ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಹೀಗಾಗಿ, ಅವರಿಗೆ ಚಿಕಿತ್ಸೆ ನೀಡಲು ಕರೆದುಕೊಂಡು ಹೋಗಲಾಗಿದೆ. ಈಗ ಕೇಳಿ ಬರುತ್ತಿರುವ ಮಾತೇನೆಂದರೆ ದಿವ್ಯಾ ಹಿಂದಿರುಗಿ ಬಿಗ್ ಬಾಸ್ ಮನೆಗೆ ಬರುವುದಿಲ್ಲವಂತೆ. ಹೀಗೆಂದು ನಾವು ಹೇಳುತ್ತಿಲ್ಲ. ಅರವಿಂದ್ ಕೆ.ಪಿ. ಅವರೇ ಹೀಗೆ ಹೇಳಿಕೊಂಡಿದ್ದಾರೆ.
ದಿವ್ಯಾ ಸುರೇಶ್ಗೆ ಚಿಕಿತ್ಸೆ ನೀಡಲು ವೈದ್ಯರ ಬಳಿಗೆ ಕರೆದುಕೊಂಡು ಹೋಗಲಾಗಿದೆ. ಇದರಿಂದಾಗಿ ಅರವಿಂದ್ ಬೇಸರ ಮಾಡಿಕೊಂಡಿದ್ದಾರೆ. ಮೇ 6ರ ಎಪಿಸೋಡ್ನಲ್ಲಿ ಬಿಗ್ ಬಾಸ್ ಕಡೆಯಿಂದ ಇನ್ನೊಂದು ಆದೇಶ ಬಂದಿದೆ. ದಿವ್ಯಾ ಉರುಡುಗ ಅವರ ಸ್ಯೂಟ್ಕೇಸ್ ಪ್ಯಾಕ್ ಮಾಡಿ ಕೂಡಲೇ ಸ್ಟೋರ್ ರೂಮ್ಗೆ ತಂದು ಇರಿಸಿ ಎಂದು ಸೂಚಿಸಲಾಗಿದೆ. ಇದು ಮನೆಯವರಿಗೆ ಶಾಕ್ ನೀಡಿದೆ.
ಬಟ್ಟೆ ಪ್ಯಾಕ್ ಮಾಡಿ ತನ್ನಿ ಎಂದು ಹೇಳಿದ್ದನ್ನು ಮನೆಯವರಿಗೆ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅವರು ಮತ್ತೆ ಮನೆಗೆ ಬರೋದು ಅನುಮಾನ ಎನ್ನುವ ಮಾತು ಕೇಳಿ ಬಂದವು. ಇದು ಅರವಿಂದ್ಗೂ ಮನವರಿಕೆ ಆದಂತಿದೆ. ಚಕ್ರವರ್ತಿ ಚಂದ್ರಚೂಡ್ ಬಳಿ ಮಾತನಾಡುತ್ತಾ, ದಿವ್ಯಾ ಕಂಡೀಷನ್ ನೋಡಿದ್ರೆ ಅವರು ಮತ್ತೆ ಬರೋದು ಡೌಟ್ ಇದೆ ಎನ್ನುತ್ತಲೇ ಕಣ್ಣೀರಾದರು.
ಶುಭಾ ಮನೆಯಲ್ಲಿ ಅಳುತ್ತಲೇ ದಿನ ಕಳೆದಿದ್ದಾರೆ. ದಿವ್ಯಾ ಒಬ್ಬಳೇ ನನಗೆ ಅಕ್ಕಾ ಎಂದು ಕರೆದಿದ್ದು. ಮನೆ ತುಂಬಾನೇ ಸೈಲೆಂಟ್ ಆಗುತ್ತಿದೆ. ಈಗ ಮತ್ತೂ ಶಾಂತವಾದಂತೆ ಭಾಸವಾಗುತ್ತಿದೆ ಎಂದರು ಶುಭಾ. ಒಬ್ಬರನ್ನೊಬ್ಬರು ಪರಸ್ಪರ ಸಮಾಧಾನ ಮಾಡಿಕೊಳ್ಳಲು ಪ್ರಯತ್ನಿಸಿದರು.
ಈಗ ಅವರಿಗೆ ಟ್ರೀಟ್ಮೆಂಟ್ ಕೊಡ್ತಿದಾರೆ. ಅವರಿಗೆ ರೆಸ್ಟ್ ಮಾಡೋಕೆ ಹೇಳಿರಬಹುದು. ಒಂದು ವಾರ ಬಿಟ್ಟು ಬಿಗ್ ಬಾಸ್ ಮನೆಗೆ ಅವರು ಬಂದರೂ ಬರಬಹುದು ಎನ್ನುವ ಮಾತು ಕೂಡ ಬಿಗ್ ಬಾಸ್ ಮನೆಯಲ್ಲಿ ಕೇಳಿ ಬಂತು. ದಿವ್ಯಾ ಹೋದ ನಂತರದಲ್ಲಿ ಅರವಿಂದ್ ತುಂಬಾನೇ ಸೈಲೆಂಟ್ ಆಗಿದ್ದು ಎದ್ದು ಕಾಣುತ್ತಿದೆ.
ಇದನ್ನೂ ಒದಿ: ದಿವ್ಯಾ ಮಾಡಿದ ತಪ್ಪಿಗೆ ಮಂಜುಗೆ ಶಿಕ್ಷೆ; ಗಳಗಳನೆ ಅತ್ತ ಗೆಳತಿ
ಬಿಗ್ ಬಾಸ್ನಲ್ಲಿ ದಿವ್ಯಾ ಉರುಡುಗ ಲಗೇಜ್ ಪ್ಯಾಕ್; ಕಣ್ಣೀರು ಹಾಕುತ್ತಿರುವ ಅರವಿಂದ್
Published On - 7:17 am, Fri, 7 May 21