‘ಶ್ರೀದೇವಿ ಅಂಥ ಏಂಜಲ್​ನ ಅಡುಗೆಗೆ ಇಟ್ಟುಕೊಂಡಿದ್ದಾರೆ; ಆರ್​ಜಿವಿಯ ಮುಗಿಯದ ವಿವಾದಗಳು

ಯುವ ನಟಿಯರ ಜೊತೆ ಸಖತ್ ಬೋಲ್ಡ್ ಆಗಿ ಮಾತನಾಡಿ ರಾಮ್ ಗೋಪಾಲ್ ವರ್ಮಾ ಅವರು ಸುದ್ದಿ ಆಗಿದ್ದಿದಿದೆ. ನಟಿಯರ ಮೇಲೆ ಮದ್ಯ ಹೊಯ್ದು ಅವರು ಚರ್ಚೆ ಹುಟ್ಟುಹಾಕಿದ್ದೂ ಇದೆ. ಇಂದು ರಾಮ್ ಗೋಪಾಲ್ ವರ್ಮಾ ಅವರಿಗೆ ಜನ್ಮದಿನ. ಅವರು ಮಾಡಿರೋ ವಿವಾದಗಳ ಬಗ್ಗೆ ಇಲ್ಲಿದೆ ಮಾಹಿತಿ.

‘ಶ್ರೀದೇವಿ ಅಂಥ ಏಂಜಲ್​ನ ಅಡುಗೆಗೆ ಇಟ್ಟುಕೊಂಡಿದ್ದಾರೆ; ಆರ್​ಜಿವಿಯ ಮುಗಿಯದ ವಿವಾದಗಳು
ಆರ್​ಜಿವಿ
Edited By:

Updated on: Apr 07, 2024 | 6:30 AM

ನಿರ್ದೇಶಕ ಹಾಗೂ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ (Ram Gopal Varma) ಸದಾ ಸುದ್ದಿಯಲ್ಲಿ ಇರುತ್ತಾರೆ. ಅವರು ಸಿನಿಮಾಗಳ ಜೊತೆಗೆ ತಾವು ಮಾಡುವ ವಿವಾದಗಳಿಂದಲೂ ಸುದ್ದಿ ಆಗುತ್ತಾರೆ. ಅವರು ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ಯುವ ನಟಿಯರ ಜೊತೆ ಸಖತ್ ಬೋಲ್ಡ್ ಆಗಿ ಮಾತನಾಡಿ ಅವರು ಸುದ್ದಿ ಆಗಿದ್ದಿದಿದೆ. ನಟಿಯರ ಮೇಲೆ ಮದ್ಯ ಹೊಯ್ದು ಅವರು ಚರ್ಚೆ ಹುಟ್ಟುಹಾಕಿದ್ದೂ ಇದೆ. ಇಂದು (ಏಪ್ರಿಲ್ 7) ರಾಮ್ ಗೋಪಾಲ್ ವರ್ಮಾ ಅವರಿಗೆ ಜನ್ಮದಿನ. ಈ ದಿನ ಅವರು ಮಾಡಿರೋ ವಿವಾದಗಳನ್ನು ನೆನಪಿಸಿಕೊಳ್ಳೋಣ.

ಶ್ರೀದೇವಿ ಬಗ್ಗೆ

ರಾಮ್ ಗೋಪಾಲ್ ವರ್ಮಾ ಅವರಿಗೆ ಶ್ರೀದೇವಿ ಅಂದರೆ ಸಖತ್ ಇಷ್ಟ. ಅವರ ಬಗ್ಗೆ ನೀಡಿದ್ದ ಒಂದು ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ‘ನಾನು ಶ್ರೀದೇವಿ ಅವರನ್ನು ಗೌರವಿಸುತ್ತೇನೆ. ಅವರ ನಟನೆ, ನಗು ಎಲ್ಲವೂ ಇಷ್ಟ. ಅವರು ದಪ್ಪ ತೊಡೆ ಹೊಂದಿದ್ದಾರೆ. ಇದರಿಂದ ಅವರು ಫೇಮಸ್ ಆದರು’ ಎಂದಿದ್ದರು. ಅವರ ಹೇಳಿಕೆಯನ್ನು ಅನೇಕರು ಟೀಕೆ ಮಾಡಿದ್ದರು.

ವೀರಪ್ಪನ್ ಸಿನಿಮಾ ಬಗ್ಗೆ

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ವೀರಪ್ಪನ್’ 2016ರಲ್ಲಿ ರಿಲೀಸ್ ಆಯಿತು. ಈ ಸಿನಿಮಾನ ಪತ್ರಕರ್ತೆ ಒಬ್ಬರು ಟೀಕೆ ಮಾಡಿದ್ದರು. ಇದನ್ನು ಆರ್​ಜಿವಿ ಸಹಿಸಿರಲಿಲ್ಲ. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು.

ಬೋನಿ ಕಪೂರ್ ಬಗ್ಗೆ ಟೀಕೆ

ರಾಮ್ ಗೋಪಾಲ್ ವರ್ಮಾ ಅವರು ಆಟೋಬಯೋಗ್ರಫಿ ಬರೆದಿದ್ದರು. ಇದರರಲ್ಲಿ ಒಂದು ಚಾಪ್ಟರ್​ನ ಶ್ರೀದೇವಿ ಅವರಿಗೆ ಮುಡಿಪಿಟ್ಟಿದ್ದರು. ‘ಇದು ಪ್ರೇಮ ಪತ್ರ. ನನಗೆ ಶ್ರೀದೇವಿ ಮೇಲೆ ಕ್ರಶ್ ಇದೆ. ನಾನು ಅವರ ಮೇಲೆ ಇರುವ ಭಾವನೆಯನ್ನು ಎಂಜಾಯ್ ಮಾಡುತ್ತೇನೆ. ಅದು ಡ್ರಗ್ ರೀತಿ’ ಎಂದಿದ್ದರು ಆರ್​ಜಿವಿ. ಅವರ ಪತಿ ಬೋನಿ ಕಪೂರ್​ನ ರಾಮ್ ಗೋಪಾಲ್ ವರ್ಮಾ ಟೀಕಿಸಿದ್ದರು. ‘ಬೋನಿ ಕಪೂರ್ ಅಡುಗೆ ಮನೆಯಲ್ಲಿ ಶ್ರೀದೇವಿ ಟೀ ಮಾಡೋದು ನೋಡಲು ಬೇಸರ ಆಗುತ್ತದೆ. ನಾನು ಅವರನ್ನು ಎಂದಿಗೂ ಕ್ಷಮಿಸಲ್ಲ. ಸ್ವರ್ಗದಿಂದ ಏಂಜಲ್​ನ ಅಡುಗೆ ಮನೆಯಲ್ಲಿ ಕೆಲಸ ಮಾಡಲು ಕರೆ ತಂದಿದ್ದಾರೆ’ ಎಂದು ಬರೆದಿದ್ದರು ಆರ್​ಜಿವಿ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

‘ರಾಮ್ ಗೋಪಾಲ್ ವರ್ಮಾ ಕಿ ಆಗ್’

‘ರಾಮ್ ಗೋಪಾಲ್ ವರ್ಮಾ ಕಿ ಆಗ್’ ಸಿನಿಮಾ ಸಾಕಷ್ಟು ಸುದ್ದಿ ಮಾಡಿದ ಸಿನಿಮಾ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹೀನಾಯ ಸೋಲು ಕಂಡಿತ್ತು. ಇದರ ಜೊತೆಗೆ ಕೋರ್ಟ್ 10 ಲಕ್ಷ ದಂಡ ವಿಧಿಸಿತ್ತು. ಇದು ‘ಶೋಲೆ’ ಸಿನಿಮಾದಿಂದ ಸ್ಫೂರ್ತಿ ಪಡೆದ ಸಿನಿಮಾ ಆಗಿತ್ತು. ಈ ಕಾರಣಕ್ಕೆ ‘ಶೋಲೆ’ ನಿರ್ದೇಶಕ ರಮೇಶ್ ಸಿಪ್ಪಿ ದೂರು ದಾಖಲು ಮಾಡಿದ್ದರು.

ಸ್ವಚ್ಛ ಭಾರತ ಜಾಹೀರಾತಿನ ಬಗ್ಗೆ ಟೀಕೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದ ‘ಸ್ಚಚ್ಛ ಭಾರತ್’ ಯೋಜನೆಯ ಬಗ್ಗೆ ಮಾಡಲಾದ ಜಾಹೀರಾತನ್ನು ಟೀಕೆ ಮಾಡಿ ರಾಮ್ ಗೋಪಾಲ್ ವರ್ಮಾ ಸುದ್ದಿ ಆಗಿದ್ದರು.

ರಜನಿ ಬಗ್ಗೆ ಟೀಕೆ

ರಾಮ್ ಗೋಪಾಲ್ ವರ್ಮಾ ಅವರು ರಜನಿಕಾಂತ್ ಅವರನ್ನು ಎಂದಿಗೂ ಮೆಚ್ಚಿಕೊಂಡಿಲ್ಲ. ಹಲವು ಬಾರಿ ಅವರು ಟೀಕೆ ಮಾಡಿದ್ದಿದೆ. ಒಮ್ಮೆ ರಜನಿಯನ್ನು ಅಮಿತಾಭ್​ಗೆ ಹೋಲಿಕೆ ಮಾಡಿದ್ದರು. ‘ರೋಬೊಟ್ ಚಿತ್ರವನ್ನು ರಜನಿ ಬದಲು ಅಮಿತಾಭ್ ಮಾಡಿದ್ದರೆ ಒಳ್ಳೆಯ ಬಿಸ್ನೆಸ್ ಮಾಡುತ್ತಿತ್ತು’ ಎಂದು ಹೇಳಿದ್ದರು ಆರ್​ಜಿವಿ. ಇದರಿಂದ ಟೀಕೆ ವ್ಯಕ್ತವಾಗಿತ್ತು. ಈಗಲೂ ರಜನಿಯನ್ನು ಅವರು ಟೀಕಿಸುತ್ತಾರೆ.

ಇದನ್ನೂ ಓದಿ: ಇನ್​ಸ್ಟಾಗ್ರಾಂ ರೀಲ್ಸ್​ ಮಾಡುತ್ತಿದ್ದಾಕೆಯ ನಾಯಕಿ ಮಾಡಿದ ರಾಮ್ ಗೋಪಾಲ್ ವರ್ಮಾ

 ಟೆರರ್ ಟೂರ್

2008ರ ಮುಂಬೈ ಬ್ಲಾಸ್ಟ್ ಬಳಿಕ ರಾಮ್ ಗೋಪಾಲ್ ವರ್ಮಾ ಅವರು ತಾಜ್ ಹಾಗೂ ಟ್ರಿಂಡೆಂಟ್ ಹೋಟೆಲ್​ಗೆ ಭೇಟಿ ನೀಡಿದ್ದರು. ಇದನ್ನು ಅನೇಕರು ಟೀಕೆ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ