ದಿವ್ಯಾ ಉರುಡುಗ ನನಗೆ ತಂಗಿ ಇದ್ದಂತೆ; ಎಲ್ಲರೆದುರು ಒಪ್ಪಿಕೊಂಡ ಪ್ರಶಾಂತ್​ ಸಂಬರಗಿ

ಟಾಸ್ಕ್​ ನಡೆಯುವಾಗ ನಿನ್ನ ಗರ್ಲ್​ಫ್ರೆಂಡ್​ ಮೇಲೆ ಕೈ ಹಾಕಿದ್ದಕ್ಕೆ ಬೇಜಾರು ಆಗಿರೋದಾ ಎಂದು ಅರವಿಂದ್​ ಅವರನ್ನು ಪ್ರಶ್ನೆ ಮಾಡಿದ್ದರು ಪ್ರಶಾಂತ್​. ಇದಕ್ಕೆ ಸಿಟ್ಟಾಗಿದ್ದ ದಿವ್ಯಾ, ಏಯ್​ ನೆಟ್ಟಗೆ ಮಾತನಾಡಿದ್ರೆ ಮಾತನಾಡುತ್ತೇನೆ ಎಂದು ಆವಾಜ್​ ಹಾಕಿದ್ದರು.

ದಿವ್ಯಾ ಉರುಡುಗ ನನಗೆ ತಂಗಿ ಇದ್ದಂತೆ; ಎಲ್ಲರೆದುರು ಒಪ್ಪಿಕೊಂಡ ಪ್ರಶಾಂತ್​ ಸಂಬರಗಿ
ಪ್ರಶಾಂತ್​ ಸಂಬರಗಿ-ದಿವ್ಯಾ ಉರುಡುಗ

Updated on: Apr 02, 2021 | 3:12 PM

ಪ್ರಶಾಂತ್​ ಸಂಬರಗಿ ಆರಂಭದ ದಿನಗಳಲ್ಲಿ ದಿವ್ಯಾ ಉರುಡುಗ ಜತೆ ಹೆಚ್ಚು ಆಪ್ತರಾಗಿದ್ದರು. ಇದನ್ನು ನೋಡಿದ ಪ್ರೇಕ್ಷಕರು ಗಾಸಿಪ್​ ಆರಂಭಿಸಿದ್ದರು. ಅವರ ಸಂಬಂಧ ಎಂತಹುದು ಎಂದು ಅನೇಕರು ಕೇಳಿಕೊಂಡಿದ್ದರು. ಆದರೆ, ಐದನೇ ವಾರಕ್ಕೆ ಇಬ್ಬರ ನಡುವೆ ಮುಚ್ಚಲಾರದಷ್ಟು ದೊಡ್ಡದಾದ ಕಂದಕ ಬಿದ್ದಿದೆ. ಮನೆಯಲ್ಲಿ ಇಬ್ಬರ ನಡುವೆ ದೊಡ್ಡ ರಾಮಾಯಣವೇ ನಡೆದು ಹೋಗಿದೆ.

ಟಾಸ್ಕ್​ ನಡೆಯುವಾಗ ನಿನ್ನ ಗರ್ಲ್​ಫ್ರೆಂಡ್​ ಮೇಲೆ ಕೈ ಹಾಕಿದ್ದಕ್ಕೆ ಬೇಜಾರು ಆಗಿರೋದಾ ಎಂದು ಅರವಿಂದ್​ ಅವರನ್ನು ಪ್ರಶ್ನೆ ಮಾಡಿದ್ದರು ಪ್ರಶಾಂತ್​. ಇದಕ್ಕೆ ಸಿಟ್ಟಾಗಿದ್ದ ದಿವ್ಯಾ, ಏಯ್​ ನೆಟ್ಟಗೆ ಮಾತನಾಡಿದ್ರೆ ಮಾತನಾಡುತ್ತೇನೆ. ನೀವು ಅರವಿಂದ್​ ಜತೆ ನನ್ನ ಹೆಸರನ್ನು ಏಕೆ ತಳುಕು ಹಾಕಿದ್ರಿ? ನಾನು ಅರವಿಂದ್​ ಗರ್ಲ್​ಫ್ರೆಂಡ್​ ಆಗಿರಬಹುದು, ತಂಗಿ ಆಗಿರಬಹುದು ಅಥವಾ ಹೆಂಡತೀನೂ ಆಗಿರಬಹುದು. ನೀವು ನನ್ನ ಹೆಸರನ್ನು ಮಧ್ಯೆ ತರುವ ಹಾಗೇ ಇಲ್ಲ ಎಂದು ಪ್ರಶಾಂತ್​ಗೆ ಹೇಳಿದರು.

ಆಗ ಮಾತನಾಡಿದ ಪ್ರಶಾಂತ್​, ನಾನೆಲ್ಲೂ ದಿವ್ಯಾ ಹೆಸರನ್ನೇ ಹೇಳಿಲ್ಲ. ಕಳ್ಳನ ಮನಸ್ಸು ಹುಳ್ಳುಳ್ಳಗೆ. ನಾನು ಹೇಳಿದ್ದರಲ್ಲಿ ತಪ್ಪೇನು ಇಲ್ಲ ಎಂದು ಸಮರ್ಥಿಸಿಕೊಂಡರು. ಇದಾದ ನಂತರ ಮತ್ತೊಮ್ಮೆ ಸಂಬರಗಿ ಜತೆ ದಿವ್ಯಾ ಉರುಡುಗ ಮಾತುಕತೆ ನಡೆಸಿದ್ದಾರೆ. ಆಗ ದಿವ್ಯಾ ಅವರನ್ನು ಹೇಗೆ ನೋಡುತ್ತಿದ್ದೇನೆ ಎನ್ನುವ ಬಗ್ಗೆ ಪ್ರಶಾಂತ್​ ಮಾತನಾಡಿದ್ದಾರೆ. ನಾನು ದಿವ್ಯಾ ಅವರನ್ನು ತಂಗಿಯಂತೆ ನೋಡುತ್ತಿದ್ದೇನೆ. ನನ್ನ ಬಗ್ಗೆ ಎಲ್ಲರೂ ತಪ್ಪಾಗಿ ಭಾವಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಆದಾಗ್ಯೂ ದಿವ್ಯಾ ಉರುಡುಗ ಸುಮ್ಮನಾಗಲಿಲ್ಲ. ನೀವು ನಿಜವಾಗಲೂ ನನ್ನನ್ನು ತಂಗಿಯಂತೆ  ನೋಡುತ್ತಿದ್ದರೆ ಖಂಡಿತವಾಗಿಯೂ ಈ ರೀತಿ ಮಾಡುತ್ತಲೇ ಇರಲಿಲ್ಲ. ಬೇರೆಯವರ ಜತೆ ನನ್ನ ಹೆಸರನ್ನು ಹೇಳಿ ಗೇಲಿ ಮಾಡುತ್ತಿರಲಿಲ್ಲ ಎಂದು ಖಡಕ್​ ಆಗಿ ಉತ್ತರಿಸಿದರು. ಆಗ ಪ್ರಶಾಂತ್​ ಸಂಬರಗಿಗೆ ಏನು ಉತ್ತರ ಹೇಳಬೇಕು ಎನ್ನುವುದೇ ಗೊತ್ತಾಗದೆ ತಡವರಿಸಿದರು.

ಇದನ್ನೂ ಓದಿ: ದಿವ್ಯಾ ಉರುಡುಗ ಸೆಳೆತದಲ್ಲಿ ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶವನ್ನೇ ಮರೆತರಾ ಅರವಿಂದ್?

 ದಿವ್ಯಾ ಉರುಡುಗ ಸೆಳೆತದಲ್ಲಿ ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶವನ್ನೇ ಮರೆತರಾ ಅರವಿಂದ್?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us