ಅಮೆರಿಕದಲ್ಲಿ ವಿದೇಶಿ ಸಿನಿಮಾಗೆ ಶೇ. 100 ಟ್ಯಾಕ್ಸ್; ಭಾರತೀಯ ಚಿತ್ರಗಳಿಗೆ ಶುರವಾಗಿದೆ ಆತಂಕ

ಅಮೆರಿಕದಲ್ಲಿ ವಿದೇಶಿ ಚಿತ್ರಗಳ ಮೇಲೆ ಶೇ. 100 ತೆರಿಗೆ ವಿಧಿಸಿ ಟ್ರಂಪ್ ಆದೇಶ ಹೊರಡಿಸಿದ್ದಾರೆ. ಹಾಲಿವುಡ್ ಉಳಿಸಲು ಈ ಕ್ರಮ ಎಂದು ಹೇಳಲಾಗಿದೆ. ಈ ನಿರ್ಧಾರದಿಂದ ಭಾರತೀಯ ಸಿನಿಮಾ ಉದ್ಯಮ ಆತಂಕಕ್ಕೀಡಾಗಿದೆ. ಇದರಿಂದ ಅಮೆರಿಕದಲ್ಲಿ ಭಾರತೀಯ ಚಿತ್ರಗಳ ಬಿಡುಗಡೆ ದುಬಾರಿಯಾಗಲಿದೆ .

ಅಮೆರಿಕದಲ್ಲಿ ವಿದೇಶಿ ಸಿನಿಮಾಗೆ ಶೇ. 100 ಟ್ಯಾಕ್ಸ್; ಭಾರತೀಯ ಚಿತ್ರಗಳಿಗೆ ಶುರವಾಗಿದೆ ಆತಂಕ
ಟ್ರಂಪ್

Updated on: May 05, 2025 | 1:00 PM

ಡೊನಾಲ್ಡ್ ಟ್ರಂಪ್ (Donald Trump) ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಈಗ ಅವರು ಹಾಲಿವುಡ್​ನ ಉಳಿಸಲು ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಅಮೆರಿಕದ ಹೊರಗೆ ನಿರ್ಮಾಣ ಆಗುವ ಎಲ್ಲಾ ಸಿನಿಮಾಗಳಿಗೆ ಶೇ.100 ತೆರಿಗೆ ವಿಧಿಸಲು ಡೊನಾಲ್ಡ್ ಟ್ರಂಪ್ ರೆಡಿ ಆಗಿದ್ದಾರೆ. ಅಷ್ಟೇ ಅಲ್ಲ, ಹಾಲಿವುಡ್ ಸಂಕಷ್ಟದಲ್ಲಿ ಇದ್ದು, ಅದನ್ನು ಉಳಿಸಲು ಈ ಕ್ರಮ ಕೈಗೊಂಡಿದ್ದಾಗಿ ಅವರು ಹೇಳಿದ್ದಾರೆ. ಅಂದರೆ, ಈಗ ಅಮೆರಿಕದಲ್ಲಿ ಭಾರತೀಯ ಸಿನಿಮಾಗಳನ್ನು ನೋಡಬೇಕು ಎಂದರೆ ಅದು ದುಬಾರಿ ಆಗಲಿದೆ.

‘ಅಮೆರಿಕದ ಹೊರಗೆ ತಯಾರಾಗುವ ಎಲ್ಲಾ ಚಿತ್ರಗಳ ಮೇಲೆ ಹೊಸ ಸುಂಕಗಳನ್ನು ವಿಧಿಸಲಾಗುತ್ತಿದೆ. ಅಮೆರಿಕದ ನಿರ್ಮಾಪಕರು ಮತ್ತು ಸ್ಟುಡಿಯೋಗಳು ವಿದೇಶದಲ್ಲಿ ಕೆಲಸ ಮಾಡುವ ಪ್ರವೃತ್ತಿಯಿಂದ ಹಾಲಿವುಡ್ ಹಾಳಾಗುತ್ತಿದೆ’ ಎಂದು ಟ್ರಂಪ್ ಅವರು ಅಮೆರಿಕದ ಶ್ವೇತ ಭವನದಲ್ಲಿ ಹೇಳಿದ್ದಾರೆ.

‘ತುಂಬಾನೇ ವೇಗವಾಗಿ ಅಮೆರಿಕದಲ್ಲಿ ಸಿನಿಮಾ ಉದ್ಯಮ ಸಾಯುತ್ತಿದೆ. ನಮ್ಮ ಚಲನಚಿತ್ರ ನಿರ್ಮಾಪಕರು ಮತ್ತು ಸ್ಟುಡಿಯೋಗಳನ್ನು ಅಮೆರಿಕದಿಂದ ದೂರ ಸೆಳೆಯಲು ಇತರ ದೇಶಗಳು ಎಲ್ಲಾ ರೀತಿಯ ಪ್ರೋತ್ಸಾಹಗಳನ್ನು ನೀಡುತ್ತಿವೆ. ಹಾಲಿವುಡ್ ಮತ್ತು ಅಮೆರಿಕದ ಇತರ ಹಲವು ಪ್ರದೇಶಗಳು ಧ್ವಂಸಗೊಳ್ಳುತ್ತಿವೆ. ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ
ಅಪಘಾತದ ಬಳಿಕ ಬದಲಾಯಿತು ನಾನಿ ಬದುಕು; ಅಂದು ಆಗಿದ್ದೇನು?
ಖ್ಯಾತ ನಿರ್ಮಾಪಕನ ಜೊತೆ ಪೋಸ್ ಕೊಟ್ಟ ಶ್ರೀಲೀಲಾ; ಕೇಳಿಬಂತು ಹೊಸ ಗಾಸಿಪ್
ಸಾರಾ ತೆಂಡೂಲ್ಕರ್​ಗೆ ಹೊಸ ಬಾಯ್​ಫ್ರೆಂಡ್; ಸ್ಟಾರ್ ನಟನ ಜೊತೆ ಡೇಟಿಂಗ್?

ಈಗಾಗಲೇ ‘ಟಾಕ್ಸಿಕ್’ ಸಿನಿಮಾನ ಕನ್ನಡದ ಜೊತೆಗೆ ಇಂಗ್ಲಿಷನ್​ನಲ್ಲೂ ಶೂಟ್ ಮಾಡಲಾಗುತ್ತಿದೆ. ಅಂದರೆ, ಅಮೆರಿಕದಲ್ಲಿ ಸಿನಿಮಾನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ. ಆದರೆ, ಈ ಹೊಸ ನಿಯಮದಿಂದ ಚಿತ್ರಕ್ಕೆ ತೊಂದರೆ ಆಗಬಹುದು.

ಇದನ್ನೂ ಓದಿ: ಮೊಬೈಲ್, ಕಂಪ್ಯೂಟರ್​ಗಳಿಗೆ ಸುಂಕದಿಂದ ವಿನಾಯಿತಿ ಘೋಷಿಸಿದ ಡೊನಾಲ್ಡ್ ಟ್ರಂಪ್

ಅನೇಕ ತೆಲುಗು ಸಿನಿಮಾಗಳು ಕೂಡ ಇದಕ್ಕೆ ಬಲಿಪಶು ಆಗುವ ಸಾಧ್ಯತೆ ಇದೆ. ತೆಲುಗು ಸಿನಿಮಾಗಳು ಉತ್ತರ ಅಮೆರಿಕದಲ್ಲಿ ದೊಡ್ಡ ಮಾರುಕಟ್ಟೆಯನ್ನು ಹೊಂದಿವೆ. ಈಗ ಟ್ರಂಪ್ ನಿರ್ಧಾರದಿಂದ ಚಿತ್ರಗಳು ದುಬಾರಿ ಆಗಲಿವೆ. ದುಬಾರಿ ಆದಾಗ ಜನರು ಸಿನಿಮಾ ವೀಕ್ಷಣೆ ಕಡಿಮೆ ಮಾಡಲಿದ್ದು, ಗಳಿಕೆ ಕಡಿಮೆ ಆಗಲಿದೆ. ಅಲ್ಲದೆ, ವಿದೇಶಿ ಹಂಚಿಕೆದಾರರು ಸಿನಿಮಾನ ತೆಗೆದುಕೊಳ್ಳಲು ಹಿಂದೇಟು ಹಾಕಲಿದ್ದಾರೆ. ಟ್ರಂಪ್ ತಂದ ಈ ಹೊಸ ನಿಯಮಕ್ಕೆ ಮುಂದಿನ ದಿನಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:58 pm, Mon, 5 May 25