬೇಕು ಎಂಬ ಆಸೆ ಬಹುತೇಕ ಎಲ್ಲ ನಟಿಯರಿಗೂ ಇರುತ್ತದೆ. ಕೆಲವರು ಸಿನಿಮಾದಲ್ಲಿ ತೆರೆ ಹಂಚಿಕೊಂಡರೆ, ಇನ್ನೂ ಕೆಲವರು ಜಾಹೀರಾತಿನಲ್ಲಿ ಒಟ್ಟಿಗೆ ನಟಿಸುತ್ತಾರೆ. ಈಗ ಶ್ರೀಲೀಲಾ ಕೂಡ ಜಾಹೀರಾತಿನಲ್ಲಿ ಅಲ್ಲು ಅರ್ಜುನ್​ಗೆ ಜೋಡಿ ಆಗಿದ್ದಾರೆ.

ಇತ್ತೀಚೆಗೆ ಈ ಜಾಹೀರಾತಿನ ಶೂಟಿಂಗ್​ ಮುಗಿದಿದೆ. ಇದನ್ನು ದೊಡ್ಡ ಮಟ್ಟದಲ್ಲಿ ಚಿತ್ರೀಕರಿಸಲಾಗಿದೆ. ಖ್ಯಾತ ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಅವರು ಇದಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ರವಿ ಕೆ. ಚಂದ್ರನ್​ ಛಾಯಾಗ್ರಹಣ ಮಾಡಿದ್ದಾರೆ. ಶೀಘ್ರದಲ್ಲೇ ಈ ಜಾಹೀರಾತು ಬಿತ್ತರ ಆಗಲಿದೆ.

ಇದನ್ನೂ ಓದಿ
Image
ನಟಿ ಶ್ರೀಲೀಲಾ ಸೌಂದರ್ಯಕ್ಕೆ ಸೋತ ಫ್ಯಾನ್ಸ್; ಇಲ್ಲಿದೆ ಹೊಸ ಫೋಟೋಗಳು
Image
ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ಶ್ರೀಲೀಲಾ ನಟನೆ; ಯಾವ ಪಾತ್ರ? ಇಲ್ಲಿದೆ ಟ್ವಿಸ್ಟ್..​
Image
‘ಬೈ ಟೂ ಲವ್​’ ನೋಡಿ ಪ್ರೇಕ್ಷಕರು ಎಮೋಷನಲ್​ ಆಗುತ್ತಿದ್ದಾರೆ: ಶ್ರೀಲೀಲಾ
Image
ಸ್ಯಾಡ್​ ಮ್ಯೂಸಿಕ್​ ಕೇಳಿದ್ರೆ ಗಳಗಳನೆ ಅಳ್ತಾರೆ ನಟಿ ಶ್ರೀಲೀಲಾ; ‘ಮಹಾನಟಿ’ ಎಂಬ ಹೊಗಳಿಕೆ

ಶ್ರೀಲೀಲಾ ಅವರು ತೆಲುಗಿನಲ್ಲಿ ಮೊದಲು ನಟಿಸಿದ ಸಿನಿಮಾ ‘ಪೆಳ್ಳಿ ಸಂದಡಿ’. ಈ ಚಿತ್ರದಲ್ಲಿ ಅವರು ಸಖತ್​ ಗ್ಲಾಮರಸ್​ ಆಗಿ ಕಾಣಿಸಿಕೊಂಡರು. ಟಾಲಿವುಡ್​ ಪ್ರೇಕ್ಷಕರಿಗೆ ಅವರು ಹೆಚ್ಚು ಇಷ್ಟ ಆಗಿದ್ದಾರೆ. ಪರಿಣಾಮವಾಗಿ ಒಂದಕ್ಕಿಂತ ಮತ್ತೊಂದು ದೊಡ್ಡ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

ರವಿ ತೇಜಾ ನಟನೆಯ ‘ಧಮಾಕಾ’ ಸಿನಿಮಾಗೆ ಶ್ರೀಲೀಲಾ ನಾಯಕಿ ಆಗಿದ್ದಾರೆ. ಆ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಇನ್ನೂ ಹಲವು ಚಿತ್ರತಂಡಗಳ ಜೊತೆ ಅವರು ಮಾತುಕತೆ ನಡೆಸುತ್ತಿದ್ದಾರೆ. ಟಾಲಿವುಡ್​ನಲ್ಲಿ ಅವರ ಚಾರ್ಮ್​ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಅವರು ಯಾವೆಲ್ಲ ಪ್ರಾಜೆಕ್ಟ್​ ಒಪ್ಪಿಕೊಳ್ಳಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಲ್ಲಿ ನಿರ್ಮಾಣ ಆಗಿದೆ.

ಇನ್ನು, ಅಲ್ಲು ಅರ್ಜುನ್​ ಅವರು ಬಹುನಿರೀಕ್ಷಿತ ‘ಪುಷ್ಪ 2’ ಚಿತ್ರದ ಶೂಟಿಂಗ್​ನಲ್ಲಿ ಇನ್ನಷ್ಟೇ ಪಾಲ್ಗೊಳ್ಳಬೇಕಿದೆ. ಕಾರಣಾಂತರಗಳಿಂದ ಈ ಸಿನಿಮಾದ ಕೆಲಸಗಳು ವಿಳಂಬ ಆಗುತ್ತಲೇ ಇವೆ. ಅದರ ನಡುವೆಯೇ ಅವರು ಶ್ರೀಲೀಲಾ ಜೊತೆ ಜಾಹೀರಾತಿನಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:33 pm, Sun, 27 November 22

ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಚಾಕು, ಲಾಂಗ್‌ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು
ಚಾಕು, ಲಾಂಗ್‌ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ